ತಪ್ಪು ವ್ಯವಸ್ಥೆಯದ್ದು, ಶಿಕ್ಷೆ ವಿದ್ಯಾರ್ಥಿಗಳಿಗೇಕೆ?: ಫಡಣವೀಸ್ ವಿರುದ್ಧ ರಾಹುಲ್
ಮುಂಬೈ: ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ರದ್ದಾಗಿ ಎರಡು ವಾರ ಕಳೆದಿದ್ದರೂ, ಈವರೆಗೆ ಮರುಪರೀಕ್ಷೆಯ ದಿನಾಂಕ ಪ್ರಕಟಿಸದಿರುವುದು ಲಕ್ಷಾಂತರ ಅಭ್ಯರ್ಥಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡ
ಮುಂಬೈ: ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ರದ್ದಾಗಿ ಎರಡು ವಾರ ಕಳೆದಿದ್ದರೂ, ಈವರೆಗೆ ಮರುಪರೀಕ್ಷೆಯ ದಿನಾಂಕ ಪ್ರಕಟಿಸದಿರುವುದು ಲಕ್ಷಾಂತರ ಅಭ್ಯರ್ಥಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್, ಸರ್ಕಾರದ ಈ ನಿರ್ಧಾರದಿಂದಾಗಿ ಸುಮಾರು 6 ಲಕ್ಷ ಅಭ್ಯರ್ಥಿಗಳ ಭವಿಷ್ಯ ಈಗ ಕತ್ತಲಿಗೆ ದೂಡಲ್ಲಟ್ಟಿದೆ. ‘ವರ್ಷಗಟ್ಟಲೆ ಶ್ರಮಪಟ್ಟು, ಹಣ ಪಾವತಿಸಿ, ದೂರದ ಕೇಂದ್ರಗಳಿಗೆ ಪ್ರಯಾಣ ಬೆಳೆಸಿ ಪರೀಕ್ಷೆಗೆ ಸಿದ್ಧರಾಗಿದ್ದ ಪ್ರಾಮಾಣಿಕ ಅಭ್ಯರ್ಥಿಗಳು ವ್ಯವಸ್ಥೆಯ ವೈಫಲ್ಯಕ್ಕೆ ಬಲಿಯಾಗಿದ್ದಾರೆ. ಪತ್ರಿಕೆ ಸೋರಿಕೆ ಮಾಡಿದದವರು ತಿರುಗುತ್ತಿದ್ದರೆ, ಕಠಿಣ ಪರಿಶ್ರಮ ಪಟ್ಟ ಅಭ್ಯರ್ಥಿಗಳು ಯಾವುದೇ ಉತ್ತರವಿಲ್ಲದೆ ಕಾಯುವಂತಾಗಿದೆ‘ ಎಂದಿದ್ದಾರೆ.ತಪ್ಪು ಇಂಧನದ್ದಲ್ಲ, ನಿಮ್ಮದು: ‘ಮೈಲೇಜ್’ ಬಗ್ಗೆ ಕಾರು ಮಾಲೀಕರನ್ನೇ ದೂರಿದ ಗಡ್ಕರಿಮಾಸ್ಟರ್ ಚೆಫ್ USA: ಆಲೂ ಬೋಂಡಾ ಮಾಡಿ ತೀರ್ಪುಗಾರರ ಮನಗೆದ್ದ ಭಾರತ ಮೂಲದ ಐಶು ದೇಶದ ಭವಿಷ್ಯವನ್ನು ರೂಪಿಸಬೇಕಾದ ಭಾವಿ ಶಿಕ್ಷಕರೇ ಇಂದು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.‘ವಿಳಂಬ ಮಾಡದೆ ತಕ್ಷಣವೇ ಹೊಸ 'ಟಿಇಟಿ' ಪರೀಕ್ಷಾ ದಿನಾಂಕವನ್ನು ಘೋಷಿಸಬೇಕು. ಪತ್ರಿಕೆ ಸೋರಿಕೆಗೆ ಕಾರಣರಾದ ಅಧಿಕಾರಿಗಳು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೇ ಹೊರತು, ವಿದ್ಯಾರ್ಥಿಗಳನ್ನು ಶಿಕ್ಷಿಸಬಾರದು, ವ್ಯವಸ್ಥೆಯ ತಪ್ಪಿನಿಂದಾಗಿ ವರ್ಷಗಟ್ಟಲೆ ಸಮಯ ಕಳೆದುಕೊಂಡ ಅಭ್ಯರ್ಥಿಗಳಿಗೆ ಮುಂದಿನ ಪರೀಕ್ಷೆಗಳಲ್ಲಿ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ರಾಹುಲ್ ಆಗ್ರಹಿಸಿದ್ದಾರೆ.ಬಿಡದಿ ಟೌನ್ಶಿಪ್: ಸಂಘರ್ಷದತ್ತ ಹೊರಳಿದ ಶಾಂತಿಯುತ ಹೋರಾಟ12 ವರ್ಷಕ್ಕೆ IIT, ರೈತ ಕುಟುಂಬದ ಸತ್ಯಂ ಈಗ ಅಮೆರಿಕದಲ್ಲಿ AI ರಿಸರ್ಚ್ ಎಂಜಿನಿಯರ್ ದೇಶದಾದ್ಯಂತ ಸರಣಿಯಾಗಿ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ ದಂಧೆ ಮತ್ತು ಶಿಕ್ಷಣ ವ್ಯವಸ್ಥೆಯ ಬಿಕ್ಕಟ್ಟಿನ ಕುರಿತು ಚರ್ಚಿಸಲು ಜುಲೈ 17 ರಂದು ಡೆಹ್ರಾಡೂನ್ನಲ್ಲಿ ಸಭೆಯೊಂದನ್ನು ಆಯೋಜಿಸಲಾಗಿದೆ ಎಂದು ರಾಹುಲ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.महाराष्ट्र TET का पेपर लीक हुआ, परीक्षा रद्द हुई। 6 लाख अभ्यर्थी अधर में। दो हफ्ते हो गए, नई तारीख़ का कोई अता-पता नहीं।लीक करने वाले आज़ाद, सिस्टम बेदाग़ और सज़ा भुगत रहा है वो जिसने ईमानदारी से मेहनत की।ये देश के कार्यरत और होने वाले शिक्षक हैं जिनके हाथ में भारत का भविष्य…— Rahul Gandhi (@RahulGandhi) July 14, 2026