ರಾಜೀನಾಮೆ ನೀಡುವುದಿಲ್ಲ: ರಾಮಮಂದಿರ ಟ್ರಸ್ಟ್ ಖಜಾಂಚಿ
ಪುಣೆ: ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡುವುದಿಲ್ಲ ಎಂದು ಅಯೋಧ್ಯೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಖಜಾಂಚಿ ಗೋವಿಂದ ದೇವ್ ಗಿರಿ ಮಹಾರಾಜ್ ಮಂಗಳವಾರ ಹೇಳಿದ್ದಾರೆ. ರಾಮಮಂದಿರದ ಮೇಲ್ವಿಚಾರಣೆಯಲ್ಲಿ ಲೋಪಗಳಾಗಿವೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಆದರೆ, ವೈಯಕ್ತಿಕವಾಗಿ ತಾವು ತಪ್ಪಿತಸ್ಥನಲ್ಲ. ಹಾಗಾಗಿ ರಾಜೀನ

ಪುಣೆ: ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡುವುದಿಲ್ಲ ಎಂದು ಅಯೋಧ್ಯೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಖಜಾಂಚಿ ಗೋವಿಂದ ದೇವ್ ಗಿರಿ ಮಹಾರಾಜ್ ಮಂಗಳವಾರ ಹೇಳಿದ್ದಾರೆ. ರಾಮಮಂದಿರದ ಮೇಲ್ವಿಚಾರಣೆಯಲ್ಲಿ ಲೋಪಗಳಾಗಿವೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಆದರೆ, ವೈಯಕ್ತಿಕವಾಗಿ ತಾವು ತಪ್ಪಿತಸ್ಥನಲ್ಲ. ಹಾಗಾಗಿ ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ. 'ರಾಜೀನಾಮೆ ನೀಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿ, ಓಡಿ ಹೋಗುವವರಲ್ಲಿ ನಾನು ಸೇರಿಲ್ಲ. ಸಮಯ ಬಂದಾಗ ಹೋರಾಡುತ್ತೇನೆ, ಕ್ಷೇತ್ರ ತೊರೆಯುವುದು ನಮ್ಮ ಧರ್ಮದಲ್ಲಿಲ್ಲ' ಎಂದು ಹೇಳಿದ್ದಾರೆ. 'ಈ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಗಾಗಿರುವ ಎಲ್ಲರೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಉದ್ಯೋಗಿಗಳು. ಬ್ಯಾಂಕ್ ಅಧಿಕಾರಿಗಳು ಅವರ ಅರ್ಹತೆಯನ್ನು ಪರಿಶೀಲಿಸಬೇಕಾಗಿತ್ತು ಮತ್ತು ಹೆಚ್ಚು ಜಾಗರೂಗರಾಗಿರಬೇಕಿತ್ತು' ಎಂದು ಅವರು ಹೇಳಿದ್ದಾರೆ. ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು ಪ್ರಕರಣ: ಎಸ್ಐಟಿ ವರದಿ ಕೇಳಿದ ಸುಪ್ರೀಂ ಕೋರ್ಟ್ಅಯೋಧ್ಯೆ: ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವಕ್ಕೆ ₹113 ಕೋಟಿ ವೆಚ್ಚ