ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಷಿಪ್: ಭಾರತ ಬಾಕ್ಸರ್ಗಳಿಗೆ 5 ಚಿನ್ನ, 10 ಬೆಳ್ಳಿ
ಜಕಾರ್ತಾ (ಪಿಟಿಐ): ಭಾರತದ ಸ್ಪರ್ಧಿಗಳು, ಬುಧವಾರ ಮುಕ್ತಾಯಗೊಂಡ ಏಷ್ಯನ್ 19 ಮತ್ತು 23 ವರ್ಷದೊಳಗಿನವರ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಎರಡು ವಯೋವರ್ಗಗಳಲ್ಲಿ ಒಟ್ಟು ಐದು ಚಿನ್ನ, 10 ರಜತ ಮತ್ತು ನಾಲ್ಕು ಕಂಚಿನ ಪದಕಗಳನ್ನು ಗೆದ್ದುಕೊಂಡರು.19 ವರ್ಷದೊಳಗಿನವರ ಮಹಿಳೆಯರ ವಿಭಾಗದಲ್ಲಿ ಭಾರತ ಎರಡು ಚಿನ್ನ, ಆರು ಬೆಳ್ಳಿ ಗೆದ್ದು

ಜಕಾರ್ತಾ (ಪಿಟಿಐ): ಭಾರತದ ಸ್ಪರ್ಧಿಗಳು, ಬುಧವಾರ ಮುಕ್ತಾಯಗೊಂಡ ಏಷ್ಯನ್ 19 ಮತ್ತು 23 ವರ್ಷದೊಳಗಿನವರ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಎರಡು ವಯೋವರ್ಗಗಳಲ್ಲಿ ಒಟ್ಟು ಐದು ಚಿನ್ನ, 10 ರಜತ ಮತ್ತು ನಾಲ್ಕು ಕಂಚಿನ ಪದಕಗಳನ್ನು ಗೆದ್ದುಕೊಂಡರು.19 ವರ್ಷದೊಳಗಿನವರ ಮಹಿಳೆಯರ ವಿಭಾಗದಲ್ಲಿ ಭಾರತ ಎರಡು ಚಿನ್ನ, ಆರು ಬೆಳ್ಳಿ ಗೆದ್ದುಕೊಂಡಿತು. ಆ ನಿರ್ವಹಣೆಯು ದೇಶದಲ್ಲಿ ಈ ಕ್ರೀಡೆಯು ಸಾಧಿಸುತ್ತಿರುವ ಪ್ರಗತಿಗೆ ಕನ್ನಡಿಯಾಯಿತು.ಚಂದ್ರಿಕಾ ಭೋರೇಶ್ ಪೂಜಾರಿ (51 ಕೆ.ಜಿ) ಅವರು ಫೈನಲ್ನಲ್ಲಿ 5:0 ಯಿಂದ ಉಜ್ಬೇಕಿಸ್ತಾನದ ನಝೋಕಾತ್ ಮರ್ಡಾನೋವಾ ಅವರನ್ನು ಸುಲಭವಾಗಿ ಸೋಲಿಸಿದರು. ಪ್ರಾಚಿ ಅವರು ಇಂಡೊನೇಷ್ಯಾದ ದಿರಾ ಅರ್ತಿಕಾ ಅವರನ್ನು ಮಣಿಸಿ ಸ್ವರ್ಣ ಪದಕ ಕೊರಳಿಗೇರಿಸಿಕೊಂಡರು. 23 ವರ್ಷದೊಳಗಿನ ಮಹಿಳೆಯರ ವಿಭಾಗದಲ್ಲೂ ಭಾರತದ ಸ್ಪರ್ಧಿಗಳು ಸ್ಫೂರ್ತಿಯುತ ಪ್ರದರ್ಶನ ನೀಡಿ ಒಂದು ಚಿನ್ನ, ನಾಲ್ಕು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಬಾಚಿಕೊಂಡರು. ನಿಶಾ (54 ಕೆ.ಜಿ) ಅವರು ಚಿನ್ನದ ಪದಕದ ಸ್ಪರ್ಧೆಯಲ್ಲಿ 5:0 ಯಿಂದ ಜಪಾನ್ನ ಕೋಯಿನ್ ಕೊಕುಫು ಅವರನ್ನು ಸೋಲಿಸಿದರು.ನಿಕಿತಾ ಚಾಂದ್ (60 ಕೆ.ಜಿ), ಕಾಜಲ್ (65 ಕೆ.ಜಿ) ಮತ್ತು ಮುಸ್ಕಾನ್ (75 ಕೆ.ಜಿ) ಅವರು ಫೈನಲ್ನಲ್ಲಿ ತೀವ್ರ ಹೋರಾಟ ನೀಡಿದರೂ ಸೋತು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.