ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ಸರ್ಕಾರದಿಂದ ಕೃಷಿಕರ ಉದ್ಯೋಗಭಂಗ!ಸರ್ಕಾರವು ಬಿಡದಿ ರೈತರಿಂದ ಜಮೀನು ಪಡೆದು ಕೈಗಾರಿಕೆಗೋ, ಜನವಸತಿಗೋ ಅಥವಾ ಮತ್ಯಾವುದೋ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಬಹುದು. ಅದಕ್ಕೆ ಪರಿಹಾರವಾಗಿ ಅನ್ನದಾತರಿಗೆ ಕೋಟಿ ರೂಪಾಯಿ ಪರಿಹಾರ ಕೊಡಬಹುದು. ಆದರೆ, ವ್ಯವಸಾಯವನ್ನೇ ಉದ್ಯೋಗ ಮಾಡಿಕೊಂಡು ಬದುಕುತ್ತಿರುವ ಕುಟುಂಬಗಳು ಮುಂದೆ ಯಾವ ಉದ್ಯೋಗ ಮಾಡುತ್ತವೆ? ಹುಟ್ಟಿದಾಗಿನಿಂದ ತೋಟ–ಗ
ಸರ್ಕಾರದಿಂದ ಕೃಷಿಕರ ಉದ್ಯೋಗಭಂಗ!ಸರ್ಕಾರವು ಬಿಡದಿ ರೈತರಿಂದ ಜಮೀನು ಪಡೆದು ಕೈಗಾರಿಕೆಗೋ, ಜನವಸತಿಗೋ ಅಥವಾ ಮತ್ಯಾವುದೋ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಬಹುದು. ಅದಕ್ಕೆ ಪರಿಹಾರವಾಗಿ ಅನ್ನದಾತರಿಗೆ ಕೋಟಿ ರೂಪಾಯಿ ಪರಿಹಾರ ಕೊಡಬಹುದು. ಆದರೆ, ವ್ಯವಸಾಯವನ್ನೇ ಉದ್ಯೋಗ ಮಾಡಿಕೊಂಡು ಬದುಕುತ್ತಿರುವ ಕುಟುಂಬಗಳು ಮುಂದೆ ಯಾವ ಉದ್ಯೋಗ ಮಾಡುತ್ತವೆ? ಹುಟ್ಟಿದಾಗಿನಿಂದ ತೋಟ–ಗದ್ದೆಗಳಲ್ಲಿ ದುಡಿದು ನೆಮ್ಮದಿಯ ಜೀವನ ಸಾಗಿಸುತ್ತಿರುವ ಜೀವಗಳಿಗೆ ಜಮೀನು ಸ್ವಾಧೀನ ಪಡಿಸಿಕೊಳ್ಳುತ್ತಿರುವುದು ಆಘಾತಕಾರಿ ಸಂಗತಿ. ಪರಿಹಾರ ತೆಗೆದುಕೊಂಡು ಇದ್ದಕ್ಕಿದ್ದಂತೆ ಅವರು ವ್ಯಾಪಾರ ಮಾಡಲು ಬರುತ್ತದೆಯೆ? ಷೇರುಪೇಟೆಯಲ್ಲಿ ಹೂಡಿ ದುಪ್ಪಟ್ಟು ಮಾಡಲು ಸಾಧ್ಯವೆ? ಮನೆಯಲ್ಲಿ ಹಣ ಇರಲಿ, ಇಲ್ಲದಿರಲಿ; ಎಲ್ಲರೂ ಬಯಸುವುದು ಮನಸ್ಸಿಗೆ ಇಷ್ಟವಾಗುವ ಕೆಲಸ. ಅದಕ್ಕೆ ತಕ್ಕ ಪ್ರತಿಫಲ. ಇತ್ತೀಚೆಗೆ ಕೆಲವು ಕಂಪನಿಗಳು ಸಾವಿರಾರು ಸಾಫ್ಟ್ವೇರ್ ಉದ್ಯೋಗಿಗಳನ್ನು ವಜಾಗೊಳಿಸಿದ್ದು ದೊಡ್ಡ ಸುದ್ದಿಯಾಯಿತು. ಈಗ ಸರ್ಕಾರವೇ ಸಾವಿರಾರು ರೈತರನ್ನು ನಿರುದ್ಯೋಗಿಗಳನ್ನಾಗಿ ಮಾಡಲು ಹೊರಟಿದೆ. ⇒ನಾಗರಾಜ್ ಮಾದೇಗೌಡ, ಕ್ಯಾಲಿಫೋರ್ನಿಯಾ ತೆರೆದ ಬಾಗಿಲಿನ ಪಯಣ ಅಪಾಯಕಾರಿಧರ್ಮಸ್ಥಳ–ಮಂಗಳೂರು ಮಾರ್ಗದಲ್ಲಿ ಪ್ರತಿದಿನ ಸಂಚರಿಸುವ ಬಸ್ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಉದ್ಯೋಗಸ್ಥರು ಆಸನವಿಲ್ಲದೆ ಬಸ್ನ ಬಾಗಿಲಲ್ಲೇ ನಿಂತು ಜೀವದ ಹಂಗು ತೊರೆದು ಪ್ರಯಾಣಿಸುವ ಸ್ಥಿತಿ ಇದೆ. ಬಸ್ ಚಲಿಸುತ್ತಿರುವಾಗ ಬಾಗಿಲು ತೆರೆದಿರುವುದು ಅಪಾಯಕಾರಿ. ಈ ಹಿಂದೆ ಇಂತಹ ನಿರ್ಲಕ್ಷ್ಯದಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಸಮಸ್ಯೆ ಬರೀ ಈ ಮಾರ್ಗಕ್ಕಷ್ಟೇ ಸೀಮಿತವಲ್ಲ. ರಾಜ್ಯದ ಹಲವು ಮಾರ್ಗಗಳಲ್ಲೂ ಇದೇ ಪರಿಸ್ಥಿತಿ ಇದೆ. ಕೆಲವೊಮ್ಮೆ ಬಸ್ಗಳು ನಿಲ್ದಾಣದಲ್ಲಿ ನಿಲ್ಲದೆ ಹೋಗುವುದರಿಂದ ವಿದ್ಯಾರ್ಥಿಗಳು ಶಾಲಾಕಾಲೇಜುಗಳಿಗೆ ಹಾಗೂ ಉದ್ಯೋಗಸ್ಥರು ಕೆಲಸಕ್ಕೆ ಸಕಾಲದಲ್ಲಿ ತಲಪಲು ಸಾಧ್ಯವಾಗುತ್ತಿಲ್ಲ. ಜನಸಂದಣಿ ಹೆಚ್ಚಿರುವ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿ ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಬೇಕಿದೆ.⇒ಪ್ರದೀಪ್ ಶಾಕ್ಯ, ಕೊಲ್ಪೆದಬೈಲ್ಜನರ ಸಂಕಟಗಳಿಗೆ ಮಿಡಿದ ರಾಜಕಾರಣಿಇಂದಿನ ರಾಜಕೀಯ ವ್ಯವಸ್ಥೆ ಮತ್ತು ರಾಜಕಾರಣಿಗಳ ಬಗ್ಗೆ ಜನರಲ್ಲಿ ಅವಜ್ಞೆ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ತಿಕೋಟಾ ತಾಲ್ಲೂಕಿನ ಸೋಮದೇವರಹಟ್ಟಿಯಲ್ಲಿ ರೈತರೊಬ್ಬರು ಕೃಷಿಯಿಂದ ಗಳಿಸಿದ ಆದಾಯದಲ್ಲಿ ನಿರ್ಮಿಸಿದ ಮನೆಗೆ ಸಚಿವ ಎಂ.ಬಿ. ಪಾಟೀಲ ಅವರ ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ. ಜನಪ್ರತಿನಿಧಿಗಳು ರೈತರ ಬದುಕಿಗೆ ಮಿಡಿಯುವ ಮತ್ತು ದುಡಿಯುವ ವಿದ್ಯಮಾನವೇ ಅಪರೂಪ. ಜನರ ಸಮಸ್ಯೆಗಳನ್ನು ಹತ್ತಿರದಿಂದ ಆಲಿಸಿ ಬಗೆಹರಿಸಿದರೆ ಜನಪ್ರತಿನಿಧಿಗಳು ರೈತರ ಮನಸ್ಸಿನಲ್ಲಿ ಸ್ಥಾನ ಪಡೆಯುತ್ತಾರೆ. ಇದಕ್ಕೆ ಎಂ.ಬಿ. ಪಾಟೀಲರೇ ನಿದರ್ಶನ. ಹಿಂದಿನ ಸರ್ಕಾರದಲ್ಲಿ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದರು. ಇದರಿಂದ ಈ ಭಾಗದ ರೈತರು ವಾಣಿಜ್ಯ ಬೆಳೆ ಬೆಳೆಯಲು ಸಾಧ್ಯವಾಗಿದೆ. ಬಹುತೇಕ ಜನರು ಮಹಾರಾಷ್ಟ್ರಕ್ಕೆ ಗುಳೆ ಹೋಗುವುದು ತಪ್ಪಿದೆ. ⇒ಮಲ್ಲಿಕಾರ್ಜುನ್ ತೇಲಿ, ಜಮಖಂಡಿಯುವಜನರ ಅಳಲಿಗೆ ಸರ್ಕಾರ ಕಿವುಡುಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಹೋರಾಟ ನಡೆಸುತ್ತಿದೆ. ದೇಶದ ಸಮಾನ ಮನಸ್ಕರು, ಚಿಂತಕರು ಸೇರಿ ಹಲವಾರು ಸಂಘ–ಸಂಸ್ಥೆಗಳು ಇದಕ್ಕೆ ಬೆಂಬಲ ನೀಡಿವೆ. ಅನಿರ್ದಿಷ್ಟಾವಧಿ ಉಪವಾಸ ಮಾಡುತ್ತಿರುವ ಸೊನಮ್ ವಾಂಗ್ಚೂಕ್ ಅವರ ಆರೋಗ್ಯ ಹದಗೆಟ್ಟು, ನಿತ್ರಾಣರಾಗಿದ್ದಾರೆ. ಪರಿಸರ ಹೋರಾಟಗಾರ ಜಿ.ಡಿ. ಅಗರವಾಲ್ ಅವರು ಆಮರಣ ಉಪವಾಸ ಸತ್ಯಾಗ್ರಹ ಮಾಡಿ ಪ್ರಾಣ ಅರ್ಪಿಸಿದ ಉದಾಹರಣೆ ಇನ್ನೂ ಜನರ ಮನಸ್ಸಿನಲ್ಲಿದೆ. ದೊಡ್ಡಮಟ್ಟದಲ್ಲಿ ಹೋರಾಟ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಕುರುಡಾಗಿದೆ. ಇದು ಅದರ ದುರಾಡಳಿತಕ್ಕೆ ಹಿಡಿದ ಕನ್ನಡಿ. ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಾವು ಸಂಭವಿಸಿ ತಿಂಗಳುಗಳೇ ಕಳೆದರೂ ಪ್ರಧಾನಿಯವರು ಮಾತ್ರ ವಿದೇಶ ಪ್ರವಾಸದಲ್ಲಿ ಮಗ್ನರಾಗಿದ್ದಾರೆ. ಹಾಗಾದರೆ ಯುವಜನತೆಯ ಅಳಲು ಕೇಳುವವರು ಯಾರು? ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಅಧಿಕಾರ ದಾಹದ ಮುಂದೆ ವಿದ್ಯಾರ್ಥಿಗಳ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ⇒ಹುಸೇನಬಾಷಾ ತಳೇವಾಡ, ಹುಬ್ಬಳ್ಳಿಸ್ವಜನಪಕ್ಷಪಾತ: ವಿಶ್ವಾಸಾರ್ಹತೆಗೆ ಧಕ್ಕೆಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ತಮ್ಮ ಪುತ್ರಿಗೆ ಉದ್ಯೋಗದಕ್ಕಿಸಿಕೊಳ್ಳಲು ಸುಳ್ಳು ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಲ್ಲಿಸಿ ಅಮಾನತುಗೊಂಡಿದ್ದಾರೆ. ದೇಶದ ಕೋಟ್ಯಂತರ ಭಕ್ತರು ನೀಡಿದ ಅಯೋಧ್ಯೆಯ ರಾಮಮಂದಿರದ ಕಾಣಿಕೆ ಹಣವನ್ನು ದೇವಸ್ಥಾನ ನಿರ್ಮಾಣಕ್ಕೆ ಶ್ರಮಿಸಿದವರೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎಂಬ ಮಾತು ನಿಜವಾಗಿದೆ. ಸಾವಿರಾರು ಯುವಜನರು ಉದ್ಯೋಗ ಬಯಸಿ ಹಗಲಿರುಳೆನ್ನದೆ ವ್ಯಾಸಂಗಮಾಡಿ ಭವಿಷ್ಯ ಕಟ್ಟಿಕೊಳ್ಳಲು ಕನಸು ಕಾಣುತ್ತಿರುತ್ತಾರೆ. ಉದ್ಯೋಗ ನೀಡಬೇಕಾದ ಸ್ಥಾನದಲ್ಲಿರುವ ವ್ಯಕ್ತಿಗಳೇ ಹಣ ಗಳಿಕೆ ಅಥವಾ ಸ್ವಜನಪಕ್ಷಪಾತ ಎಸಗುತ್ತಿರುವುದು ಅಕ್ಷಮ್ಯ. ದೇಶದುದ್ದಕ್ಕೂ ಇರುವ ರಾಮಭಕ್ತರನ್ನು ಪ್ರಚೋದಿಸಿ ಇಟ್ಟಿಗೆ, ಹಣ ಸಂಗ್ರಹಿಸಲಾಗಿತ್ತು. ಅವರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಮಂದಿರ ನಿರ್ಮಿಸಲಾಗಿತ್ತು. ಈಗ ಕಾಣಿಕೆ ರೂಪದಲ್ಲಿ ನೀಡಿದ ಹಣವನ್ನು ಚೋರಿ ಮಾಡಿರುವುದು ಭಕ್ತರಿಗೆ ಎಸಗಿದ ದ್ರೋಹ. ಎಂ.ಜಿ. ರಂಗಸ್ವಾಮಿ, ಹಿರಿಯೂರು