ಬಲವಂತದ ಕಾರ್ಮಿಕರನ್ನು ಬಳಸಿ ಉತ್ಪಾದಿಸುವ ಸರಕುಗಳ ಆಮದು ನಿಷೇಧಿಸಿದ ಭಾರತ
ನವದೆಹಲಿ: ಬಲವಂತದ ಕಾರ್ಮಿಕರನ್ನು ಬಳಸಿ ಉತ್ಪಾದಿಸುವ ಸರಕುಗಳ ಆಮದನ್ನು ಭಾರತ ನಿಷೇಧಿಸಿದೆ ಎಂದು ವ್ಯಾಪಾರ ಸಚಿವಾಲಯ ಮಂಗಳವಾರ ತಿಳಿಸಿದೆ. ಇದು ಅಮೆರಿಕದ ತನಿಖೆಯಿಂದ ಹೊಸ ಸುಂಕ ಹೇರಿಕೆ ತಪ್ಪಿಸುವ ಕ್ರಮವಾಗಿದೆ ಎಂದು ವರದಿ ತಿಳಿಸಿದೆ.ಬಲವಂತದ ಕಾರ್ಮಿಕರನ್ನು ಬಳಸಿ ಉತ್ಪಾದಿಸುವ ಸರಕುಗಳ ಆಮದು ನಿರ್ಬಂಧಿಸುವಲ್ಲಿ ವಿಫಲವಾದ ದೇಶಗಳ ಮೇಲೆ ಅಮೆರಿಕದ ಪ್ರಸ್ತಾಪಿತ ಶೇ 12.

ನವದೆಹಲಿ: ಬಲವಂತದ ಕಾರ್ಮಿಕರನ್ನು ಬಳಸಿ ಉತ್ಪಾದಿಸುವ ಸರಕುಗಳ ಆಮದನ್ನು ಭಾರತ ನಿಷೇಧಿಸಿದೆ ಎಂದು ವ್ಯಾಪಾರ ಸಚಿವಾಲಯ ಮಂಗಳವಾರ ತಿಳಿಸಿದೆ. ಇದು ಅಮೆರಿಕದ ತನಿಖೆಯಿಂದ ಹೊಸ ಸುಂಕ ಹೇರಿಕೆ ತಪ್ಪಿಸುವ ಕ್ರಮವಾಗಿದೆ ಎಂದು ವರದಿ ತಿಳಿಸಿದೆ.ಬಲವಂತದ ಕಾರ್ಮಿಕರನ್ನು ಬಳಸಿ ಉತ್ಪಾದಿಸುವ ಸರಕುಗಳ ಆಮದು ನಿರ್ಬಂಧಿಸುವಲ್ಲಿ ವಿಫಲವಾದ ದೇಶಗಳ ಮೇಲೆ ಅಮೆರಿಕದ ಪ್ರಸ್ತಾಪಿತ ಶೇ 12.5ರಷ್ಟು ಸುಂಕ ಬೆದರಿಕೆ ಎದುರಿಸುತ್ತಿರುವ ಹಲವು ದೇಶಗಳ ಸಾಲಿನಲ್ಲಿ ಭಾರತವೂ ಇದೆ. ಬಲವಂತದ ಕಾರ್ಮಿಕರ ಬಳಕೆಯ ಮೂಲಕ ಉತ್ಪಾದಿಸಿದ ಅಥವಾ ತಯಾರಿಸಿದ ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ಅಧಿಸೂಚನೆಯ ಮೂಲಕ ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ ಎಂದು ಸೋಮವಾರ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.ಆಮದು ಮಾಡಿಕೊಂಡ ಸರಕುಗಳನ್ನು ಬಲವಂತದ ಕಾರ್ಮಿಕರನ್ನು ಬಳಸಿ ತಯಾರಿಸಲಾಗಿದೆಯೇ ಎಂದು ಕುರಿತು ಭಾರತದ ವಿದೇಶಿ ವ್ಯಾಪಾರ ಸಂಸ್ಥೆಯು ತನಿಖೆ ಮಾಡುತ್ತದೆ. ಪುರಾವೆ ಸಿಕ್ಕರೆ ಅಧಿಸೂಚನೆಯ ಪ್ರಕಾರ, ಸಮಾಲೋಚನೆಯ ನಂತರ ಸರ್ಕಾರವು ಆ ಉತ್ಪನ್ನಗಳ ಆಮದನ್ನು ನಿಷೇಧಿಸಲು ಶಿಫಾರಸು ಮಾಡುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.ಈ ಅಧಿಸೂಚನೆಯು 30 ದಿನಗಳ ನಂತರ ಜಾರಿಗೆ ಬರಲಿದೆ.ಇತರೆ ಕೆಲವು ದೇಶಗಳ ರೀತಿಯೇ ಭಾರತದಿಂದ ಆಮದಾಗುವ ಸರಕುಗಳ ಮೇಲೆ ಪ್ರಸ್ತುತ ಅಮೆರಿಕವು ಶೇ 10ರಷ್ಟು ಸುಂಕ ವಿಧಿಸುತ್ತಿದೆ.