ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಬಾರ್ ಮೇಲಿದ್ದ ಬಿಸಿಎಂ ಹಾಸ್ಟೆಲ್ ತಕ್ಷಣ ಸ್ಥಳಾಂತರಕ್ಕೆ ಆದೇಶ
ಬೆಂಗಳೂರು: ಪಬ್ಲಿಕ್ ಟಿವಿ(PUBLiC TV) ವರದಿಯ ಬೆನ್ನಲ್ಲೇ ಬಾರ್ ಮೇಲಿದ್ದ ಬಿಸಿಎಂ ಹಾಸ್ಟೆಲ್ನ್ನು(BCM Hostel) ತಕ್ಷಣ ಸ್ಥಳಾಂತರ ಮಾಡುವಂತೆ ಸರ್ಕಾರದ ಆದೇಶಿಸಿದೆ. ಬೆಂಗಳೂರಿನ ಕೆ.ಆರ್.ಪುರಂ ವ್ಯಾಪ್ತಿಯ ಆವಲಹಳ್ಳಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯವು ಖಾಸಗಿ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿದೆ.

ಬೆಂಗಳೂರು: ಪಬ್ಲಿಕ್ ಟಿವಿ(PUBLiC TV) ವರದಿಯ ಬೆನ್ನಲ್ಲೇ ಬಾರ್ ಮೇಲಿದ್ದ ಬಿಸಿಎಂ ಹಾಸ್ಟೆಲ್ನ್ನು(BCM Hostel) ತಕ್ಷಣ ಸ್ಥಳಾಂತರ ಮಾಡುವಂತೆ ಸರ್ಕಾರದ ಆದೇಶಿಸಿದೆ. ಬೆಂಗಳೂರಿನ ಕೆ.ಆರ್.ಪುರಂ ವ್ಯಾಪ್ತಿಯ ಆವಲಹಳ್ಳಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯವು ಖಾಸಗಿ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಎರಡು ವರ್ಷಗಳಿಂದ ಈ ಕಟ್ಟಡದಲ್ಲೇ ಹಾಸ್ಟೆಲ್ ಇತ್ತಾದರೂ, ಮೂರು ತಿಂಗಳ ಹಿಂದೆ ಇದರ ನೆಲ ಮಹಡಿಯಲ್ಲಿ (Ground Floor) ನಿಯಮಬಾಹಿರವಾಗಿ ಬಾರ್ ಅಂಡ್ ರೆಸ್ಟೋರೆಂಟ್ ಆರಂಭಿಸಲಾಗಿತ್ತು. ಹಾಸ್ಟೆಲ್ನ ಕೆಳ ಮಹಡಿಯಲ್ಲೇ ಬಾರ್ ಅಂಡ್ ರೆಸ್ಟೋರೆಂಟ್ ತೆರೆದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಜುಲೈ 10 ರಂದು ಸುದ್ದಿ ಪ್ರಕಟಿಸಿತ್ತು. ಸುದ್ದಿ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ನಿರುಪಮಾ ಮೌಳಿ ಅವರು ಹಾಸ್ಟೆಲ್ ಅನ್ನು ತಕ್ಷಣವೇ ಬೇರೆಡೆಗೆ ಸ್ಥಳಾಂತರಿಸುವಂತೆ ತುರ್ತು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಬಾರ್ ಮೇಲೆಯೇ ಬಿಸಿಎಂ ಹಾಸ್ಟೆಲ್ – ಬೆಂಗಳೂರಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಓದಿಗೆ ಅಡ್ಡಿ, ಸುರಕ್ಷತೆಗೆ ಧಕ್ಕೆ: ಬಾರ್ ಮೇಲಿನ ಮಹಡಿಯಲ್ಲೇ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸವಿದ್ದು, ಹಗಲು-ರಾತ್ರಿ ಎನ್ನದೆ ಮದ್ಯಪಾನಿಗಳ ಗಲಾಟೆ, ಗದ್ದಲ ತಾರಕಕ್ಕೇರಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಓದಲು ಮಾತ್ರವಲ್ಲದೆ ನೆಮ್ಮದಿಯಿಂದ ನಿದ್ರೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಸುರಕ್ಷತೆಯ ಭಯದಲ್ಲೇ ಕಳೆದ ಮೂರು ತಿಂಗಳಿಂದ ನರಕಯಾತನೆ ಅನುಭವಿಸುತ್ತಿದ್ದ ವಿದ್ಯಾರ್ಥಿಗಳು, ‘ನಮಗೆ ಸುರಕ್ಷಿತ ವಸತಿ ನೀಡಿ’ ಎಂದು ಸರ್ಕಾರದ ಮುಂದೆ ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ: ಎಸ್ಐಆರ್ ಆಯ್ತು, ಈಗ ಬೀದಿಯಲ್ಲಿ ಗೃಹ ಜ್ಯೋತಿ ಮಾಲೀಕನಿಗೆ ನೋಟಿಸ್: ವಿದ್ಯಾರ್ಥಿಗಳ ಈ ಗಂಭೀರ ಸಮಸ್ಯೆಯನ್ನು ಎದುರು ತರುತ್ತಿದ್ದಂತೆಯೇ ಇಲಾಖೆಯ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಕೂಡಲೇ ಹಾಸ್ಟೆಲ್ ಸ್ಥಳಾಂತರಕ್ಕೆ ಆದೇಶಿಸಿರುವ ಜಿಲ್ಲಾಧಿಕಾರಿ ನಿರುಪಮಾ ಮೌಳಿ ಅವರು, ನಿಯಮ ಉಲ್ಲಂಘಿಸಿ ಬಾರ್ಗೆ ಜಾಗ ನೀಡಿದ್ದ ಕಟ್ಟಡದ ಮಾಲೀಕ ಮಂಜುನಾಥ್ ಎಂಬುವವರಿಗೂ ಇಲಾಖೆಯಿಂದ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆ ಕಟ್ಟಡಕ್ಕೆ ನೀಡಲಾಗುತ್ತಿದ್ದ ಬಾಡಿಗೆಯನ್ನು ತಕ್ಷಣದಿಂದಲೇ ತಡೆಹಿಡಿಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.