ನೇಪಾಳಕ್ಕೆ ಪರಾರಿಯಾಗಲು ಯತ್ನಿಸುವಾಗ ಸಿಕ್ಕಿಬಿದ್ದ US ಮಾಜಿ ನೌಕಾ ಅಧಿಕಾರಿ – ಕಾಲಿಗೆ ಹಗ್ಗ ಕಟ್ಟಿ ಎಳೆದೊಯ್ದ ಯೋಧರು
– ಪಾಸ್ಪೋರ್ಟ್ ಇಲ್ಲದೆ ಭಾರತದಲ್ಲಿ 8 ತಿಂಗಳು ಸುತ್ತಾಟ – ಬೆಂಗಳೂರು, ಗೋವಾದಲ್ಲೂ ಸುತ್ತಾಡಿದ್ದ ಕಿಲಾಡಿ! ನವದೆಹಲಿ: ಯಾವುದೇ ಅಧಿಕೃತ ಪಾಸ್ಪೋರ್ಟ್ ಮತ್ತು ವೀಸಾ ದಾಖಲೆಗಳು ಇಲ್ಲದೇ ಭಾರತಕ್ಕೆ ಅಕ್ರಮವಾಗಿ ನುಸುಳಿ, ಗೋವಾ ಮತ್ತು ಬೆಂಗಳೂರಿನಲ್ಲಿ ತಿಂಗಳುಗಟ್ಟಲೆ ಕಳೆದಿದ್ದ ಅಮೆರಿಕದ ಮಾಜಿ ನೌಕಾಪಡೆ (US Navy) ಅಧಿಕಾರಿಯನ್ನು ಉತ್ತರ ಪ್ರದೇಶದ ಗಡಿಯಲ್ಲಿ ಭದ್ರತಾ

– ಪಾಸ್ಪೋರ್ಟ್ ಇಲ್ಲದೆ ಭಾರತದಲ್ಲಿ 8 ತಿಂಗಳು ಸುತ್ತಾಟ – ಬೆಂಗಳೂರು, ಗೋವಾದಲ್ಲೂ ಸುತ್ತಾಡಿದ್ದ ಕಿಲಾಡಿ! ನವದೆಹಲಿ: ಯಾವುದೇ ಅಧಿಕೃತ ಪಾಸ್ಪೋರ್ಟ್ ಮತ್ತು ವೀಸಾ ದಾಖಲೆಗಳು ಇಲ್ಲದೇ ಭಾರತಕ್ಕೆ ಅಕ್ರಮವಾಗಿ ನುಸುಳಿ, ಗೋವಾ ಮತ್ತು ಬೆಂಗಳೂರಿನಲ್ಲಿ ತಿಂಗಳುಗಟ್ಟಲೆ ಕಳೆದಿದ್ದ ಅಮೆರಿಕದ ಮಾಜಿ ನೌಕಾಪಡೆ (US Navy) ಅಧಿಕಾರಿಯನ್ನು ಉತ್ತರ ಪ್ರದೇಶದ ಗಡಿಯಲ್ಲಿ ಭದ್ರತಾ ಪಡೆಗಳು ಬಂಧಿಸಿವೆ. ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯ ಬಳಿ ಗ್ರಾಮಸ್ಥರು ಹಾಗೂ ಸಶಸ್ತ್ರ ಸೀಮಾ ಬಲ್ (SSB) ಯೋಧರು ಈತನ ಕಾಲಿಗೆ ಹಗ್ಗ ಕಟ್ಟಿ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಆರೋಪಿ ಯಾರು? ಬಂಧಿತ ವಿದೇಶಿ ಪ್ರಜೆಯನ್ನು ಅಮೆರಿಕದ ಜೋರ್ಡಾನ್ ಬ್ರೌನ್(Jordan Brown) ಎಂದು ಗುರುತಿಸಲಾಗಿದೆ. 36 ವರ್ಷದ ಈತ ಅಮೆರಿಕ ನೌಕಾಪಡೆಯ ಮಾಜಿ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ. ಆದರೆ ಇದನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳು ಆತನ ಬಳಿ ಇರಲಿಲ್ಲ. ಶನಿವಾರ ಸೋನಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈನಿಹ್ವಾ ಪ್ರದೇಶದ ಗಡಿ ಕಂಬ ಸಂಖ್ಯೆ 516ರ ಬಳಿ ಅನಧಿಕೃತ ಕಾಲುದಾರಿಯ ಮೂಲಕ ನೇಪಾಳಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದ ಬ್ರೌನ್ನನ್ನು ಅಧಿಕಾರಿಗಳು ಗುರುತಿಸಿ ತಡೆದಿದ್ದಾರೆ. ಆತ ಓಡಿಹೋಗಲು ಯತ್ನಿಸಿದಾಗ ಯೋಧರು ಆತನನ್ನು ವಶಕ್ಕೆ ಪಡೆದಿದ್ದಾರೆ. ಆತನಿಂದ 31,460 ರೂ. ನಗದು ಮತ್ತು ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. #WATCH | Maharajganj, UP: An American citizen, identified as Jordan Brown from California, was arrested by the Sashastra Seema Bal (SSB) near the Sonauli India-Nepal border on July 11. (Source: Police Media Cell) pic.twitter.com/RjV1Lwxl0o — ANI UP/Uttarakhand (@ANINewsUP) July 13, 2026 ಭಾರತದಲ್ಲಿದ್ದ 8 ತಿಂಗಳು ವಿಚಾರಣೆ ವೇಳೆ ಜೋರ್ಡಾನ್ ಬ್ರೌನ್ ನೀಡಿದ ಹೇಳಿಕೆಗಳು ತನಿಖಾಧಿಕಾರಿಗಳನ್ನು ಬೆಚ್ಚಿಬೀಳಿಸಿವೆ. ಈತ ಮೊದಲು ಪ್ರವಾಸಿ ವೀಸಾದಲ್ಲಿ ಥೈಲ್ಯಾಂಡ್ಗೆ ಹೋಗಿದ್ದಾಗ ಅಲ್ಲಿ ಪಾಸ್ಪೋರ್ಟ್ ಕಳೆದುಕೊಂಡಿದ್ದಾಗಿ ಹೇಳಿದ್ದಾನೆ. ನಂತರ ಸಮುದ್ರ ಮಾರ್ಗದ ಮೂಲಕ ಶ್ರೀಲಂಕಾ ತಲುಪಿ, ಅಲ್ಲಿಂದ 2025ರ ನವೆಂಬರ್ 2 ರಂದು ಸಮುದ್ರ ಮಾರ್ಗವಾಗಿಯೇ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾನೆ. ಇದನ್ನೂ ಓದಿ: ಕಚ್ಚಾ ತೈಲ ದರ ಸಮರ – ಸೌದಿಯಿಂದ ಭಾರೀ ಕಡಿತ, ಭಾರತಕ್ಕೆ ಏನು ಲಾಭ? ನವೆಂಬರ್ನಿಂದ ಸುಮಾರು ಎಂಟು ತಿಂಗಳ ಕಾಲ ಯಾವುದೇ ಪಾಸ್ಪೋರ್ಟ್ ಇಲ್ಲದೆ ಗೋವಾದಲ್ಲಿ ವಾಸವಿದ್ದ ಬ್ರೌನ್, ಇತ್ತೀಚೆಗೆ ಅಲ್ಲಿಂದ ಬೆಂಗಳೂರಿಗೆ ಬಂದಿದ್ದ. ತದನಂತರ ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಪ್ರಯಾಣಿಸಿ ಅಲ್ಲಿಂದ ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಪ್ರಸ್ತುತ ಆತನ ವಿರುದ್ಧ ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. BIG NEWS Another US national, reportedly a former Special Forces officer, was caught near the India-Nepal border without valid documents. He allegedly tried to enter Nepal after escaping from an SSB jawan, but local villagers caught him https://t.co/vzkam032xW — News Algebra (@NewsAlgebraIND) July 13, 2026 ಸಿಕ್ಕಿ ಬೀಳುವುದು ಹೊಸದೆನಲ್ಲ: ಜೋರ್ಡಾನ್ ಬ್ರೌನ್ ಬಂಧನವು ಭಾರತದ ಆಂತರಿಕ ಭದ್ರತೆಯ ಕುರಿತು ಮತ್ತೊಮ್ಮೆ ಆತಂಕ ಮೂಡಿಸಿದೆ. ಇದೇ ವರ್ಷ ಮಾರ್ಚ್ ತಿಂಗಳಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಅಮೆರಿಕದ ಪ್ರಜೆ ಮ್ಯಾಥ್ಯೂ ಆರನ್ ವ್ಯಾನ್ ಡೈಕ್ ಮತ್ತು 6 ಉಕ್ರೇನಿಯನ್ ಪ್ರಜೆಗಳನ್ನು ಮಿಜೋರಾಂ ಗಡಿಯಲ್ಲಿ ಬಂಧಿಸಿತ್ತು. ಇದನ್ನೂ ಓದಿ: ತೆಲಂಗಾಣದಲ್ಲಿ 6 ಜನರನ್ನು ಕಗ್ಗೊಲೆ ಮಾಡಿದ್ದ ಪೋಕ್ಸೋ ಆರೋಪಿ ಆತ್ಮಹತ್ಯೆ ಈ ವಿದೇಶಿ ನುಸುಳುಕೋರರು ಭಾರತದ ನಿಷೇಧಿತ ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದು, ಅವರಿಗೆ ಯುರೋಪ್ನಿಂದ ಡ್ರೋನ್ ಕನ್ಸೈನ್ಮೆಂಟ್ಗಳು ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದರು ಹಾಗೂ ಮ್ಯಾನ್ಮಾರ್ನ ಉಗ್ರಗಾಮಿಗಳಿಗೆ ತರಬೇತಿ ನೀಡುತ್ತಿದ್ದರು ಎಂಬ ಆಘಾತಕಾರಿ ವಿಷಯವನ್ನು ಎನ್ಐಎ ಪತ್ತೆಹಚ್ಚಿತ್ತು. ಪ್ರಸ್ತುತ ಅವರ ವಿರುದ್ಧ ಯುಎಪಿಎ (UAPA) ಕಾಯ್ದೆಯಡಿ ತನಿಖೆ ನಡೆಯುತ್ತಿದ್ದು, ಈಗ ಮತ್ತೊಬ್ಬ ಅಮೆರಿಕ ಪ್ರಜೆ ಸಿಕ್ಕಿಬಿದ್ದಿರುವುದು ತನಿಖಾ ಸಂಸ್ಥೆಗಳನ್ನು ಅಲರ್ಟ್ ಮಾಡಿದೆ.