Explainer | ಅಮೆರಿಕ–ಇರಾನ್ ಮಧ್ಯೆ ಮತ್ತೆ ಸಂಘರ್ಷದ ಕಾರ್ಮೋಡ? ಕಾರಣಗಳೇನು..
ಅಮೆರಿಕ– ಇರಾನ್ ಉಭಯ ದೇಶಗಳ ನಡುವೆ ಸಹಿಯಾಗಿದ್ದ ತಾತ್ಕಾಲಿಕ ಕದನ ವಿರಾಮ ಒಪ್ಪಂದವು ಪ್ರಸ್ತುತ ಸಂಪೂರ್ಣವಾಗಿ ಹಳ್ಳಹಿಡಿದಿದೆ. ಉಭಯ ದೇಶಗಳು ಭೀಕರ ದಾಳಿಗಳಲ್ಲಿ ತೊಡಗಿದ್ದು, ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದಿದೆ. ಸೋಮವಾರವಷ್ಟೇ ಅಮೆರಿಕ ಇರಾನ್ನ ಹತ್ತಾರು ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮಳೆಗರೆದಿದ್ದರೆ, ಇರಾನ್ ಸಹ ಕುವೈತ್, ಜೋರ್ಡಾನ್ ಮತ್ತು ಬ

ಅಮೆರಿಕ– ಇರಾನ್ ಉಭಯ ದೇಶಗಳ ನಡುವೆ ಸಹಿಯಾಗಿದ್ದ ತಾತ್ಕಾಲಿಕ ಕದನ ವಿರಾಮ ಒಪ್ಪಂದವು ಪ್ರಸ್ತುತ ಸಂಪೂರ್ಣವಾಗಿ ಹಳ್ಳಹಿಡಿದಿದೆ. ಉಭಯ ದೇಶಗಳು ಭೀಕರ ದಾಳಿಗಳಲ್ಲಿ ತೊಡಗಿದ್ದು, ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದಿದೆ. ಸೋಮವಾರವಷ್ಟೇ ಅಮೆರಿಕ ಇರಾನ್ನ ಹತ್ತಾರು ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮಳೆಗರೆದಿದ್ದರೆ, ಇರಾನ್ ಸಹ ಕುವೈತ್, ಜೋರ್ಡಾನ್ ಮತ್ತು ಬರಹೇನ್ನಲ್ಲಿರುವ ಅಮೆರಿಕ ಮಿಲಿಟರಿ ನೆಲೆಗಳ ಮೇಲೆ ಪ್ರತೀಕಾರದ ದಾಳಿ ನಡೆಸಿದೆ.ಉಭಯ ದೇಶಗಳ ಮಧ್ಯೆ ಮತ್ತೆ ಸಂಘರ್ಷಕ್ಕೆ ಕಾರಣಗಳೇನು? 1. ಒಪ್ಪಂದ ಮುರಿದುಬಿದ್ದಿದ್ದು..ಕಳೆದ ತಿಂಗಳು ಸಹಿಯಾಗಿದ್ದ ತಿಳುವಳಿಕಾ ಒಪ್ಪಂದ ಪ್ರಕಾರ, ಇರಾನ್ ಜಾಗತಿಕವಾಗಿ ಅತ್ಯಂತ ಪ್ರಮುಖವಾದ 'ಹೊರ್ಮುಜ್ ಜಲಸಂಧಿ'ಯನ್ನು ಮುಕ್ತವಾಗಿಡಲು ಒಪ್ಪಿಕೊಂಡಿತ್ತು. ಆದರೆ, ಅಮೆರಿಕದ ರಕ್ಷಣಾ ಪ್ರಧಾನ ಕಚೇರಿ ಇರಾನ್ನ ಬಂದರುಗಳ ಮೇಲಿನ ದಿಗ್ಬಂಧನವನ್ನು ತೆರವುಗೊಳಿಸಲಿಲ್ಲ. ಇದಲ್ಲದೆ, ಇರಾನ್ನ ಪರಮಾಣು ಕಾರ್ಯಕ್ರಮದ ನೆಪವೊಡ್ಡಿ ಅಮೆರಿಕ 140ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉಡಾಯಿಸುವ ಮೂಲಕ ಕದನ ವಿರಾಮವನ್ನು ಮುರಿದಿದೆಎಲ್ ನಿನೊದಿಂದ ಮಳೆ, ತಾಪಮಾನದಲ್ಲಿ ಬದಲಾವಣೆ; ಮೊದಲೇ ಮಾಹಿತಿ ನೀಡುವ ಆ್ಯಪ್ಗಳಿವುಭುಜದ ಶಸ್ತ್ರಚಿಕಿತ್ಸೆಗೆ ಒಳಗಾದ ಪವನ್ ಕಲ್ಯಾಣ್: ಪತ್ನಿ ಅನ್ನಾ ಕೊನಿಡೇಲಾ ಭಾವುಕ 2. ಟ್ರಂಪ್ ಅವರ 'ಮರ್ಕ್ಯುರಿಯಲ್'(ಕ್ಷಣಕ್ಕೊಂದು ತೀರ್ಮಾನ) ನೀತಿ ಡೊನಾಲ್ಡ್ ಟ್ರಂಪ್ ಅವರ ನೀತಿಯು ಅವರ ಮಿತ್ರರಾಷ್ಟ್ರಗಳು ಸೇರಿದಂತೆ ಇಡೀ ಜಗತ್ತನ್ನು ಗೊಂದಲಕ್ಕೀಡು ಮಾಡಿದೆ. ಅವರು ದ್ವಂದ್ವ ನೀತಿಯನ್ನು ಹೊಂದಿದ್ದಾರೆ.ಇರಾನ್ನ ಇಡೀ ನಾಗರಿಕತೆಯನ್ನೇ ಅಳಿಸಿ ಹಾಕುತ್ತೇನೆ, ಅವರ ವಾಯುಪಡೆ, ನೌಕಾಪಡೆ ಧ್ವಂಸಗೊಂಡಿದೆ ಎಂದು ಬೆದರಿಸುತ್ತಾರೆ. ವೆನೆಜುವೆಲಾದ ಮಾದರಿಯಲ್ಲೇ ಇರಾನ್ನ ಖಾರ್ಗ್ ದ್ವೀಪ ಮತ್ತು ತೈಲ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಅಮೆರಿಕದ ಹಿಡಿತಕ್ಕೆ ತೆಗೆದುಕೊಳ್ಳುವುದಾಗಿ ಸಾಮಾಜಿಕ ಜಾಲತಾಣ ಟ್ರೂತ್ ಸೋಶಿಯಲ್ನಲ್ಲಿ ಎಚ್ಚರಿಸಿದ್ದಾರೆ. ಸಾವಿರಾರು ಕ್ಷಿಪಣಿಗಳು 'ಲಾಕ್ ಅಂಡ್ ಲೋಡೆಡ್' ಸ್ಥಿತಿಯಲ್ಲಿವೆ ಎಂದು ಯುದ್ಧದ ಭೀತಿ ಹುಟ್ಟಿಸುತ್ತಾರೆ.ಮತ್ತೊಂದೆಡೆ ಈ ಭೀಕರ ಬೆದರಿಕೆಗಳ ಬೆನ್ನಲ್ಲೇ, ಶೀಘ್ರದಲ್ಲೇ ಶಾಂತಿ ಒಪ್ಪಂದಕ್ಕೆ ಸಹಿಯಾಗಲಿದೆ. ನಾವು ಮಾತುಕತೆಗೆ ಸಿದ್ಧ‘ ಎಂದು ಶಾಂತಿಯ ರಾಗ ಹಾಡುತ್ತಾರೆ.ಮೊಜ್ತಬಾ ಖಮೇನಿ ಬದುಕಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಟ್ರಂಪ್ಇರಾನ್ ನೌಕಾ ನೆಲೆಗಳ ಮೇಲೆ ಡ್ರೋನ್ ದಾಳಿ: ವಿಡಿಯೊ ಹಂಚಿಕೊಂಡ ಅಮೆರಿಕ 3. ಟ್ರಂಪ್ ಅವರ ನೈಜ ಉದ್ದೇಶವೇನು? ಇಸ್ರೇಲ್ ಹಿತಾಸಕ್ತಿಯೋ ಅಥವಾ ಒತ್ತಡದ ತಂತ್ರವೋ?ವಿಶ್ಲೇಷಕರ ಪ್ರಕಾರ, ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಅಪೂರ್ಣ ಕೆಲಸವನ್ನು ಮುಗಿಸಲು (ಇರಾನ್ ಅನ್ನು ಸಂಪೂರ್ಣ ನಾಶ ಮಾಡಲು) ಹೊರಟಿಲ್ಲ. ಬದಲಿಗೆ, ಇದು ಅವರ 'ಗರಿಷ್ಠ ಒತ್ತಡದ ತಂತ್ರ. ಇರಾನ್ ಮೇಲೆ ತೀವ್ರ ಮಿಲಿಟರಿ ಒತ್ತಡ ಹೇರಿ, ಆ ದೇಶ ಸಂಪೂರ್ಣವಾಗಿ ಶರಣಾಗುವಂತೆ ಮಾಡುವುದು. ತಮಗೆ ಬೇಕಾದ ಎಲ್ಲಾ ಕಠಿಣ ಷರತ್ತುಗಳನ್ನು ಒಳಗೊಂಡ ಶಾಂತಿ ಒಪ್ಪಂದಕ್ಕೆ ಇರಾನ್ ಬಲವಂತವಾಗಿ ಸಹಿ ಹಾಕುವಂತೆ ಮಾಡುವುದು ಟ್ರಂಪ್ ಆಟದ ಹಿಂದಿನ ತಂತ್ರವಾಗಿದೆ. ಇಸ್ರೇಲ್ ಮೇಲೆ ಇರಾನ್ ಹತ್ಯೆಯ ಸಂಚು ರೂಪಿಸಿದೆ ಎಂಬ ಗುಪ್ತಚರ ಮಾಹಿತಿ ನೀಡಿದ್ದನ್ನೂ ಟ್ರಂಪ್ ತಮ್ಮ ದಾಳಿಗೆ ದಾಳವಾಗಿ ಬಳಸಿಕೊಂಡಿದ್ದಾರೆ.4. ಹೊರ್ಮುಜ್ ಜಲಸಂಧಿಯ ನಿಯಂತ್ರಣ *ಹೊರ್ಮುಜ್ ಜಲಸಂಧಿಯ ನಿಯಂತ್ರಣ: ಜಗತ್ತಿನ ಒಟ್ಟು ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಐದನೇ ಒಂದು ಭಾಗ ಈ ಕಿರಿದಾದ ಜಲಮಾರ್ಗದ ಮೂಲಕವೇ ಸಾಗಬೇಕು. ಇದರ ಮೇಲಿನ ಹಿಡಿತ ಯಾರಿಗೆ ಎಂಬುದು ದೊಡ್ಡ ಪ್ರಶ್ನೆ.*300 ಬಿಲಿಯನ್ ಡಾಲರ್ ಪರಿಹಾರ: ಯುದ್ಧದ ನಷ್ಟ ಪರಿಹಾರದ ಮೊತ್ತದ ವಿಚಾರದಲ್ಲಿ ಉಭಯ ದೇಶಗಳ ನಡುವೆ ಒಮ್ಮತ ಮೂಡುತ್ತಿಲ್ಲ.*ಇರಾನ್ನ ಮೊಂಡುತನ: ಅಮೆರಿಕ ಬೆದರಿಕೆ ಹಾಕಿದಾಗಲೆಲ್ಲ ಇರಾನ್ ಶರಣಾಗುವ ಬದಲು, ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡುವ ಮೂಲಕ ಅಮೆರಿಕದ ಮಿತ್ರರಾಷ್ಟ್ರಗಳ (ಯುಎಇ, ಬರಹೇನ್ ಇತ್ಯಾದಿ) ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿ ತಿರುಗೇಟು ನೀಡುತ್ತಿದೆ.ಯುಎಇಯ 2 ತೈಲ ಟ್ಯಾಂಕರ್ಗಳ ಮೇಲೆ ಇರಾನ್ ದಾಳಿ: ಭಾರತೀಯ ಸಾವು, 6 ಮಂದಿಗೆ ಗಾಯಫ್ಯಾಕ್ಟ್ ಚೆಕ್ | ತಂದೆಯ ಮರ್ಮಾಂಗ ಕತ್ತರಿಸಿದ ಪುತ್ರಿಯರು: ಇದು ಸುಳ್ಳು ಸುದ್ದಿ ಜಾಗತಿಕ ಆರ್ಥಿಕತೆಯ ಮೇಲೆ ಇದರ ಪರಿಣಾಮವೇನು?ಉಭಯ ದೇಶಗಳ ನಡುವಿನ ಈ ಜಿದ್ದಾಜಿದ್ದಿನಿಂದಾಗಿ ಜಾಗತಿಕ ತೈಲ ಮಾರುಕಟ್ಟೆ ತಲ್ಲಣಗೊಂಡಿದೆ. ಓಮಾನ್ ಕರಾವಳಿಯಲ್ಲಿ ಹಡಗುಗಳಿಗೆ ಬೆಂಕಿ ಹಚ್ಚಲಾಗುತ್ತಿದ್ದು, ಭಾರತೀಯ ಮೂಲದ ನಾವಿಕರು ಸೇರಿದಂತೆ ಜಾಗತಿಕ ಕಾರ್ಮಿಕರ ಜೀವಕ್ಕೆ ಕುತ್ತು ಬಂದಿದೆ. ವಿಶ್ಲೇಷಕರ ಪ್ರಕಾರ, ಇರಾನ್ ಅಮೆರಿಕದ ಒತ್ತಡಕ್ಕೆ ಮಣಿಯದಿದ್ದಾಗ, ಟ್ರಂಪ್ ಸದ್ಯದಲ್ಲೇ ತಮ್ಮ ನಿಲುವನ್ನು ಸಡಿಲಗೊಳಿಸಿ ಮತ್ತೆ ಮಾತುಕತೆಯ ಪ್ರಸ್ತಾಪ ಮುಂದಿಡಲಿದ್ದಾರೆ. ಆದರೆ ಅಲ್ಲಿಯವರೆಗೆ ಜಗತ್ತು ಆರ್ಥಿಕ ನಷ್ಟವನ್ನು ಅನುಭವಿಸುವುದು ಅನಿವಾರ್ಯವಾಗಿದೆ. ಆಧಾರ; ಡಿಎನ್ಎ ವೆಬ್ಸೈಟ್