ಸರ್ಕಾರಿ ಅಧಿಕಾರಿಗಳು ಸೇರಿ 11 ಮಂದಿ ಬಂಧನ
ಬೆಂಗಳೂರು: ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ಗೆ ಸೇರಿದ ₹100 ಕೋಟಿ ಮೌಲ್ಯದ ಆರು ಎಕರೆ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ಕಬಳಿಸಿದ್ದ ಪ್ರಕರಣದಲ್ಲಿ ಆರು ಸರ್ಕಾರಿ ಅಧಿಕಾರಿಗಳು, ರೌಡಿಶೀಟರ್ ಸೇರಿ 11 ಆರೋಪಿಗಳನ್ನು ನೈರುತ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಬೇಗೂರು ನಾಡಕಚೇರಿಯ ಉಪ ತಹಶೀಲ್ದಾರ್ ಎನ್.ದೀಪಕ್ (46), ಕೆಂಗೇರಿ ನಾಡಕಚೇರಿಯ ಉಪ ತಹಶ

ಬೆಂಗಳೂರು: ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ಗೆ ಸೇರಿದ ₹100 ಕೋಟಿ ಮೌಲ್ಯದ ಆರು ಎಕರೆ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ಕಬಳಿಸಿದ್ದ ಪ್ರಕರಣದಲ್ಲಿ ಆರು ಸರ್ಕಾರಿ ಅಧಿಕಾರಿಗಳು, ರೌಡಿಶೀಟರ್ ಸೇರಿ 11 ಆರೋಪಿಗಳನ್ನು ನೈರುತ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಬೇಗೂರು ನಾಡಕಚೇರಿಯ ಉಪ ತಹಶೀಲ್ದಾರ್ ಎನ್.ದೀಪಕ್ (46), ಕೆಂಗೇರಿ ನಾಡಕಚೇರಿಯ ಉಪ ತಹಶೀಲ್ದಾರ್ (ಪ್ರಸ್ತುತ ಸಿಟಿ ಸರ್ಕಲ್) ಎಂ.ಪಿ.ರವಿ (54), ರಾಮೋಹಳ್ಳಿ ವೃತ್ತದ ರಾಜಸ್ವ ನಿರೀಕ್ಷಕ ಎ.ಸಿ.ಅರುಣ್ ಕುಮಾರ್ (52), ಬೇಗೂರು ವೃತ್ತದ ರಾಜಸ್ವ ನಿರೀಕ್ಷಕ ಎಂ.ಕಿರಣ್ ಕುಮಾರ್ (41), ಬೇಗೂರು ಗ್ರಾಮ ಆಡಳಿತಾಧಿಕಾರಿ ಕೆ.ಎಸ್. ಶಿವಪ್ರಸಾದ್ (59), ಕುಂಬಳಗೋಡು ಗ್ರಾಮ ಆಡಳಿತಾಧಿಕಾರಿ ಎಂ.ಸತೀಶ್ ಕುಮಾರ್ (51), ಬೇಗೂರು ನಿವಾಸಿಗಳಾದ ಎ.ಫ್ರಾನ್ಸಿಸ್ (60), ಜೋಸ್ಪೆನ್ (54) ಹಾಗೂ ಆರೋಗ್ಯಸ್ವಾಮಿ (43), ಕೆಂಗೇರಿಯ ನಿವಾಸಿ ಎಂ.ಶ್ರೀನಿವಾಸ್ (40), ಲಗ್ಗೆರೆಯ ನರೇಂದ್ರಕುಮಾರ್ (42) ಬಂಧಿತರು.11 ಮಂದಿಯನ್ನೂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಆರೋಪಿ ಗಳನ್ನು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸ ಲಾಗಿದೆ ಎಂದು ಪೊಲೀಸರು ಹೇಳಿದರು.ನಕಲಿ ದಾಖಲೆಗಳನ್ನು ಸೃಷ್ಟಿಸಲು ಹಾಗೂ ಅಕ್ರಮವಾಗಿ ಖಾತೆ ಮಾಡಿಕೊಡಲು ನೆರವು ನೀಡಿದ ಇತರೆ ಆರೋಪಿಗಳಾದ ನರೇಶ್ಗೌಡ, ಕಂದಾಯ ಇಲಾಖೆ ಅಧಿಕಾರಿಗಳಾದ ಶ್ರೀಕಾಂತ್, ಮಂಜುನಾಥ್, ರಾಘವೇಂದ್ರ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ಗೆ ಸೇರಿದ 45 ಎಕರೆ ಜಮೀನು ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿ ಕಂಬೀಪುರ ಗ್ರಾಮದ ಸರ್ವೆ ನಂ. 43ರಲ್ಲಿ ಇದೆ. ಆ ಜಮೀನಿನ ಪೈಕಿ ₹100 ಕೋಟಿ ಮೌಲ್ಯದ ಆರು ಎಕರೆ ಜಮೀನನ್ನು ಆರೋಪಿಗಳು ಕಬಳಿಸಿದ್ದರು. ಆದಿಚುಂಚನಗಿರಿಯ ಶಿಕ್ಷಣ ಟ್ರಸ್ಟ್ನ ಕಾರ್ಯದರ್ಶಿ ಕುಂಬಳ ಗೋಡು ಠಾಣೆಗೆ ದೂರು ನೀಡಿದ್ದರು. ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದ ಕುಂಬಳಗೋಡು ಠಾಣೆಯ ಪೊಲೀಸರು, ಮುಂದಿನ ತನಿಖೆಗಾಗಿ ಕೆಂಗೇರಿ ಠಾಣೆಗೆ ಪ್ರಕರಣ ವನ್ನು ವರ್ಗಾವಣೆ ಮಾಡಿದ್ದರು. ಬಳಿಕ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ದ್ದಾರೆ ಎಂದು ಮೂಲಗಳು ಹೇಳಿವೆ.ಅಧಿಕಾರಿಗಳೊಂದಿಗೆ ಸೇರಿ ಕೃತ್ಯ: ಆರೋಪಿಗಳು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸೇರಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ಆರೋಗ್ಯಸ್ವಾಮಿ ಬಿನ್ ಅಂಥೋಣಿಗೆ 1960–61ರಲ್ಲಿ ಸೈನಿಕರ ಕೋಟಾದಡಿ ಸರ್ವೆ ನಂ. 43ರಲ್ಲಿ 6 ಎಕರೆ ಜಮೀನು ಮಂಜೂರಾಗಿದ್ದು, ತಾನು ಆರೋಗ್ಯಸ್ವಾಮಿ ಅವರ ಪುತ್ರ/ ವಾರಸುದಾರನಂತೆ ನಕಲಿ ವಂಶವೃಕ್ಷ, ಮರಣ ಪ್ರಮಾಣ ಪತ್ರ, ನಕಲಿ ಸಾಗುವಳಿ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳನ್ನು ಫ್ರಾನ್ಸಿಸ್ ಸೃಷ್ಟಿಸಿಕೊಂಡು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಆರೋಗ್ಯ ಸ್ವಾಮಿಎಂ. ಕಿರಣ್ ಕುಮಾರ್ಎಂ.ಶ್ರೀನಿವಾಸ್ಎಂ.ಸತೀಶ್ ಕುಮಾರ್ಎನ್.ದೀಪಕ್ಕೆ.ಎಸ್. ಶಿವ ಪ್ರಸಾದ್ಜೋಸ್ಪೆನ್ನರೇಂದ್ರ ಕುಮಾರ್ಫ್ರಾನ್ಸಿಸ್ರವಿಮೂಲ ಮಾಲೀಕರ ಪತ್ತೆಗೆ ರುದ್ರಭೂಮಿಯಲ್ಲಿ ಹುಡುಕಾಟಕೆಂಗೇರಿ ಹೋಬಳಿಯ ಕಂಬೀಪುರದಲ್ಲಿ ಒಟ್ಟು 45 ಎಕರೆ ಜಮೀನನ್ನು 30 ವರ್ಷಗಳ ಹಿಂದೆ ಭಕ್ತರು ಕಾಣಿಕೆಯಾಗಿ ಮಠಕ್ಕೆ ನೀಡಿದ್ದರು. ಈ ಪೈಕಿ ಆರು ಎಕರೆ ಜಮೀನನ್ನು ಕಬಳಿಸಲು ನೆಲಮಂಗಲದ ನರೇಶ್ ಗೌಡ ಮತ್ತು ಮಧ್ಯವರ್ತಿ ಆರೋಗ್ಯಸ್ವಾಮಿ ಸಂಚು ರೂಪಿಸಿದ್ದರು. ಮಠಕ್ಕೆ ನೀಡಿದ್ದ ಜಮೀನಿನ ಮೂಲ ಮಾಲೀಕನ ಹೆಸರು ಪತ್ತೆಗೆ ಆರೋಪಿಗಳು ಸ್ಮಶಾನದಲ್ಲಿ ಹುಡುಕಾಟ ನಡೆಸಿದ್ದರು. ಕೊನೆಗೆ ಸಮಾಧಿಯ ಮೇಲಿದ್ದ ಹೆಸರು ಪತ್ತೆ ಮಾಡಿದ್ದರು. ಆ ಸಮಾಧಿಯ ಮೇಲಿದ್ದ ಹೆಸರಿನ ಆಧಾರದ ಮೇಲೆ ಕುಟುಂಬ ವೊಂದನ್ನು ಸಂಪರ್ಕಿಸಿದ್ದರು. ಆಗ ಬೇಗೂರು ಪೊಲೀಸ್ ಠಾಣೆಯ ರೌಡಿ ಶೀಟರ್ ಫ್ರಾನ್ಸಿಸ್ ಸಿಕ್ಕಿದ್ದರು. ಫ್ರಾನ್ಸಿಸ್ ತಂದೆಯ ಹೆಸರು ಹಾಗೂ ಮಠದ ಜಮೀನಿನ ಮೂಲ ಮಾಲೀಕನ ಹೆಸರು ವಯಸ್ಸು ಹೊಂದಾಣಿಕೆ ಆಗಿದ್ದನ್ನೇ ಬಂಡವಾಳ ಮಾಡಿಕೊಂಡಿದ್ದ ನರೇಶ್ ಗೌಡ ಹಾಗೂ ಸಹಚರರು ಫ್ರಾನ್ಸಿಸ್ ಹಾಗೂ ಜೋಸ್ಪೆನ್ ಇಬ್ಬರೂ ಅಣ್ಣ– ತಂಗಿ ಎಂದು ಸುಳ್ಳು ವಂಶವೃಕ್ಷ ಸೃಷ್ಟಿಸಿದ್ದರು ಎಂದು ಪೊಲೀಸರು ಹೇಳಿದರು. ಹಣ ಪಡೆದು ಅಧಿಕಾರಿಗಳ ಕೃತ್ಯಈ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಡಲು ಆರು ಮಂದಿ ಸರ್ಕಾರಿ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದರು ಎಂದು ಪೊಲೀಸರು ಹೇಳಿದರು. ಬೇಗೂರು ಗ್ರಾಮ ಆಡಳಿತಾಧಿಕಾರಿ ಕೆ.ಎಸ್.ಶಿವಪ್ರಸಾದ್ ಬೇಗೂರು ರಾಜಸ್ವ ನಿರೀಕ್ಷಕ ಎಂ.ಕಿರಣ್ಕುಮಾರ್ ಹಾಗೂ ಉಪ ತಹಶೀಲ್ದಾರ್ ದೀಪಕ್ ನಕಲಿ ದಾಖಲೆ ಪತ್ರ ಮಾಡಿಕೊಟ್ಟಿದ್ದರು. ಕೆಂಗೇರಿ ಗ್ರಾಮ ಆಡಳಿತಾಧಿಕಾರಿ ಸತೀಶ್ ಕುಮಾರ್ ರಾಮೋಹಳ್ಳಿಯ ರಾಜಸ್ವ ನಿರೀಕ್ಷಕ ಎ.ಸಿ.ಅರುಣ್ ಕುಮಾರ್ ಸೇರಿ ಇತರೆ ಅಧಿಕಾರಿಗಳಿಗೆ ಆರೋಪಿಗಳು ಸಲ್ಲಿಕೆ ಮಾಡಿರುವುದು ನಕಲಿ ಪ್ರಮಾಣ ಪತ್ರ ಎಂಬುದು ಗೊತ್ತಿದ್ದರೂ ಖಾತೆ ಮಾಡಿಕೊಟ್ಟಿದ್ದರು. ಆಸ್ತಿ ಪತ್ರಗಳು ಕೈ ಸೇರಿದ ತಕ್ಷಣವೇ ಆರೋಪಿಗಳು ಆ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು ಎಂದು ಪೊಲೀಸರು ಹೇಳಿದರು.