ಇಂಗ್ಲೆಂಡ್ನಿಂದ ಬಂದ ಪತಿ ವಿರುದ್ಧ ಅಕ್ರಮ ಪ್ರವೇಶ ಆರೋಪ:ತನಿಖೆಗೆ ಹೈಕೋರ್ಟ್ ತಡೆ
ಬೆಂಗಳೂರು: ದೀರ್ಘ ಕಾಲದ ನಂತರ ಇಂಗ್ಲೆಂಡಿನಿಂದ ಮನೆಗೆ ಬಂದ ಪತಿಯ ವಿರುದ್ಧ ಅತಿಕ್ರಮ ಪ್ರವೇಶ ಆರೋಪ ಹೊರಿಸಿ ಪತ್ನಿ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವೊಂದರ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.‘ನನ್ನ ವಿರುದ್ಧ ನನ್ನ ಪತ್ನಿ ದಾಖಲಿಸಿರುವ ಎಫ್ಐಆರ್ ರದ್ದುಡಿಸಬೇಕು’ ಎಂದು ಕೋರಿ ಕುಂದಲಹಳ್ಳಿಯ ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗ

ಬೆಂಗಳೂರು: ದೀರ್ಘ ಕಾಲದ ನಂತರ ಇಂಗ್ಲೆಂಡಿನಿಂದ ಮನೆಗೆ ಬಂದ ಪತಿಯ ವಿರುದ್ಧ ಅತಿಕ್ರಮ ಪ್ರವೇಶ ಆರೋಪ ಹೊರಿಸಿ ಪತ್ನಿ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವೊಂದರ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.‘ನನ್ನ ವಿರುದ್ಧ ನನ್ನ ಪತ್ನಿ ದಾಖಲಿಸಿರುವ ಎಫ್ಐಆರ್ ರದ್ದುಡಿಸಬೇಕು’ ಎಂದು ಕೋರಿ ಕುಂದಲಹಳ್ಳಿಯ ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿತು.ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಅರ್ಜಿದಾರರು 25 ವರ್ಷ ಕಷ್ಟಪಟ್ಟು ಓದಿ, ಕೆಲಸ ಮಾಡಿ ₹2 ಕೋಟಿ ಕೊಟ್ಟು 3 ಬಿಎಚ್ಕೆ ಮನೆಯನ್ನು ಖರೀದಿಸಿದ್ದಾರೆ. ಮದುವೆಯಾಗಿ 16 ವರ್ಷ ಕಳೆದಿದೆ. 14 ವರ್ಷದ ಮಗನಿದ್ದಾನೆ. ಆದರೆ, ಪತಿ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಕೌಟುಂಬಿಕ ಕಲಹದಡಿ ವಿಚ್ಛೇದನ ವ್ಯಾಜ್ಯ ನಡೆಯುತ್ತಿದೆ. ಇದೇ ಹಿನ್ನೆಲೆಯಲ್ಲಿ ಪತ್ನಿ 10 ಕ್ರಿಮಿನಲ್ ಕೇಸುಗಳನ್ನು ದಾಖಲಿಸಿದ್ದಾರೆ’ ಎಂದರು.ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಪತಿಗೆ ತನ್ನ ಮನೆಯ ಮೇಲೆ ಹಕ್ಕು ಇದ್ದೇ ಇರುತ್ತದೆ. ಆದ್ದರಿಂದ, ಪತ್ನಿ ದಾಖಲಿಸಿರುವ ಅತಿಕ್ರಮ ಪ್ರವೇಶ ಆರೋಪದ ಈ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಅರ್ಜಿ ವಿಲೇವಾರಿಯಾಗುವತನಕ ತಡೆ ನೀಡಲಾಗುತ್ತಿದೆ’ ಎಂದು ಆದೇಶಿಸಿತು.