ಸಂಕಷ್ಟದಲ್ಲಿದ್ದ ಇಂಗ್ಲೆಂಡ್ಗೆ ಆಸರೆಯಾದ ರೂಟ್-ಡಾಸನ್; ಭಾರತಕ್ಕೆ 259 ರನ್ಗಳ ಗುರಿ
ಲಂಡನ್: ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಇಂಗ್ಲೆಂಡ್ (India vs England) 259 ರನ್ಗಳ ಗುರಿ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 47.5 ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 258 ರನ್ ಗಳಿಸಿದೆ. ಜೋ ರೂಟ್ ಮತ್ತು ಲಿಯಾಮ್ ಡಾಸನ್ ಫಿಫ್ಟಿ ಆಟದ ನೆರವಿನಿಂದ ತಂಡ ಈ

ಲಂಡನ್: ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಇಂಗ್ಲೆಂಡ್ (India vs England) 259 ರನ್ಗಳ ಗುರಿ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 47.5 ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 258 ರನ್ ಗಳಿಸಿದೆ. ಜೋ ರೂಟ್ ಮತ್ತು ಲಿಯಾಮ್ ಡಾಸನ್ ಫಿಫ್ಟಿ ಆಟದ ನೆರವಿನಿಂದ ತಂಡ ಈ ಮೊತ್ತವನ್ನು ಪೇರಿಸಿದೆ. ಇದನ್ನೂ ಓದಿ: ಲಾರ್ಡ್ಸ್ನಲ್ಲಿ ಚರಿತ್ರೆ ಸೃಷ್ಟಿಸಿದ ಟೀಂ ಇಂಡಿಯಾ ಕ್ವೀನ್ಸ್ – ಇಂಗ್ಲೆಂಡ್ ವಿರುದ್ಧ 270 ರನ್ಗಳ ಭರ್ಜರಿ ಜಯ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಯಾವುದೇ ವಿಕೆಟ್ ನಷ್ಟವಿಲ್ಲದೇ ಅರ್ಧಶತಕ (61/0) ಪೂರೈಸಿತ್ತು. ಆದರೆ, ತಂಡವು 107 ರನ್ ಹೊತ್ತಿಗೆ ಪ್ರಮುಖ 6 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬೆನ್ ಡಕೆಟ್ 43 ಗಳಿಸಿದ್ದು ಬಿಟ್ಟರೆ, ಯಾವೊಬ್ಬ ಬ್ಯಾಟರ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ನಂತರ ರೂಟ್ ಮತ್ತು ಡಾಸನ್ ತಂಡಕ್ಕೆ ನೆರವಾದರು. ಇಬ್ಬರೂ ಉತ್ತಮ ಜೊತೆಯಾಟದೊಂದಿಗೆ 121 ರನ್ ಕಲೆಹಾಕಿದರು. ಡಾಸನ್ ಔಟಾಗದೇ 68 ರನ್ ಗಳಿಸಿ ಔಟಾದರೆ, ರೂಟ್ 76 ರನ್ಗಳೊಂದಿಗೆ ಅಜೇಯರಾಗಿ ಉಳಿದರು. ಭಾರತದ ಪರ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಮಿಂಚಿದರು. 62 ರನ್ಗಳಿಗೆ 4 ವಿಕೆಟ್ ಕಬಳಿಸಿದರು. ಪ್ರಸಿದ್ಧ್ ಕೃಷ್ಣ ಮತ್ತು ಗುರ್ನೂರ್ ಬ್ರಾರ್ ತಲಾ 2 ಹಾಗೂ ಜಸ್ಪ್ರಿತ್ ಬುಮ್ರಾ, ಶಿವಂ ದುಬೆ ತಲಾ 1 ವಿಕೆಟ್ ಪಡೆದರು. ಇದನ್ನೂ ಓದಿ: ಮುಖ್ಯ ಕೋಚ್ ಹುದ್ದೆಯಿಂದ ಫ್ಲೆಮಿಂಗ್ ಔಟ್ – ಸಿಎಸ್ಕೆಗೆ ಬದಾನಿ ಎಂಟ್ರಿ?