ಮೊಜ್ತಬಾ ಖಮೇನಿ ಬದುಕಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಟ್ರಂಪ್
ವಾಷಿಂಗ್ಟನ್: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಗಳಿಂದಾಗಿ ಇರಾನ್ನ ಮಿಲಿಟರಿ ಶಕ್ತಿ ಸಂಪೂರ್ಣವಾಗಿ ಕುಸಿದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಫಾಕ್ಸ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ದಾಳಿಯಲ್ಲಿ ಇರಾನ್ನ ಪ್ರಮುಖ ಸೇನಾ ಕಮಾಂಡರ್ಗಳು ಹತರಾಗಿದ್ದಾರೆ ಎಂದು ತಿಳಿಸಿದ್ದಾರೆ.ಇರಾನ್ ಬಳಿ ಈಗ ನೌಕಾ
ವಾಷಿಂಗ್ಟನ್: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಗಳಿಂದಾಗಿ ಇರಾನ್ನ ಮಿಲಿಟರಿ ಶಕ್ತಿ ಸಂಪೂರ್ಣವಾಗಿ ಕುಸಿದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಫಾಕ್ಸ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ದಾಳಿಯಲ್ಲಿ ಇರಾನ್ನ ಪ್ರಮುಖ ಸೇನಾ ಕಮಾಂಡರ್ಗಳು ಹತರಾಗಿದ್ದಾರೆ ಎಂದು ತಿಳಿಸಿದ್ದಾರೆ.ಇರಾನ್ ಬಳಿ ಈಗ ನೌಕಾಪಡೆ ಅಥವಾ ವಾಯುಪಡೆ ಉಳಿದಿಲ್ಲ. ಅವರ ವಾಯು ರಕ್ಷಣಾ ವ್ಯವಸ್ಥೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಅವರ ಅತ್ಯುತ್ತಮ ನಾಯಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆ ಸ್ಮರಿಸಿದ ರೈತ: ಮನೆಗೆ ಎಂ.ಬಿ.ಪಾಟೀಲ ಹೆಸರುಶರಾವತಿ ಪಂಪ್ಡ್ ಸ್ಟೋರೇಜ್ ಅನುಮತಿಗೆ ರಹದಾರಿ: ನಿಯಾಸ್ ಶಿಫಾರಸು ಫೆಬ್ರುವರಿ 28 ರಂದು ನಡೆದ ದಾಳಿಯಲ್ಲಿ ಇರಾನ್ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದರು. ಉತ್ತರಾಧಿಕಾರಿಯಾಗಿದ್ದ ಅವರ ಪುತ್ರ ಮೊಜ್ತಬಾ ಖಮೇನಿ ಅವರ ಆರೋಗ್ಯದ ಸ್ಥಿತಿಯೂ ಗಂಭೀರವಾಗಿದ್ದು, ಶೇ 90ರಷ್ಟು ಇಲ್ಲದಂತಾಗಿದ್ದಾರೆ ಎಂದು ಟ್ರಂಪ್ ಮಾರ್ಮಿಕವಾಗಿ ನುಡಿದಿದ್ದಾರೆ.ತಂದೆಯ ಅಂತ್ಯಕ್ರಿಯೆಯಲ್ಲೂ ಕಾಣಿಸಿಕೊಳ್ಳದ ಮೊಜ್ತಾಬಾ, ಫೆಬ್ರುವರಿ 28ರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಅವರ ಬಗ್ಗೆ ಯಾವುದೇ ಸುಳಿವು ಇಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಹೊರ್ಮುಜ್ ಜಲಸಂಧಿಯಲ್ಲಿ ಹೆಚ್ಚಿದ ಉದ್ವಿಗ್ನತೆಕೆಲವು ತಿಂಗಳುಗಳ ಕದನ ವಿರಾಮದ ನಂತರ ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಸಂಘರ್ಷ ಆರಂಭವಾಗಿದೆ. ಇರಾನ್ ಮೇಲಿನ ಮಿಲಿಟರಿ ಕಾರ್ಯಾಚರಣೆಯನ್ನು ಪುನರಾರಂಭಿಸಿರುವುದಾಗಿ ಅಧ್ಯಕ್ಷ ಟ್ರಂಪ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಜಾಗತಿಕ ನೌಕಾಯಾನ ಮುಕ್ತ ನೀತಿಗೆ ವಿರುದ್ಧವಾಗಿ, ಇನ್ನು ಮುಂದೆ ಇತರ ದೇಶಗಳ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಅಮೆರಿಕ ಶುಲ್ಕ ವಿಧಿಸಲಿದೆ ಎಂಬ ಸುಳಿವನ್ನು ಟ್ರಂಪ್ ನೀಡಿದ್ದಾರೆ.ಜಾನಕಿ ಉಸಿರಲ್ಲಿ ಉಸಿರಾದ ಮೈಸೂರು: ಅಭಿಮಾನಕ್ಕಾಗಿ ಇಲ್ಲಿಯೇ ಉಳಿದಿದ್ದ ಗಾನಕೋಗಿಲೆಇರಾನ್ ನೌಕಾ ನೆಲೆಗಳ ಮೇಲೆ ಡ್ರೋನ್ ದಾಳಿ: ವಿಡಿಯೊ ಹಂಚಿಕೊಂಡ ಅಮೆರಿಕ