ಜನ ನಾಯಗನ್ ಮರು ಸೆನ್ಸಾರ್| 24 ಸೆಕೆಂಡ್ ಸೇರ್ಪಡೆ – ರನ್ಟೈಮ್ ಎಷ್ಟು ಗೊತ್ತಾ?
ತಮಿಳುನಾಡು ಸಿಎಂ, ನಟ ದಳಪತಿ ವಿಜಯ್ (Vijay) ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ (Jana Nayagan) ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ, ಸದ್ದಿಲ್ಲದೆ ಚಿತ್ರದ ಮರು ಸೆನ್ಸಾರ್ (Re-certification) ಪ್ರಕ್ರಿಯೆ ಮುಗಿದಿರುವ ಆಸಕ್ತಿದಾಯಕ ವಿಚಾರ ಹೊರಬಿದ್ದಿದೆ. ಕಳೆದ ವಾರವಷ್ಟೇ ಹಲವು ಕಟ್ಗಳೊಂದಿಗೆ ಸೆನ್ಸಾರ್ ಮಂಡಳಿಯಿಂದ ‘ಎ’ (A Certificate) ಪ

ತಮಿಳುನಾಡು ಸಿಎಂ, ನಟ ದಳಪತಿ ವಿಜಯ್ (Vijay) ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ (Jana Nayagan) ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ, ಸದ್ದಿಲ್ಲದೆ ಚಿತ್ರದ ಮರು ಸೆನ್ಸಾರ್ (Re-certification) ಪ್ರಕ್ರಿಯೆ ಮುಗಿದಿರುವ ಆಸಕ್ತಿದಾಯಕ ವಿಚಾರ ಹೊರಬಿದ್ದಿದೆ. ಕಳೆದ ವಾರವಷ್ಟೇ ಹಲವು ಕಟ್ಗಳೊಂದಿಗೆ ಸೆನ್ಸಾರ್ ಮಂಡಳಿಯಿಂದ ‘ಎ’ (A Certificate) ಪ್ರಮಾಣಪತ್ರ ಪಡೆದುಕೊಂಡಿದ್ದ ಈ ಚಿತ್ರವನ್ನು, ಈಗ ಮತ್ತೆ ಸೆನ್ಸಾರ್ಗೆ ಒಳಪಡಿಸಿರುವುದು ಕಾಲಿವುಡ್ ವಲಯದಲ್ಲಿ ಹೊಸ ಕುತೂಹಲ ಮೂಡಿಸಿದೆ. ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಮುಗಿದಿದ್ದರೂ, ಚಿತ್ರತಂಡವು ಸಿನಿಮಾಗೆ ಕೆಲವು ಹೆಚ್ಚುವರಿ ದೃಶ್ಯಗಳನ್ನು ಸೇರಿಸುವ ಸಲುವಾಗಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (CBFC) ಮರು ಅರ್ಜಿ ಸಲ್ಲಿಸಿತ್ತು. ಇದೀಗ ಸಿಬಿಎಫ್ಸಿ ವೆಬ್ಸೈಟ್ನಲ್ಲಿ ಲಭ್ಯವಿರುವ ಅಧಿಕೃತ ಮಾಹಿತಿಯ ಪ್ರಕಾರ ‘ಜನ ನಾಯಗನ್’ ಚಿತ್ರಕ್ಕೆ ಹೆಚ್ಚುವರಿಯಾಗಿ 24 ಸೆಕೆಂಡುಗಳ ದೃಶ್ಯಗಳನ್ನು ಸೇರಿಸಿ ಮರುಪ್ರಮಾಣೀಕರಣ ಮಾಡಲಾಗಿದೆ. ಇದನ್ನೂ ಓದಿ: ಗೌರಿ ಹಿಂದೂವಲ್ಲ, ಕ್ರಿಶ್ಚಿಯನ್ – ಲವ್ ಜಿಹಾದ್ನ ಬ್ರ್ಯಾಂಡ್ ಅಂಬಾಸಿಡರ್ ಟ್ರೋಲ್ಗೆ ಅಮೀರ್ ಪ್ರತಿಕ್ರಿಯೆ ವಿಶ್ವಾಸಾರ್ಹ ಮೂಲಗಳ ಪ್ರಕಾರ, ಕೊನೆ ಘಳಿಗೆಯಲ್ಲಿ ಸೇರಿಸಲಾದ ಈ 24 ಸೆಕೆಂಡುಗಳ ದೃಶ್ಯಗಳು ಕೇವಲ ಸಿನಿಮಾದ ಕಥೆಗೆ ಸಂಬಂಧಿಸಿದ್ದಲ್ಲ, ಬದಲಿಗೆ ಚಿತ್ರದ ಟೈಟಲ್ ಕಾರ್ಡ್’ ಬದಲಾವಣೆಗೆ ಸಂಬಂಧಿಸಿದ್ದು ಎನ್ನಲಾಗಿದೆ. ದಳಪತಿ ವಿಜಯ್ ಅವರ ರಾಜಕೀಯ ಎಂಟ್ರಿಯ ಹಿನ್ನೆಲೆಯಲ್ಲಿ ಈ ಶೀರ್ಷಿಕೆ ಕಾರ್ಡ್ನಲ್ಲಿ ಏನೋ ವಿಶೇಷ ಅಡಗಿದೆ ಎಂಬ ಚರ್ಚೆಗಳು ಅಭಿಮಾನಿ ವಲಯದಲ್ಲಿ ಜೋರಾಗಿವೆ. ಈ ಹೆಚ್ಚುವರಿ ದೃಶ್ಯಗಳ ಸೇರ್ಪಡೆಯಿಂದಾಗಿ ಸಿನಿಮಾದ ಒಟ್ಟು ರನ್ಟೈಮ್ (Duration) ಈಗ ಕೊಂಚ ಹೆಚ್ಚಾಗಿದೆ. ಮೊದಲ ಸೆನ್ಸಾರ್ ರನ್ಟೈಮ್ 3 ಗಂಟೆ, 3 ನಿಮಿಷ, 7 ಸೆಕೆಂಡು ಇದ್ದರೆ ಮರು ಸೆನ್ಸಾರ್ ಬಳಿಕದ ರನ್ಟೈಮ್ 3 ಗಂಟೆ, 3 ನಿಮಿಷ, 31 ಸೆಕೆಂಡಿಗೆ ಏರಿಕೆಯಾಗಿದೆ. ಇದನ್ನೂ ಓದಿ: ಬೇರೆಯವ್ರ ನೋವಿನ ಬಗ್ಗೆ ಚುಚ್ಚಿ ಮಾತನಾಡಬೇಡಿ: ಗೆಳೆಯ ವೈಶಾಕ್ ಸಾವಿನ ಬಳಿಕ ನಟಿ ಕೃಷಿ ತಾಪಂಡ ಮೊದಲ ಮಾತು ಸಿನಿಮಾ ಒಟ್ಟು 183.51 ನಿಮಿಷ ಇರಲಿರುವ ಕಾರಣ ಚಿತ್ರಮಂದಿರಗಳಲ್ಲಿ ಮೂರು ಗಂಟೆಗೂ ಅಧಿಕ ಕಾಲ ದಳಪತಿ ದರ್ಬಾರ್ ನಡೆಸಲಿರುವುದು ಕನ್ಫರ್ಮ್ ಆಗಿದೆ. ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸದಿದ್ದರೂ, ಮುಂದಿನ ವಾರವೇ ಅಂದರೆ ಜುಲೈ 24 ರಂದು ಸಿನಿಮಾ ವಿಶ್ವಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ ಎಂಬ ಬಲವಾದ ಮಾತುಗಳು ಕೇಳಿಬರುತ್ತಿವೆ.