ಕರುನಾಡಲ್ಲಿ ಬರ: ಆರು ಜಿಲ್ಲೆಗಳಲ್ಲಿ ಮಳೆಯಿಲ್ಲ, 24 ಗಂಟೆಯಲ್ಲಿ ಎಲ್ಲಿ ಎಷ್ಟು?
ಬೆಂಗಳೂರು: ಕರ್ನಾಟಕದಲ್ಲಿ ಬರದ ವಾತಾವರಣ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಿದೆ. ಕಳೆದ 24 ಗಂಟೆಗಳಲ್ಲಿ ಆರು ಜಿಲ್ಲೆಗಳಲ್ಲಿ ಒಂದು ಹನಿ ಮಳೆಯೂ ಆಗಿಲ್ಲ. ಉಳಿದ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಅತ್ಯಲ್ಪ ಮಳೆಯಾದ ವರದಿಯಾಗಿದೆ. ಹಲವೆಡೆ ಬರದ ವಾತಾವರಣ ಮುಂದುವರಿದಿದೆ.ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬುಧವಾರ ಬಿಡುಗಡೆ ಮಾಡಿರುವ 24 ಗಂಟೆ ಅವಧಿಯ ಹವಾಮಾನ

ಬೆಂಗಳೂರು: ಕರ್ನಾಟಕದಲ್ಲಿ ಬರದ ವಾತಾವರಣ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಿದೆ. ಕಳೆದ 24 ಗಂಟೆಗಳಲ್ಲಿ ಆರು ಜಿಲ್ಲೆಗಳಲ್ಲಿ ಒಂದು ಹನಿ ಮಳೆಯೂ ಆಗಿಲ್ಲ. ಉಳಿದ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಅತ್ಯಲ್ಪ ಮಳೆಯಾದ ವರದಿಯಾಗಿದೆ. ಹಲವೆಡೆ ಬರದ ವಾತಾವರಣ ಮುಂದುವರಿದಿದೆ.ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬುಧವಾರ ಬಿಡುಗಡೆ ಮಾಡಿರುವ 24 ಗಂಟೆ ಅವಧಿಯ ಹವಾಮಾನ ಹಾಗೂ ಮಳೆ ಮಾಹಿತಿ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲ್ಲೂಕಿನ ಐಕಳದಲ್ಲಿ ಅತ್ಯಧಿಕ 15.5. ಮಿ.ಮೀ ಮಳೆಯಾಗಿದೆ.ಧಾರವಾಡ ಜಿಲ್ಲೆಯ ಕೋಟಬಾಗಿಯಲ್ಲಿ 14.5 ಮಿ.ಮೀ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಇಟ್ಟಸಂದ್ರದಲ್ಲಿ 11.5 ಮಿ,ಮೀ, ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಚಂಗಡಿಹಳ್ಳಿಯಲ್ಲಿ 10 ಮಿ. ಮೀ ಮಳೆಯಾಗಿದೆ.ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಪಗಡದಿನ್ನಿಯಲ್ಲಿ 8.5 ಮಿ.ಮೀ, ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲ್ಲೂಕಿನ ಕೊಪ್ಪದಲ್ಲಿ 7.5 ಮಿ.ಮೀ, ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಧರೆಕೊಪ್ಪದಲ್ಲಿ 6 ಮಿ.ಮೀ, ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಸಿದ್ದೇಶ್ವರದಲ್ಲಿ 5.5. ಮಿ.ಮೀ, ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕನ್ನಮೇಡಿಯಲ್ಲಿ 5 ಮಿ.ಮೀ, ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲ್ಲೂಕಿನ ಎನ್ಎಂ ತಡಸದಲ್ಲಿ 4 ಮಿ.ಮೀ ಮಳೆಯಾಗಿದೆ.ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಹತ್ತೂರು, ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಪರವಾಡ, ಕೊಪ್ಪಳ ಜಿಲ್ಲೆ ಕನಕಗಿರಿ ತಾಲ್ಲೂಕಿನ ಚಿಕ್ಕಡಂಕನಾಳದಲ್ಲಿ ತಲಾ 3.5 ಮಿ.ಮೀ, ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಇನ್ನಾ, ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಮಡ್ಕಾಳದಲ್ಲಿ ತಲಾ 3 ಮಿ.ಮೀ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಹಿರೇಜಂಬೂರಿನಲ್ಲಿ 2.5 ಮಿ.ಮೀ ಮಳೆಯಾಗಿದೆ.ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಮುದಿಗೆರೆಯಲ್ಲಿ 2 ಮಿ.ಮೀ, ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ದೇಬೂರಿನಲ್ಲಿ 1.5 ಮಿ.ಮೀ, ವಿಜಯಪುರ ಜಿಲ್ಲೆ ಚಡಚಣ ತಾಲ್ಲೂಕಿನ ಬರಡೋಲ, ಚಿಕ್ಕಬಳ್ಳಾಪುರ ತಾಲ್ಲೂಕು ಗುಂಡಿಬಂಡೆ ತಾಲ್ಲೂಕಿನ ತಿರುಮಣಿ, ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಅಣಜಿಗೆರೆಯಲ್ಲಿ ತಲಾ 1 ಮಿ,ಮೀ ಮಳೆ ಸುರಿದಿದೆ.ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕುಟ್ಟ, ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಅಲಗೂರು, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ, ಚಾಮರಾಜನಗರ ತಾಲ್ಲೂಕು ಕೂಡ್ಲೂರಿನಲ್ಲಿ ತಲಾ 0.5 ಮಿ.ಮೀ ಮಳೆಯಾಗಿದೆ.ಮಂಡ್ಯ , ಗದಗ, ರಾಮನಗರ, ಬಳ್ಳಾರಿ, ಯಾದಗಿರಿ, ಬೆಂಗಳೂರು ನಗರ ಜಿಲ್ಲೆಯಲ್ಲಿ ಮಳೆಯಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.