ಬೆಳಗಾವಿ: ಗುಂಡಿನ ದಾಳಿ, ಕೊಲೆಗೆ ಯತ್ನ
ಬೆಳಗಾವಿ: ಇಲ್ಲಿನ ಕ್ಯಾಂಪ್ ಪ್ರದೇಶದ ಜಿಮ್ಖಾನಾ ಮೈದಾನದಲ್ಲಿ ಮಂಗಳವಾರ ರಾತ್ರಿ ಗುಂಡಿನ ದಾಳಿ ಮಾಡಿ, ಸುರೇಶ ಜಾಲಗಾರ ಅವರ ಕೊಲೆಗೆ ಯತ್ನಿಸಲಾಗಿದೆ.‘ಕ್ಲಬ್ನಲ್ಲಿ ರಮ್ಮಿ ಆಡುತ್ತಿದ್ದ ಸುರೇಶ ತಲೆಗೆ ಗನ್ನಿಂದ ಕುಕ್ಕಿದ ನಂತರ ಗುಂಡಿನ ದಾಳಿ ನಡೆಸಲಾಗಿದೆ. ಆದರೆ, ಸುರೇಶ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಐವರು ಈ ಕೃತ್ಯ ಎಸಗಿರುವ ಶಂಕೆ ಇದ್ದು, ತನಿಖೆ ಮಾಡುತ್ತ

ಬೆಳಗಾವಿ: ಇಲ್ಲಿನ ಕ್ಯಾಂಪ್ ಪ್ರದೇಶದ ಜಿಮ್ಖಾನಾ ಮೈದಾನದಲ್ಲಿ ಮಂಗಳವಾರ ರಾತ್ರಿ ಗುಂಡಿನ ದಾಳಿ ಮಾಡಿ, ಸುರೇಶ ಜಾಲಗಾರ ಅವರ ಕೊಲೆಗೆ ಯತ್ನಿಸಲಾಗಿದೆ.‘ಕ್ಲಬ್ನಲ್ಲಿ ರಮ್ಮಿ ಆಡುತ್ತಿದ್ದ ಸುರೇಶ ತಲೆಗೆ ಗನ್ನಿಂದ ಕುಕ್ಕಿದ ನಂತರ ಗುಂಡಿನ ದಾಳಿ ನಡೆಸಲಾಗಿದೆ. ಆದರೆ, ಸುರೇಶ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಐವರು ಈ ಕೃತ್ಯ ಎಸಗಿರುವ ಶಂಕೆ ಇದ್ದು, ತನಿಖೆ ಮಾಡುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.ನಗರ ಪೊಲೀಸ್ ಆಯುಕ್ತರ ಕಚೇರಿ ಬಳಿಯೇ ಘಟನೆ ನಡೆದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.'ಈ ಹಿಂದೆ ಪ್ರಫುಲ್ ಪಾಟೀಲ ಅವರ ಮೇಲೆ ನಾನು ಗುಂಡಿನ ದಾಳಿ ಮಾಡಿದ್ದೆ. ಅದಕ್ಕೆ ಸೇಡು ತೀರಿಸಿಕೊಳ್ಳಲು ಪ್ರಫುಲ್ ಕಡೆಯವರು ನನ್ನ ಹತ್ಯೆಗೆ ಯತ್ನಿಸಿದ್ದಾರೆ’ ಎಂದು ಸುರೇಶ ಜಾಲಗಾರ ಆರೋಪಿಸಿದ್ದಾರೆ.ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕ್ಯಾಂಪ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Read the complete story at Prajavani