ಪಂಢರಪುರ ಯಾತ್ರೆ: ಕಲಬುರಗಿ–ಮೀರಜ್ ಮಧ್ಯೆ 23ರಿಂದ ವಿಶೇಷ ರೈಲು
ಕಲಬುರಗಿ: ಆಷಾಢ ಮಾಸದ ಅಂಗವಾಗಿ ಮಹಾರಾಷ್ಟ್ರದ ಪಂಢರಪುರದ ವಿಠ್ಠಲ–ರುಕ್ಮಿಣಿ ಮಂದಿರದಲ್ಲಿ ನಡೆಯುವ ಆಷಾಢಿ ವಾರಿ–2026 ಉತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರ ಅನುಕೂಲಕ್ಕಾಗಿ ಕೇಂದ್ರ ರೈಲ್ವೆಯು ಕಲಬುರಗಿ–ಪಂಢರಪುರ–ಮಿರಜ್ ಮಧ್ಯೆ ಇದೇ 23ರಿಂದ 29ರವರೆಗೆ ವಿಶೇಷ ರೈಲುಗಳನ್ನು ಓಡಿಸಲಿದೆ. ಸೋಲಾಪುರ ವಿಭಾಗದಲ್ಲಿ ಒಟ್ಟಾರೆ 58 ವಿಶೇಷ ರೈಲುಗಳು ಸಂಚರಿಸಲಿದ್ದು, ಅದರಲ್ಲಿ 14
ಕಲಬುರಗಿ: ಆಷಾಢ ಮಾಸದ ಅಂಗವಾಗಿ ಮಹಾರಾಷ್ಟ್ರದ ಪಂಢರಪುರದ ವಿಠ್ಠಲ–ರುಕ್ಮಿಣಿ ಮಂದಿರದಲ್ಲಿ ನಡೆಯುವ ಆಷಾಢಿ ವಾರಿ–2026 ಉತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರ ಅನುಕೂಲಕ್ಕಾಗಿ ಕೇಂದ್ರ ರೈಲ್ವೆಯು ಕಲಬುರಗಿ–ಪಂಢರಪುರ–ಮಿರಜ್ ಮಧ್ಯೆ ಇದೇ 23ರಿಂದ 29ರವರೆಗೆ ವಿಶೇಷ ರೈಲುಗಳನ್ನು ಓಡಿಸಲಿದೆ. ಸೋಲಾಪುರ ವಿಭಾಗದಲ್ಲಿ ಒಟ್ಟಾರೆ 58 ವಿಶೇಷ ರೈಲುಗಳು ಸಂಚರಿಸಲಿದ್ದು, ಅದರಲ್ಲಿ 14 ವಿಶೇಷ ರೈಲುಗಳು ಕಲಬುರಗಿ–ಮೀರಜ್ ಮಧ್ಯೆ ಸಂಚರಿಸಲಿವೆ.ಜು 23ರ ಬೆಳಿಗ್ಗೆ 5ಕ್ಕೆ ಮೀರಜ್ನಿಂದ ಹೊರಡುವ ರೈಲು (01107) ಪಂಢರಪುರಕ್ಕೆ ಬೆಳಿಗ್ಗೆ 7.40ಕ್ಕೆ ಬರಲಿದ್ದು, 8.40ಕ್ಕೆ ಅಲ್ಲಿಂದ ಹೊರಟು ಮಧ್ಯಾಹ್ನ 1.30ಕ್ಕೆ ಕಲಬುರಗಿ ತಲುಪಲಿದೆ. ಕಲಬುರಗಿಯಿಂದ ಮಧ್ಯಾಹ್ನ 3.30ಕ್ಕೆ ಹೊರಡುವ ರೈಲು (01108) ಪಂಢರಪುರಕ್ಕೆ ರಾತ್ರಿ 8.55ಕ್ಕೆ ತಲುಪಲಿದ್ದು, 9ಕ್ಕೆ ಅಲ್ಲಿಂದ ಹೊರಟು ರಾತ್ರಿ 11.50ಕ್ಕೆ ಮೀರಜ್ ತಲುಪಲಿದೆ. ಈ ರೈಲುಗಳು ಅರಾಗ್, ಬೆಳಂಕಿ, ಸಲಗರೆ, ಕವಠೆ ಮಹಾಂಕಾಳ್, ಲಂಗರ್ಪೇಟ್, ಧಾಲ್ಗಾಂವ್, ಜತ್ತ ರೋಡ್, ಮಸೋಬಾ ಡೊಂಗರಗಾಂವ್, ಜವಳೆ, ವಾಸುದ್, ಸಂಗೋಲಾ, ಪಂಢರಪುರ, ಮೊದ್ಲಿಂಬ್, ಕುರ್ದವಾಡಿ, ಮಾಧಾ, ಮೊಹೋಲ್, ಸೋಲಾಪುರ, ಅಕ್ಕಲಕೋಟ ರೋಡ್, ದುಧನಿ, ಗಾಣಗಾಪುರದಲ್ಲಿ ನಿಲ್ಲಲಿವೆ.ಈ ರೈಲಿನಲ್ಲಿ 14 ಜನರಲ್ ದ್ವಿತೀಯ ದರ್ಜೆಯ ಬೋಗಿಗಳು ಇರಲಿದ್ದು, ಯಾವುದೇ ಸ್ಲೀಪರ್ ಬೋಗಿಗಳು ಇರುವುದಿಲ್ಲ. ಪ್ರಯಾಣಿಕರು ರೈಲ್ ಒನ್ ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೆಟ್ಗಳನ್ನು ಖರೀದಿಸಬಹುದು. ಮಾಹಿತಿಗೆ www.enquiry.indianrail.gov.in ವೆಬ್ಸೈಟ್ಗೆ ಭೇಟಿ ನೀಡಲು ಮಧ್ಯ ರೈಲ್ವೆ ತಿಳಿಸಿದೆ.