ಪ್ರೀತಂ & ಪೆಡ್ರೋ: ಬದುಕಿನ ಮೌಲ್ಯ ತಿಳಿಸುವ ಭಾವನಾತ್ಮಕ ಪಯಣ!
ಪ್ರೀತಂ & ಪೆಡ್ರೋ ವೆಬ್ ಸರಣಿ ನೋಡಿದ ನಂತರ ಮನಸ್ಸಿನಲ್ಲಿ ಮೂಡುವ ಮೊದಲ ಭಾವನೆ ಎಂದರೆ, ಇದು ಕೇವಲ ಮನೋರಂಜನೆಗಾಗಿ ಮಾಡಿರುವ ವೆಬ್ ಸರಣಿಯಲ್ಲ, ಸಂಬಂಧಗಳ ಮೌಲ್ಯ, ನೆನಪುಗಳು ಮತ್ತು ಜೀವನದ ಅರ್ಥವನ್ನು ತಿಳಿಸುವುದಾಗಿದೆ. ಕೆಲವೆಡೆ ಕಥೆ ನಿಧಾನವಾಗಿ ಸಾಗಿದರೂ, ಪ್ರೇಕ್ಷಕರನ್ನು ಸೆಳೆಯುವ ರೋಚಕ ತಿರುವುಗಳನ್ನು ಹೊಂದಿರುವುದು ಇದರ ವಿಶೇಷ.ಆ್ಯಕ್ಷನ್, ಥ್ರಿಲ್ಲರ್ ಹಾ

ಪ್ರೀತಂ & ಪೆಡ್ರೋ ವೆಬ್ ಸರಣಿ ನೋಡಿದ ನಂತರ ಮನಸ್ಸಿನಲ್ಲಿ ಮೂಡುವ ಮೊದಲ ಭಾವನೆ ಎಂದರೆ, ಇದು ಕೇವಲ ಮನೋರಂಜನೆಗಾಗಿ ಮಾಡಿರುವ ವೆಬ್ ಸರಣಿಯಲ್ಲ, ಸಂಬಂಧಗಳ ಮೌಲ್ಯ, ನೆನಪುಗಳು ಮತ್ತು ಜೀವನದ ಅರ್ಥವನ್ನು ತಿಳಿಸುವುದಾಗಿದೆ. ಕೆಲವೆಡೆ ಕಥೆ ನಿಧಾನವಾಗಿ ಸಾಗಿದರೂ, ಪ್ರೇಕ್ಷಕರನ್ನು ಸೆಳೆಯುವ ರೋಚಕ ತಿರುವುಗಳನ್ನು ಹೊಂದಿರುವುದು ಇದರ ವಿಶೇಷ.ಆ್ಯಕ್ಷನ್, ಥ್ರಿಲ್ಲರ್ ಹಾಗೂ ಪ್ರೇಮಕಥೆಗಳಿರುವ ವೆಬ್ ಸರಣಿಗಳೇ ಹೆಚ್ಚಾಗಿ ತೆರೆಕಾಣುತ್ತಿರುವ ಸಂದರ್ಭದಲ್ಲಿ ಪ್ರೀತಂ & ಪೆಡ್ರೋ ತನ್ನ ಸರಳ ಕಥೆ, ಸಹಜ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಮೊದಲ ನೋಟಕ್ಕೆ ಇದು ಹಗುರವಾದ ವೆಬ್ ಸರಣಿ ಎನಿಸಿದರೂ, ಕಥೆ ಸಾಗಿದಂತೆ ಸ್ನೇಹ, ಪ್ರೀತಿ, ಭಾವನೆಗಳು, ನಿಜ ಜೀವನದ ಘಟನೆಗಳು ಮತ್ತು ಬದುಕಿನ ಸಣ್ಣ-ಸಣ್ಣ ಸತ್ಯಗಳನ್ನು ಮನಮುಟ್ಟುವ ರೀತಿಯಲ್ಲಿ ತೆರೆದಿಡುತ್ತದೆ.ಜಿಯೋ ಹಾಟ್ಸ್ಟಾರ್ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಪ್ರೀತಂ & ಪೆಡ್ರೊ ಜುಲೈ 3ರಂದು ಬಿಡುಗಡೆಯಾಗಿದ್ದು, ವೀಕ್ಷಕರ ಗಮನ ಸೆಳೆದಿದೆ. ಹಾಸ್ಯ ಮತ್ತು ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಈ ವೆಬ್ ಸರಣಿ ಸಾಮಾಜಿಕ ಜಾಲತಾಣಗಳಲ್ಲಿಯೂ ಸದ್ದು ಮಾಡುತ್ತಿದೆ. ರಾಜಕುಮಾರ್ ಹಿರಾನಿ ನಿರ್ಮಿಸಿರುವ ಈ ಸರಣಿಗೆ ಕಥೆಯನ್ನೂ ಅವರೇ ಬರೆದಿದ್ದಾರೆ. ಅರ್ಷದ್ ವಾರ್ಸಿ, ವೀರ್ ಹಿರಾನಿ ಹಾಗೂ ‘12th ಫೇಲ್’ ಖ್ಯಾತಿಯ ವಿಕ್ರಾಂತ್ ಮ್ಯಾಸ್ಸೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಒಟ್ಟು ಆರು ಸಂಚಿಕೆಗಳ ಈ ಸರಣಿಯನ್ನು ಕನ್ನಡ ಸೇರಿದಂತೆ ಎಂಟು ಭಾಷೆಗಳಲ್ಲಿ ಲಭ್ಯವಿದೆ.Aapka attention hack karne aa rahe hai Pritam and Pedro ♂️#HotstarSpecials #PritamandPedro, streaming from 3rd July on JioHotstar.#PritamandPedroOnJioHotstar #VirHirani @ArshadWarsi @VikrantMassey @bomanirani @MonaJasbirSingh #SatyadeepMisra #ShrutiiMarrahe… pic.twitter.com/2DDwdvIbaH— JioHotstar (@JioHotstar) May 20, 2026 ಕಥೆ ಏನು?ಕಥೆಯ ಕೇಂದ್ರಬಿಂದು ಸೈಬರ್ ಕ್ರೈಂ ತನಿಖೆ. ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಅರಿವಿಲ್ಲದ ಪೊಲೀಸ್ ಅಧಿಕಾರಿ ಪೆಡ್ರೊ ಸೈಬರ್ ಸೆಲ್ ವಿಭಾಗಕ್ಕೆ ವರ್ಗಾವಣೆಯಾಗುತ್ತಾನೆ. ಮತ್ತೊಂದೆಡೆ, ಪ್ರೀತಂ ಎಂಬ ಯುವ ಮಿಲೇನಿಯಲ್ ಕೋಡರ್ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುತ್ತಾನೆ. ಸಂಪೂರ್ಣ ಭಿನ್ನ ಸ್ವಭಾವದ ಈ ಇಬ್ಬರೂ ಸೇರಿ ಮಂತ್ರಿಯೊಬ್ಬರ ಮಗನ ಅಪಹರಣ ಪ್ರಕರಣವನ್ನು ತನಿಖೆ ನಡೆಸುತ್ತಾರೆ. ತನಿಖೆ ಮುಂದುವರಿದಂತೆ ಒಂದೊಂದೇ ರಹಸ್ಯ ಬಯಲಾಗುತ್ತಾ ಕಥೆ ಮತ್ತಷ್ಟು ಕುತೂಹಲಕಾರಿ ಆಗುತ್ತದೆ.ಇದರಲ್ಲಿನ ಪ್ರತಿಯೊಂದು ಪಾತ್ರವೂ ಕಥೆಯನ್ನು ಮುಂದಕ್ಕೆ ಕೊಂಡೊಯ್ಯಲು ಮಾತ್ರ ಇರುವುದಿಲ್ಲ. ಕಥೆಯ ಪಾತ್ರಧಾರಿಗಳ ಕನಸು, ಹೋರಾಟ ಮತ್ತು ಭಾವನೆಗಳನ್ನು ಪ್ರಚುರಪಡಿಸುತ್ತವೆ. ಅದಕ್ಕಾಗಿಯೇ ಅವು ಕೇವಲ ಪರದೆಯ ಪಾತ್ರಗಳಂತೆ ಕಾಣದೆ, ನಮ್ಮ ಸುತ್ತಲಿನ ನಿಜವಾದ ವ್ಯಕ್ತಿಗಳಂತೆ ಭಾಸವಾಗುತ್ತವೆ. ಕೆಲವೊಮ್ಮೆ ನಗಿಸಿ, ಅಳಿಸಿ, ಇನ್ನೂ ಕೆಲವೊಮ್ಮೆ ಮಾತಿಲ್ಲದೆ ಮೌನವಾಗುವಂತೆ ಮಾಡುತ್ತದೆ.ಚಿತ್ರದ ಛಾಯಾಚಿತ್ರಗ್ರಹಣ ಮತ್ತು ಹಿನ್ನೆಲೆ ಸಂಗೀತ ಕಥೆಯೊಂದಿಗೆ ಸುಂದರವಾಗಿ ಬೆರೆತಿವೆ. ಕೆಲವು ದೃಶ್ಯಗಳಲ್ಲಿ ಸಂಗೀತವೇ ಭಾವನೆಗಳನ್ನು ಮತ್ತಷ್ಟು ಗಾಢಗೊಳಿಸುತ್ತದೆ. ಸಂಭಾಷಣೆಗಳ ಕೆಲವು ಸಾಲುಗಳು ವೆಬ್ ಸರಣಿ ಮುಗಿದ ಬಳಿಕವೂ ಮನಸ್ಸಿನಲ್ಲಿ ಉಳಿಯುವಂತೆ ಮಾಡುತ್ತದೆ.ಮೊದಲಾರ್ಧದಲ್ಲಿ ಕಥೆ ಸ್ವಲ್ಪ ನಿಧಾನವಾಗಿ ಸಾಗಿದರೂ, ಮಧ್ಯದಲ್ಲಿ ವೇಗ ಪಡೆದು ಕುತೂಹಲವನ್ನು ಹೆಚ್ಚಿಸುತ್ತದೆ. ಕೊನೆಯವರೆಗೂ ಪ್ರೇಕ್ಷಕರ ಗಮನವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.ಪ್ರೀತಂ & ಪೆಡ್ರೋ ಕೇವಲ ಎರಡು ಪಾತ್ರಗಳ ಕಥೆಯಲ್ಲ, ಇದು ಸಂಬಂಧಗಳ ಬೆಲೆ, ನಂಬಿಕೆಯ ಶಕ್ತಿ, ಸ್ನೇಹದ ಅರ್ಥ ಮತ್ತು ಜೀವನವನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡುವ ಭಾವನಾತ್ಮಕ ಪಯಣ. ವೆಬ್ ಸರಣಿ ಮುಗಿಯುತ್ತದೆ..... ಆದರೂ ಪ್ರೇಕ್ಷಕರ ಮನಸ್ಸಿನಲ್ಲಿ ಇನ್ನೂ ಬಹಳ ಹೊತ್ತು ಜೀವಂತವಾಗಿಯೇ ಉಳಿಯುತ್ತವೆ. ಅದೇ 'ಪ್ರೀತಂ & ಪೆಡ್ರೋ' ಸರಣಿಯ ನಿಜವಾದ ಗೆಲುವು.