ಕೊಪ್ಪಳ: ನಿಯಮಗಳ ಉಲ್ಲಂಘನೆ; ಒಂಬತ್ತು ರೆಸಾರ್ಟ್ಗಳನ್ನು ಮುಚ್ಚಲು ಆದೇಶ
ಗಂಗಾವತಿ (ಕೊಪ್ಪಳ ಜಿಲ್ಲೆ): ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಉಲ್ಲಂಘನೆ ಮಾಡುವ ಜೊತೆಗೆ ಮಂಡಳಿಯಿಂದ ಪರವಾನಗಿ ಪಡೆಯದ ಕೊಪ್ಪಳ ಜಿಲ್ಲೆಯ ಒಂಬತ್ತು ರೆಸಾರ್ಟ್ಗಳನ್ನು ಮುಚ್ಚಲು ಮಂಗಳವಾರ ಆದೇಶಿಸಲಾಗಿದೆ.ಕೊಪ್ಪಳ ತಾಲ್ಲೂಕಿನ ಹೊಳೆ ಮುದ್ಲಾಪುರ ಗ್ರಾಮದ ಒಟ್ಟೇರ್ಸ್ ಕೆಫೆ, ಗಂಗಾವತಿ ತಾಲ್ಲೂಕಿನ ತಿರುಮಲಾಪುರ ಗ್ರಾಮದ ಫುಲ್ ಮೂನ್, ಹನುಮನಹಳ್ಳಿ ಗ್ರಾಮದ
ಗಂಗಾವತಿ (ಕೊಪ್ಪಳ ಜಿಲ್ಲೆ): ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಉಲ್ಲಂಘನೆ ಮಾಡುವ ಜೊತೆಗೆ ಮಂಡಳಿಯಿಂದ ಪರವಾನಗಿ ಪಡೆಯದ ಕೊಪ್ಪಳ ಜಿಲ್ಲೆಯ ಒಂಬತ್ತು ರೆಸಾರ್ಟ್ಗಳನ್ನು ಮುಚ್ಚಲು ಮಂಗಳವಾರ ಆದೇಶಿಸಲಾಗಿದೆ.ಕೊಪ್ಪಳ ತಾಲ್ಲೂಕಿನ ಹೊಳೆ ಮುದ್ಲಾಪುರ ಗ್ರಾಮದ ಒಟ್ಟೇರ್ಸ್ ಕೆಫೆ, ಗಂಗಾವತಿ ತಾಲ್ಲೂಕಿನ ತಿರುಮಲಾಪುರ ಗ್ರಾಮದ ಫುಲ್ ಮೂನ್, ಹನುಮನಹಳ್ಳಿ ಗ್ರಾಮದ ಸುಗ್ರೀವಾ ಕಿಂಗ್ಡಮ್, ಗ್ರೀನ್ ಸ್ಟೋನ್, ಹಂಪಿ ಡೆಲ್ಮಾಂಟ್ ರೆಸಾರ್ಟ್, ತ್ರೀ ಸೀಸನ್ ರೆಸಾರ್ಟ್, ಹಂಪಿ ಹಾರ್ಟ್ಲ್ಯಾಂಡ್ ರೆಸಾರ್ಟ್, ರಂಗಾಪುರ ಗ್ರಾಮದ ವಿಸ್ಪರಿಂಗ್ ರಾಕ್ಸ್, ರಾಜಪುರ ಗ್ರಾಮದ ಗೋಯನ್ ಕಾರ್ನರ್ ರೆಸಾರ್ಟ್ಗಳನ್ನು ಮುಚ್ಚಲು ಮಂಡಳಿ ಆದೇಶ ಮಾಡಿದೆ.ಕೆಲ ತಿಂಗಳ ಹಿಂದೆ ಉಪ ಲೋಕಾಯುಕ್ತರು ಜಿಲ್ಲೆಯ ಅಕ್ರಮ ರೆಸಾರ್ಟ್ಗಳ ಬಗ್ಗೆ ಮಾಹಿತಿ ಪಡೆದು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಅವುಗಳ ಪರಿಶೀಲನೆಗೆ ಕೊಪ್ಪಳದ ಸಹಾಯಕ ಪರಿಸರ ಅಧಿಕಾರಿಗೆ ಸೂಚಿಸಿದ್ದರು. ಈ ಆದೇಶದನ್ವಯ ರೆಸಾರ್ಟ್ಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ನಿಯಮಗಳನ್ನು ಉಲ್ಲಂಘಿಸಿರುವುದು ಗೊತ್ತಾಗಿದೆ.ವರದಿಯನ್ವಯ ಕೊಪ್ಪಳ ಸಹಾಯಕ ಪರಿಸರ ಅಧಿಕಾರಿ, ಉಪವಿಭಾಗಾಧಿಕಾರಿ ಮೆಹಬೂಬ್ ಅಲಿ, ಗಂಗಾವತಿ ತಹಶೀಲ್ದಾರ್ ವಸಂತಕುಮಾರಿ, ಗ್ರಾಮೀಣ ಠಾಣೆ ಪಿಐ ರಂಗಪ್ಪ ಡಿ, ಕಂದಾಯ ನಿರೀಕ್ಷಕ ಮಹೇಶ ದಲಾಲ್, ಗ್ರಾಮಲೆಕ್ಕಿಗರು ರೆಸಾರ್ಟ್ಗಳಿಗೆ ಭೇಟಿ ನೀಡಿ ಮುಚ್ಚುವಂತೆ ಸೂಚಿಸಿದರು.'ಒಂಬತ್ತು ರೆಸಾರ್ಟ್ಗಳನ್ನು ಮುಚ್ಚಲು ಆದೇಶಿಸಲಾಗಿದೆ. ಪ್ರವಾಸಿಗರು ಇರುವ ಕಾರಣ ರೆಸಾರ್ಟ್ಗಳ ಮಾಲೀಕರು ಎರಡು ದಿನ ಸಮಯ ಕೇಳಿದ್ದಾರೆ. ಎರಡು ದಿನಗಳ ಬಳಿಕ ಆದೇಶ ಜಾರಿಗೆ ಬರಲಿದೆ’ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ತಿಳಿಸಿದ್ದಾರೆ.