ಕಾರಟಗಿಯಲ್ಲಿ ಮಕ್ಕಳ ಸಿದ್ಧ ಸಮಾಧಿ ಯೋಗ ಶಿಬಿರದ ಸತ್ಸಂಗ ಕಾರ್ಯಕ್ರಮ
ಕಾರಟಗಿ: ಪಟ್ಟಣದ ವಸುಂಧರ ನಗರದ ಬಸವಶ್ರೀ ನಿಲಯದಲ್ಲಿ ಭಾನುವಾರ ಮಕ್ಕಳ ಸಿದ್ಧ ಸಮಾಧಿ ಯೋಗ ಶಿಬಿರದ ಶಿಬಿರಾರ್ಥಿ ಮಕ್ಕಳಿಂದ ಸತ್ಸಂಗ ಕಾರ್ಯಕ್ರಮ ನಡೆಯಿತು.8ರಿಂದ 13 ವಯಸ್ಸಿನ ಚಿಣ್ಣರು ಪ್ರಾರ್ಥನೆ, ಶ್ಲೋಕಗಳು, ಗಾಯತ್ರಿ ಮಂತ್ರ, ಪ್ರಾಣಾಯಾಮ, ಧ್ಯಾನ, ಭಜನೆ, ಆಟ ಸಹಿತ ಇತರ ಸಾಧನೆಗಳನ್ನು ಮಾಡಿದರು. ಮಕ್ಕಳ ಸಿದ್ದ ಸಮಾಧಿ ಯೋಗ ಶಿಬಿರವನ್ನು ಉಮಾ ಮಹೇಶ ಗುರೂಜಿ ನಡೆಸಿದ

ಕಾರಟಗಿ: ಪಟ್ಟಣದ ವಸುಂಧರ ನಗರದ ಬಸವಶ್ರೀ ನಿಲಯದಲ್ಲಿ ಭಾನುವಾರ ಮಕ್ಕಳ ಸಿದ್ಧ ಸಮಾಧಿ ಯೋಗ ಶಿಬಿರದ ಶಿಬಿರಾರ್ಥಿ ಮಕ್ಕಳಿಂದ ಸತ್ಸಂಗ ಕಾರ್ಯಕ್ರಮ ನಡೆಯಿತು.8ರಿಂದ 13 ವಯಸ್ಸಿನ ಚಿಣ್ಣರು ಪ್ರಾರ್ಥನೆ, ಶ್ಲೋಕಗಳು, ಗಾಯತ್ರಿ ಮಂತ್ರ, ಪ್ರಾಣಾಯಾಮ, ಧ್ಯಾನ, ಭಜನೆ, ಆಟ ಸಹಿತ ಇತರ ಸಾಧನೆಗಳನ್ನು ಮಾಡಿದರು. ಮಕ್ಕಳ ಸಿದ್ದ ಸಮಾಧಿ ಯೋಗ ಶಿಬಿರವನ್ನು ಉಮಾ ಮಹೇಶ ಗುರೂಜಿ ನಡೆಸಿದ್ದರು. ಸಾಧಕರಾದ ಕೂಡ್ಲುರ ಬಸವರಾಜ್, ರಾಜೇಶ್ವರಿ ಕೂಡ್ಲೂರು ಸಹಿತ ಇತರರು ಇದ್ದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260714-35-66291328
Read the complete story at Prajavani