ತ್ರಿವಳಿ ಕೊಲೆ ಕೇಸ್ – ಬ್ರೈನ್ ಮ್ಯಾಪಿಂಗ್ ಮುನ್ನವೇ ಮೂವರನ್ನು ಕೊಂದಿದ್ದು ನಾನೇ: ತಪ್ಪೊಪ್ಪಿಕೊಂಡ ಆರೋಪಿ
ಬೆಂಗಳೂರು: ನಗರದ ಕೆಆರ್ ಪುರಂನಲ್ಲಿ (KR Puram) ನಡೆದ ತ್ರಿವಳಿ ಕೊಲೆ ಕೇಸ್ ಸಂಬಂಧಿಸಿದಂತೆ ಆರೋಪಿ ಕೆನತ್ ಮೂವರನ್ನು ಕೊಲೆ ಮಾಡಿದ್ದು ನಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ. ತನಿಖೆ ವೇಳೆ, ಆರಂಭದಲ್ಲಿ ಆರೋಪಿ ಶ್ವೇತಾ ಅಮ್ಮನನ್ನು ಕೊಲೆ ಮಾಡಿದ್ದು ನಾನು ಎಂದಿದ್ದಳು. ಆದರೆ ಕೆನತ್ ಕೂಡ ಮೂವರನ್ನು ಕೊಲೆ ಮಾಡಿದ್ದು ನಾನೇ ಎಂದಿದ್ದ. ಅಲ್ಲದೇ ಸಾಯುವ ಮುನ್ನ ತಂದೆ ಸೋಮಸ

ಬೆಂಗಳೂರು: ನಗರದ ಕೆಆರ್ ಪುರಂನಲ್ಲಿ (KR Puram) ನಡೆದ ತ್ರಿವಳಿ ಕೊಲೆ ಕೇಸ್ ಸಂಬಂಧಿಸಿದಂತೆ ಆರೋಪಿ ಕೆನತ್ ಮೂವರನ್ನು ಕೊಲೆ ಮಾಡಿದ್ದು ನಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ. ತನಿಖೆ ವೇಳೆ, ಆರಂಭದಲ್ಲಿ ಆರೋಪಿ ಶ್ವೇತಾ ಅಮ್ಮನನ್ನು ಕೊಲೆ ಮಾಡಿದ್ದು ನಾನು ಎಂದಿದ್ದಳು. ಆದರೆ ಕೆನತ್ ಕೂಡ ಮೂವರನ್ನು ಕೊಲೆ ಮಾಡಿದ್ದು ನಾನೇ ಎಂದಿದ್ದ. ಅಲ್ಲದೇ ಸಾಯುವ ಮುನ್ನ ತಂದೆ ಸೋಮಸುಂದರ್ ಕೆನತ್ ಮತ್ತು ಶ್ವೇತ ಇಬ್ಬರು ಸೇರಿ ಚುಚ್ಚಿದ್ರು ಅಂತ ಹೇಳಿದ್ದರು. ಹೀಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಒಬ್ಬನೇ ವ್ಯಕ್ತಿ ಏಕಕಾಲದಲ್ಲಿ ಒಬ್ಬರನ್ನು ಸಾಯಿಸಲು ಸಾಧ್ಯವಿಲ್ಲ ಎಂದಿದ್ದರು. ಇದನ್ನೂ ಓದಿ: ಕಿಟಕಿ ರಾಡ್ ಮುರಿದು, ಬಟ್ಟೆಯನ್ನೇ ಹಗ್ಗ ಮಾಡಿ ಗೋಡೆ ಹಾರಿದ್ರು – ಕಲಬುರಗಿ ಜೈಲಿನಿಂದ ಸಿನಿಮಾ ಶೈಲಿ ಕೈದಿಗಳು ಎಸ್ಕೇಪ್ ಬಳಿಕ ಕೋರ್ಟ್ ಅನುಮತಿ ಮೇರೆಗೆ ಕೆಆರ್ ಪುರ ಪೊಲೀಸರು (KR Police) ಮೂರು ದಿನದಲ್ಲಿ ಬ್ರೈನ್ ಮ್ಯಾಪಿಂಗ್ ನಡೆಸೋಕೆ ಸಿದ್ಧತೆ ನಡೆಸಿದ್ದರು. ಆದರೆ ಬ್ರೈನ್ ಮ್ಯಾಪಿಂಗ್ ಮಾಡೋಕೂ ಮುನ್ನವೇ ಇದರಲ್ಲಿ ಶ್ವೇತಾಳ ಪಾತ್ರವಿಲ್ಲ. ನಾನೇ ಮೂವರನ್ನು ಕೊಲೆ ಮಾಡಿದ್ದು ಎಂದು ತಪ್ಪೊಪ್ಪಿಕೊಂಡಿದ್ದಾನೆ. ಆಗಿದ್ದೇನು? ಆರೋಪಿಗಳಾದ ಶ್ವೇತಾ ಹಾಗೂ ಕೆನತ್ ಇಬ್ಬರು ಸೇರಿಕೊಂಡು ಶ್ವೇತಾಳ ತಂದೆ ಸೋಮಸುಂದರ್, ತಾಯಿ ಮುತ್ತು ಲಕ್ಷ್ಮಿ, ಸಹೋದರಿ ಸುಪ್ರಿಯಾಳನ್ನು ಕೊಲೆ ಮಾಡಿದ್ದರು.ಇದನ್ನೂ ಓದಿ: ಶಿಕ್ಷಕರಿಂದ ಕಿರುಕುಳ ಆರೋಪ – ಬಿಲ್ಡಿಂಗ್ನಿಂದ ಹಾರಿ 7ನೇ ಕ್ಲಾಸ್ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ!