ತಾಕತ್ತಿದ್ದರೆ ನನ್ನನ್ನು ಮೊದಲ ಆರೋಪಿಯನ್ನಾಗಿ ಮಾಡಲಿ: ಎಚ್ಡಿಕೆ
ನವದೆಹಲಿ: ಬಿಡದಿಯ ಮಂಡಲಹಳ್ಳಿ ಗ್ರಾಮದ ರೈತರ ಮೇಲೆ ಎಫ್ಐಆರ್ ದಾಖಲಿಸಿರುವ ಪೊಲೀಸರ ಕ್ರಮವನ್ನು ಖಂಡಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ‘ನಾಡಿದ್ದು ಆ ಗ್ರಾಮಕ್ಕೆ ನಾನು ಹೋಗುತ್ತೇನೆ. ತಾಕತ್ತಿದ್ದರೆ ನನ್ನ ವಿರುದ್ಧ ಎಫ್ಐಆರ್ ದಾಖಲಿಸಲಿ’ ಎಂದು ಸವಾಲು ಹಾಕಿದರು.ನವದೆಹಲಿಯಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿದ ಅವರು, ‘ಸಂಬಂಧವಿಲ್ಲದವರು ಕೊಟ್ಟ ದೂರಿನ ಮೇರ
ನವದೆಹಲಿ: ಬಿಡದಿಯ ಮಂಡಲಹಳ್ಳಿ ಗ್ರಾಮದ ರೈತರ ಮೇಲೆ ಎಫ್ಐಆರ್ ದಾಖಲಿಸಿರುವ ಪೊಲೀಸರ ಕ್ರಮವನ್ನು ಖಂಡಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ‘ನಾಡಿದ್ದು ಆ ಗ್ರಾಮಕ್ಕೆ ನಾನು ಹೋಗುತ್ತೇನೆ. ತಾಕತ್ತಿದ್ದರೆ ನನ್ನ ವಿರುದ್ಧ ಎಫ್ಐಆರ್ ದಾಖಲಿಸಲಿ’ ಎಂದು ಸವಾಲು ಹಾಕಿದರು.ನವದೆಹಲಿಯಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿದ ಅವರು, ‘ಸಂಬಂಧವಿಲ್ಲದವರು ಕೊಟ್ಟ ದೂರಿನ ಮೇರೆಗೆ ರೈತರ ಮೇಲೆ ವಿನಾಕಾರಣ ಎಫ್ಐಆರ್ ಹಾಕಿದ್ದಾರೆ. ಅಕ್ರಮವಾಗಿ ಜಮೀನಿಗೆ ಸರ್ವೆ ಮಾಡಲು ಬಂದಾಗ ರೈತರು ಸಹಜವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದರು.‘ಸರ್ಕಾರದ ಚಿತಾವಣೆಯಿಂದಲೇ ಅಧಿಕಾರಿಗಳು ಸರ್ವೆಗೆ ಬಂದಿದ್ದಾರೆ. ಮುಖ್ಯಮಂತ್ರಿಗೆ ಇಷ್ಟೊಂದು ಹಟ ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ರೈತರ ಮೇಲೆ ಎರಡು ಎಫ್ಐಆರ್ಗಳನ್ನು ಹಾಕಿದ್ದಾರೆ. ಅವರಿಗೆ ಧೈರ್ಯವಿದ್ದರೆ ನನ್ನ ವಿರುದ್ಧ ಪ್ರಕರಣ ಹಾಕಲಿ. ನಾನೇ ಚಿತಾವಣೆ ಮಾಡುತ್ತಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ನನ್ನನ್ನೇ ಮೊದಲ ಆರೋಪಿಯನ್ನಾಗಿ ಮಾಡಿ’ ಎಂದರು.‘ಊರಿನಲ್ಲಿ ಇಲ್ಲದವರು, ದೆಹಲಿಗೆ ಬಂದಿದ್ದವರ ಮೇಲೂ ಪ್ರಕರಣ ದಾಖಲಿಸಿದ್ದಾರೆ. ಇಂತಹ ಬೆದರಿಕೆ ಮತ್ತು ಪ್ರಕರಣಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ರೈತರು ಶಾಂತಿಯುತವಾಗಿ ಪ್ರತಿಭಟನೆ ಮುಂದುವರಿಸಬೇಕು. ನ್ಯಾಯಾಲಯದ ಮುಂದೆ ನಾವೆಲ್ಲ ಹೋರಾಟ ಮಾಡೋಣ’ ಎಂದು ಅವರು ಹೇಳಿದರು.ಇನ್ಸ್ಪೆಕ್ಟರ್ ಮುರಳಿ ಎಂಬುವವರಿಂದ ದೂರು ಪಡೆದುಕೊಂಡು, ಅದರ ಆಧಾರದಲ್ಲಿ ಹಾಕಿರುವ ಎಫ್ಐಆರ್ನಲ್ಲಿ ಯಾರ ಹೆಸರನ್ನೂ ಉಲ್ಲೇಖ ಮಾಡಿಲ್ಲ. ಎ1 ಆರೋಪಿ ‘ಸಾಮಾನ್ಯ ವ್ಯಕ್ತಿ’ ಎಂದು ಬರೆಯಲಾಗಿದೆ. ಚಾಲಕ ಮೊಹಮ್ಮದ್ ಸಮೀರ್ ಕಡೆಯಿಂದ ಮತ್ತೊಂದು ದೂರು ಕೊಡಿಸಿದ್ದಾರೆ. ಈ ವ್ಯಕ್ತಿ ವಾಸ ಇರುವುದು ರಾಮನಗರದಲ್ಲಿ. ಮಂಡಲಹಳ್ಳಿಗೂ ಆತನಿಗೂ ಯಾವುದೇ ಸಂಬಂಧ ಇಲ್ಲ. ಆತ 11 ಜನರ ವಿರುದ್ಧ ದೂರು ನೀಡಿದ್ದಾನೆ. ಹೋರಾಟಗಾರರನ್ನು ಹಣಿಯುವ ಉದ್ದೇಶದಿಂದಲೇ ಆತನ ಮೂಲಕ ದುರುದ್ದೇಶಪೂರ್ವಕವಾಗಿ ದೂರು ಕೊಡಿಸಿದ್ದಾರೆ’ ಎಂದು ಅವರು ಕಿಡಿಕಾರಿದರು.ಎನ್ಒಸಿ ಕೊಟ್ಟ ನೈಸ್ ಕಂಪನಿ: ‘ನೈಸ್ ಯೋಜನೆ ಬಂದು 30 ವರ್ಷ ಆಯಿತು. ಭೂಮಿ ಕಳೆದುಕೊಂಡ ರೈತರು ಬಂದಬಂದ ಮುಖ್ಯಮಂತ್ರಿಗಳಿಗೆಲ್ಲ ಅರ್ಜಿ ಕೊಡುತ್ತಲೇ ಇದ್ದಾರೆ. ಭೂಮಿಯನ್ನು ಅಭಿವೃದ್ಧಿಪಡಿಸಿ ನಿವೇಶನ ಕೊಡುತ್ತೇವೆ ಎಂದು ಹೇಳಿದವರು ಇವತ್ತಿನವರೆಗೂ 4,000 ರೈತ ಕುಟುಂಬಗಳಿಗೆ ನಿವೇಶನ ಕೊಟ್ಟಿಲ್ಲ. ಬಿಡದಿ ಯೋಜನೆಯಲ್ಲಿ ಭೂ ಸಂತ್ರಸ್ತರಿಗೆ ಶೇ 50 ಪರಿಹಾರ ಹಾಗೂ ಶೇ 50 ಭೂಮಿ ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ. ಇವರನ್ನು ನಂಬಿದರೆ ಜನ ಮೋಸ ಹೋಗುವುದು ಖಚಿತ’ ಎಂದು ಅವರು ಎಚ್ಚರಿಕೆ ನೀಡಿದರು.‘ನೈಸ್ ಯೋಜನೆಯಲ್ಲಿ ಕೆಲವರು ಒಂದು ಎಕರೆಗೆ ಒಂದೂವರೆ ಲಕ್ಷ ಕೊಟ್ಟು ಜಾಗ ಲಪಟಾಯಿಸಿದ್ದಾರೆ. ಕೊಳ್ಳೆ ಹೊಡೆದ ಭೂಮಿಯಲ್ಲಿ ಎಷ್ಟು ಜನಕ್ಕೆ ನಿವೇಶನ ಕೊಟ್ಟಿದ್ದೀರಿ, ಎಷ್ಟು ಜನಕ್ಕೆ ಎನ್ಒಸಿ ಕೊಟ್ಟಿದ್ದೀರಿ’ ಎಂದು ಪ್ರಶ್ನಿಸಿದ ಅವರು, ‘ನೈಸ್ನವರು ಗೌರಮ್ಮ ಹಾಗೂ ಸುರೇಶ ಎಂಬುವವರಿಗೆ ನಿವೇಶನ ಮತ್ತು ಎನ್ಒಸಿ ಕೊಟ್ಟಿದ್ದಾರೆ’ ಎಂದು ವ್ಯಂಗ್ಯವಾಡಿದರು.