ದೇಶದಲ್ಲಿ ಒಂದು ವಾರ ಮಳೆ ಕ್ಷೀಣ
ನವದೆಹಲಿ: ದೇಶದ ವಾಯವ್ಯ, ಮಧ್ಯ ಹಾಗೂ ದಕ್ಷಿಣ ರಾಜ್ಯಗಳಲ್ಲಿ ಮುಂದಿನ 6ರಿಂದ 7 ದಿನಗಳವರೆಗೆ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೋಮವಾರ ಹೇಳಿದೆ.ಈ ಋತುವಿನ ನೈರುತ್ಯ ಮುಂಗಾರು ಮಳೆಯ ಒಟ್ಟಾರೆ ಕೊರತೆಯು ಶೇ 19ಕ್ಕೆ ಏರಿದೆ. ಕಳೆದ ನಾಲ್ಕು ದಿನಗಳಿಂದ ಮಳೆಯ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ದೇಶದಲ್ಲಿ ಸೋಮವಾರ ಶೇ 66ರಷ್ಟು ಮಳೆ ಕೊರತೆ ದಾಖಲಾಗಿದೆ.

ನವದೆಹಲಿ: ದೇಶದ ವಾಯವ್ಯ, ಮಧ್ಯ ಹಾಗೂ ದಕ್ಷಿಣ ರಾಜ್ಯಗಳಲ್ಲಿ ಮುಂದಿನ 6ರಿಂದ 7 ದಿನಗಳವರೆಗೆ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೋಮವಾರ ಹೇಳಿದೆ.ಈ ಋತುವಿನ ನೈರುತ್ಯ ಮುಂಗಾರು ಮಳೆಯ ಒಟ್ಟಾರೆ ಕೊರತೆಯು ಶೇ 19ಕ್ಕೆ ಏರಿದೆ. ಕಳೆದ ನಾಲ್ಕು ದಿನಗಳಿಂದ ಮಳೆಯ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ದೇಶದಲ್ಲಿ ಸೋಮವಾರ ಶೇ 66ರಷ್ಟು ಮಳೆ ಕೊರತೆ ದಾಖಲಾಗಿದೆ. ಭಾನುವಾರ ಶೇ 75ರಷ್ಟು ಕೊರತೆಯಾಗಿತ್ತು.ಒಂಬತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಮವಾರ ಶೂನ್ಯ ಮಳೆ ದಾಖಲಾಗಿದೆ. ಕರ್ನಾಟಕ, ತಮಿಳುನಾಡು ಮತ್ತು ಒಡಿಶಾ ರಾಜ್ಯಗಳಲ್ಲಿ ತಲಾ ಶೇ 99ರಷ್ಟು ಮಳೆ ಕೊರತೆಯಾಗಿದೆ.ಒಂದು ದಿನದ ಮುಂಚೆ ಏಳು ರಾಜ್ಯಗಳಲ್ಲಿ ಶೂನ್ಯ ಮಳೆ ದಾಖಲಾಗಿದ್ದರೆ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಶೇ 98ರಷ್ಟು ಮಳೆ ಕೊರತೆಯಾಗಿತ್ತು. ಕರ್ನಾಟಕದಲ್ಲಿ ಜುಲೈ 11ರಂದು ಶೇ 81ರಷ್ಟು, 12ರಂದು ಶೇ 90ರಷ್ಟು ಮಳೆ ಕೊರತೆ ದಾಖಲಾಗಿದೆ.‘ಮುಂದಿನ 7–10 ದಿನಗಳವರೆಗೆ, ಈಶಾನ್ಯ ಮತ್ತು ಹಿಮಾಲಯದ ತಪ್ಪಲು ಪ್ರದೇಶಗಳನ್ನು ಹೊರತುಪಡಿಸಿ ಭಾರತದ ಹೆಚ್ಚಿನ ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆಯಿಲ್ಲ. ಮುಂಗಾರು ಯಾವಾಗ ಚುರುಕುಗೊಳ್ಳುತ್ತದೆ ಎಂಬುದು ನಮಗೆ ತಿಳಿದಿಲ್ಲ’ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಮಾಜಿ ಕಾರ್ಯದರ್ಶಿ ಎಂ. ರಾಜೀವನ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.‘ಮಳೆ ಕೊರತೆಯಾಗಲು ಮೂಲ ಕಾರಣ ಎಲ್ ನಿನೊ. ಪೆಸಿಫಿಕ್ ಮಹಾಸಾಗರದ ತಾಪಮಾನ ಏರಿಕೆಯಾಗಿದ್ದು, ಪ್ರಪಂಚದಾದ್ಯಂತ ಹವಾಮಾನ ವ್ಯವಸ್ಥೆಗಳ ಮೇಲೆ ತೀವ್ರ ಹಾನಿ ಉಂಟುಮಾಡುತ್ತದೆ. ಈ ವರ್ಷ ಸೂಪರ್ ಎಲ್ ನಿನೊ ಸಂಭವಿಸಬಹುದು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದ್ದಾರೆ.‘ನೈರುತ್ಯ ಮುಂಗಾರು ಸದ್ಯ ತಾತ್ಕಾಲಿಕ ವಿರಾಮ ಪಡೆದುಕೊಂಡ ಸ್ಥಿತಿಯಲ್ಲಿದೆ. ಮುಂಗಾರು ಮಳೆ ಮತ್ತೆ ಚುರುಕಾಗುವ ಸಾಧ್ಯತೆ ಬಗ್ಗೆ ತಿಳಿದುಕೊಳ್ಳಲು ಇನ್ನೊಂದು ವಾರ ಕಾಯಬೇಕಿದೆ’ ಎಂದು ತಿಳಿಸಿದ್ದಾರೆ.ಬಿತ್ತನೆ ಕಾರ್ಯ ಕುಂಠಿತಕೇಂದ್ರ ಕೃಷಿ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಜುಲೈ 10ರವರೆಗೆ ಬೇಸಿಗೆ ಬೆಳೆಗಳಾದ ಭತ್ತ ದ್ವಿದಳ ಧಾನ್ಯಗಳು ರಾಗಿ ಎಣ್ಣೆಕಾಳುಗಳು ಮತ್ತು ಹತ್ತಿ ಬಿತ್ತನೆ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ.