ಕರುನಾಡಿಗೆ ಬರ: ಇನ್ನೂ 5 ದಿನ ರಾಜ್ಯದಲ್ಲಿ ಬಿಸಿಲಬ್ಬರ, ಯಲ್ಲೋ ಅಲರ್ಟ್
ಬೆಂಗಳೂರು: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಮಳೆ ಪ್ರಮಾಣ ಕಡಿಮೆಯಾಗಿ ಬಿಸಿಲು ಏರಿಕೆಯಾಗುತ್ತಲೇ ಇದೆ. ಈಗಾಗಲೇ ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಹಾಗೂ ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣದಲ್ಲಿ ಸತತ ಮೂರು ದಿನದಿಂದ ಏರಿಕೆಯಾಗುತ್ತಿದೆ.ಇದರ ನಡುವೆ ಮುಂದಿನ ಐದು ದಿನಗಳವರೆಗೆ( ಜುಲೈ 19) ಉಷ್ಣಾಂಶದ ಪ್ರಮಾಣ 3 ಡಿಗ್ರಿ ಸೆಲ್ಸಿಯಸ್

ಬೆಂಗಳೂರು: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಮಳೆ ಪ್ರಮಾಣ ಕಡಿಮೆಯಾಗಿ ಬಿಸಿಲು ಏರಿಕೆಯಾಗುತ್ತಲೇ ಇದೆ. ಈಗಾಗಲೇ ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಹಾಗೂ ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣದಲ್ಲಿ ಸತತ ಮೂರು ದಿನದಿಂದ ಏರಿಕೆಯಾಗುತ್ತಿದೆ.ಇದರ ನಡುವೆ ಮುಂದಿನ ಐದು ದಿನಗಳವರೆಗೆ( ಜುಲೈ 19) ಉಷ್ಣಾಂಶದ ಪ್ರಮಾಣ 3 ಡಿಗ್ರಿ ಸೆಲ್ಸಿಯಸ್ನಿಂದ ರಿಂದ 5 ಡಿಗ್ರಿ ಸೆಲ್ಸಿಯಸ್ ವರೆಗೂ ಏರಿಕೆಯಾಗುವ ಸಾಧ್ಯತೆಯಿದೆ. ಜನರ ಮುನ್ನೆಚ್ಚರಿಕೆ ವಹಿಸಬೇಕು ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಉಷ್ಣಾಂಶದ ಪ್ರಮಾಣದ ಜುಲೈ 15 ಹಾಗೂ 16ರಂದು ಏರಿಕೆಯಾಗಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.ಎಲ್ಲಿ ಎಷ್ಟು ಏರಿಕೆಕರಾವಳಿಯ ಹೊನ್ನಾವರದಲ್ಲಿ 31.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದು ಸಾಮಾನ್ಯಕ್ಕಿಂತ 3.2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಕಾರವಾರದಲ್ಲಿ 33.6(ಹೆಚ್ಚಳ 3.9), ಮಂಗಳೂರು ವಿಮಾನ ನಿಲ್ದಾಣದಲ್ಲಿ 31.4 ಡಿಗ್ರಿ ಸೆಲ್ಸಿಯಸ್( 2.8) ಹಾಗೂ ನಗರದಲ್ಲಿ 31.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.ಉತ್ತರ ಒಳನಾಡಿನ ಬೆಳಗಾವಿ ವಿಮಾನ ನಿಲ್ದಾಣದಲ್ಲಿ 29 ಡಿಗ್ರಿ( ಹೆಚ್ಚಳ 2.6), ಬೀದರ್ 37 ಡಿಗ್ರಿ( 7), ವಿಜಯಪುರ 34 ಡಿಗ್ರಿ( 3.3), ಬಾಗಲಕೋಟೆ 33.5 ಡಿಗ್ರಿ, ಧಾರವಾಡ 30.6 ಡಿಗ್ರಿ(3.2), ಗದಗ 33.8( 4.9), ಕಲಬುರಗಿ 37.1 ಡಿಗ್ರಿ(4,7), ಹಾವೇರಿ 29.2 ಡಿಗ್ರಿ ( 1.6), ಕೊಪ್ಪಳ 35.4 ಡಿಗ್ರಿ( 5), ರಾಯಚೂರು 38.2 ಡಿಗ್ರಿ( ಹೆಚ್ಚಳ 5) ಉಷ್ಣಾಂಶ ದಾಖಲಾಗಿದೆ.ದಕ್ಷಿಣ ಒಳನಾಡಿನ ಚಿತ್ರದುರ್ಗದಲ್ಲಿ 32.4 ಡಿಗ್ರಿ( 4.1 ), ದಾವಣಗೆರೆ 32.5 ಡಿಗ್ರಿ(4.1), ಹಾಸನ 30.6( 4.2), ಚಿಂತಾಮಣಿ 34.2(4.4), ಮಂಡ್ಯ 34.2, ಮೈಸೂರು 34 ಡಿಗ್ರಿ( ಹೆಚ್ಚಳ 5.3) ದಾಖಲಾಗಿದೆ.ಬಿಸಿ ಗಾಳಿ & ತೇವಾಂಶ ಎಚ್ಚರಿಕೆ. HOT AND HUMID #Warning for COASTAL #KARNATAKA #Yellow #Alert@KarnatakaVarthe #KSNDMC pic.twitter.com/RPlGfzQIXY— Karnataka State Natural Disaster Monitoring Centre (@KarnatakaSNDMC) July 15, 2026