ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿದ ವಚನಾನಂದ ಸ್ವಾಮೀಜಿ
ದಾವಣಗೆರೆ: ಇಲ್ಲಿನ ಜಿಲ್ಲಾ ವಿಶೇಷ ಪೋಕ್ಸೊ ನ್ಯಾಯಾಲಯಕ್ಕೆ ಮಂಗಳವಾರ ಹಾಜರಾದ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ, ಪೋಕ್ಸೊ ಪ್ರಕರಣದಲ್ಲಿ ಮಂಜೂರಾಗಿರುವ ಜಾಮೀನಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.‘ಧಾರ್ಮಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಟೀಕೆ-ಟಿಪ್ಪಣಿ ಸಹಜ. ಇದು ಸತ್ಯಕ್ಕೆ ಸಂದ ಜಯ. ಸತ್ಯ, ನ್ಯಾಯ ಮತ್ತು ಧರ್ಮ ಅಂತ
ದಾವಣಗೆರೆ: ಇಲ್ಲಿನ ಜಿಲ್ಲಾ ವಿಶೇಷ ಪೋಕ್ಸೊ ನ್ಯಾಯಾಲಯಕ್ಕೆ ಮಂಗಳವಾರ ಹಾಜರಾದ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ, ಪೋಕ್ಸೊ ಪ್ರಕರಣದಲ್ಲಿ ಮಂಜೂರಾಗಿರುವ ಜಾಮೀನಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.‘ಧಾರ್ಮಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಟೀಕೆ-ಟಿಪ್ಪಣಿ ಸಹಜ. ಇದು ಸತ್ಯಕ್ಕೆ ಸಂದ ಜಯ. ಸತ್ಯ, ನ್ಯಾಯ ಮತ್ತು ಧರ್ಮ ಅಂತಿಮವಾಗಿ ಉಳಿಯುತ್ತದೆ. ಕಾನೂನು ಗೌರವಿಸುತ್ತೇನೆ ಮತ್ತು ಪಾಲಿಸುತ್ತೇನೆ’ ಎಂದ ವಚನಾನಂದ ಸ್ವಾಮೀಜಿ ‘ಸೈಲೆನ್ಸ್’ ಪುಸ್ತಕ ಪ್ರದರ್ಶಿಸಿದರು.16 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಹರಿಹರ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಸೋಮವಾರ ಆದೇಶಿಸಿತ್ತು. ವಕೀಲ ಎಸ್.ವಿ. ಪಾಟೀಲ ಇದ್ದರು.
Read the complete story at Prajavani