ಅಮೆರಿಕ ದಾಳಿ: ಇರಾನ್ನ ಏಳು ಸೈನಿಕರು ಸಾವು
ದುಬೈ (ಎಪಿ): ಇರಾನ್ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ 388ನೇ ಮೆಕಾನೈಸ್ಡ್ ಇನ್ಫೆಂಟ್ರಿ ಬ್ರಿಗೇಡ್ನಲ್ಲಿ ನಿಯೋಜನೆಗೊಂಡಿದ್ದ ಕನಿಷ್ಠ ಏಳು ಸೈನಿಕರು ಮೃತಪಟ್ಟಿದ್ದಾರೆ ಎಂದು ಇರಾನ್ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.ಹೊರ್ಮುಜ್ ಜಲಸಂಧಿಯ ಪ್ರಮುಖ ಭಾಗವಾದ ಗ್ರೇಟರ್ ಟುಂಬ್ ದ್ವೀಪದಲ್ಲಿನ ಇರಾಕ್ ಸೇನಾನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿಗಳನ್ನು

ದುಬೈ (ಎಪಿ): ಇರಾನ್ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ 388ನೇ ಮೆಕಾನೈಸ್ಡ್ ಇನ್ಫೆಂಟ್ರಿ ಬ್ರಿಗೇಡ್ನಲ್ಲಿ ನಿಯೋಜನೆಗೊಂಡಿದ್ದ ಕನಿಷ್ಠ ಏಳು ಸೈನಿಕರು ಮೃತಪಟ್ಟಿದ್ದಾರೆ ಎಂದು ಇರಾನ್ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.ಹೊರ್ಮುಜ್ ಜಲಸಂಧಿಯ ಪ್ರಮುಖ ಭಾಗವಾದ ಗ್ರೇಟರ್ ಟುಂಬ್ ದ್ವೀಪದಲ್ಲಿನ ಇರಾಕ್ ಸೇನಾನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿಗಳನ್ನು ನಡೆಸಿರುವುದಾಗಿ ಅಮೆರಿಕ ಹೇಳಿದ್ದು, ಇದು ವಾಣಿಜ್ಯ ಹಡಗುಗಳ ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದು ಎನ್ನಲಾಗುತ್ತಿದೆ.ವೈಮಾನಿಕ ದಾಳಿ ನಡೆದ ಸಂದರ್ಭದಲ್ಲಿ ಸೈನಿಕರು ಇರಾನ್ನ ಆಗ್ನೇಯ ಸಿಸ್ತಾನ್ ಮತ್ತು ಬಲೂಚಿಸ್ತಾನ ಪ್ರಾಂತ್ಯದ ಬ್ಯಾರಕ್ಗಳಲ್ಲಿ ಇದ್ದರು. ಅಮೆರಿಕದ ಸೇನಾಪಡೆಗಳು ಕನಿಷ್ಠ 13 ಕ್ಷಿಪಣಿಗಳಿಂದ ಏಳು ತಾಸು ದಾಳಿ ನಡೆಸಿವೆ ಎಂದು ವರದಿಯಲ್ಲಿ ತಿಳಿಸಿದೆ.‘ಅಮೆರಿಕದ ದಾಳಿಯ ವಿರುದ್ಧ ನಿರ್ಣಾಯಕ ಪ್ರತ್ಯುತ್ತರ ನೀಡುವುದಾಗಿ’ ಇರಾನ್ ಸೇನೆ ಗುಡುಗಿದೆ. 260 ಮಂದಿಗೆ ಗಾಯಅಮೆರಿಕ ನಡೆಸಿದ ದಾಳಿಯಲ್ಲಿ 260ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ನ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.ಹಗಲೂ ದಾಳಿ– ಅಮೆರಿಕ:ಇರಾನ್ನ ಆಕ್ರಮಣ ತೀವ್ರಗೊಳ್ಳುತ್ತಿರುವ ಕಾರಣ ಹಗಲಲ್ಲೂ ಇರಾನ್ ಗುರಿಯಾಗಿಸಿ ವೈಮಾನಿಕ ದಾಳಿ ಆರಂಭಿಸಿರುವುದಾಗಿ ಅಮೆರಿಕ ಸೇನೆ ಬುಧವಾರ ತಿಳಿಸಿದೆ.ಇತ್ತೀಚಿನ ದಿನಗಳಲ್ಲಿ ಅಮೆರಿಕ ರಾತ್ರಿ ಮಾತ್ರ ಇರಾನ್ ಮೇಲೆ ದಾಳಿ ನಡೆಸುತ್ತಿತ್ತು. ದಿಗ್ಬಂಧನದ ವಿರುದ್ಧ ಇರಾನ್ ಕಿಡಿಇರಾನ್ನ ಬಂದರುಗಳ ಮೇಲೆ ಅಮೆರಿಕ ಮತ್ತೆ ದಿಗ್ಬಂಧನ ಹೇರಿದೆ. ಹೊರ್ಮುಜ್ ಜಲಸಂಧಿ ದಾಟಲು ಯತ್ನಿಸುತ್ತಿದ್ದ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಅಮೆರಿಕ ವಿಧಿಸಿರುವ ದಿಗ್ಬಂಧನಕ್ಕೆ ಪ್ರತಿಯಾಗಿ ಪಶ್ಚಿಮ ಏಷ್ಯಾದ ವಾಣಿಜ್ಯ ಮಾರ್ಗವನ್ನು ಬಂದ್ ಮಾಡುವುದಾಗಿ ಇರಾನ್ ಅರೆಸೇನಾಪಡೆಯ ರೆವಲ್ಯೂಷನರಿ ಗಾರ್ಡ್ ಎಚ್ಚರಿಕೆ ನೀಡಿದೆ. ಈ ಪ್ರದೇಶದಿಂದ ರಫ್ತಾಗುವ ತೈಲ ಮತ್ತು ಅನಿಲ ಒಂದೋ ಎಲ್ಲರಿಗೂ ಸಿಗಬೇಕು ಇಲ್ಲದಿದ್ದರೆ ಯಾರಿಗೂ ಸಿಗಬಾರದು ಎಂದು ಗುಡುಗಿದೆ. ಅಮೆರಿಕ ಮೊದಲಿಗೆ ಕಳೆದ ಏಪ್ರಿಲ್ನಲ್ಲಿ ಇರಾನ್ ಬಂದರುಗಳ ಮೇಲೆ ದಿಗ್ಬಂಧನ ವಿಧಿಸಿತ್ತು. ಜೂನ್ನಲ್ಲಿ ಉಭಯ ದೇಶಗಳ ಮಧ್ಯೆ ಮಧ್ಯಂತರ ಕದನ ವಿರಾಮ ಒಪ್ಪಂದ ಏರ್ಪಟ್ಟ ಬಳಿಕ ದಿಗ್ಬಂಧನವನ್ನು ತೆರವು ಮಾಡಿತ್ತು. ಹೊರ್ಮುಜ್ ಜಲಸಂಧಿಯ ವಿಚಾರವಾಗಿ ಉಭಯ ದೇಶಗಳ ನಡುವೆ ಸಂಘರ್ಷ ತೀವ್ರಗೊಂಡ ಬಳಿಕ ಮಾತುಕತೆಯು ಸ್ಥಗಿತಗೊಂಡಿದೆ.