ಕರುನಾಡಿಗೆ ಬರ: ಮಲೆನಾಡು ಭಾಗದಲ್ಲಿ ಪರ್ಯಾಯ ಬೆಳೆ, ಕೃಷಿ ಪದ್ದತಿ ಹೇಗಿರಬೇಕು?
ಬೆಂಗಳೂರು: ಕರ್ನಾಟಕದಲ್ಲಿ ಜುಲೈ 3ನೇ ವಾರ ಆರಂಭಗೊಂಡರೂ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ರೈತಾಪಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕೃಷಿ ಇಲಾಖೆ ಪರ್ಯಾಯ ಬೆಳೆ ಮಾರ್ಗೋಪಾಯಗಳನ್ನು ಬಿಡುಗಡೆ ಮಾಡಿದೆ. ಅದರಲ್ಲೂ ಮಲೆನಾಡು ಜಿಲ್ಲೆಗಳಲ್ಲೂ ಮಳೆ ಕೊರತೆ ಉಂಟಾಗಿರುವ ಕಾರಣಕ್ಕೆ ರೈತರು ಈಗಿನಿಂದಲೇ ಬದಲಾವಣೆಗೆ ಮುಂದಾಗಬೇಕು ಎಂದು ಕೃಷಿ ಇಲಾಖೆ ತಿಳಿಸಿದೆ.ಬೀಜೋಪಚಾರ ಮತ್
ಬೆಂಗಳೂರು: ಕರ್ನಾಟಕದಲ್ಲಿ ಜುಲೈ 3ನೇ ವಾರ ಆರಂಭಗೊಂಡರೂ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ರೈತಾಪಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕೃಷಿ ಇಲಾಖೆ ಪರ್ಯಾಯ ಬೆಳೆ ಮಾರ್ಗೋಪಾಯಗಳನ್ನು ಬಿಡುಗಡೆ ಮಾಡಿದೆ. ಅದರಲ್ಲೂ ಮಲೆನಾಡು ಜಿಲ್ಲೆಗಳಲ್ಲೂ ಮಳೆ ಕೊರತೆ ಉಂಟಾಗಿರುವ ಕಾರಣಕ್ಕೆ ರೈತರು ಈಗಿನಿಂದಲೇ ಬದಲಾವಣೆಗೆ ಮುಂದಾಗಬೇಕು ಎಂದು ಕೃಷಿ ಇಲಾಖೆ ತಿಳಿಸಿದೆ.ಬೀಜೋಪಚಾರ ಮತ್ತು ಅಂತರ ಬೆಳೆಜುಲೈ ಎರಡು ಅಥವಾ ಮೂರನೇ ವಾರದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡುವ ರೈತರು, ಪ್ರತಿ 8 ಸಾಲು ಮೆಕ್ಕೆಜೋಳದ ಜೊತೆಗೆ 2 ಸಾಲು ದ್ವಿದಳ ಧಾನ್ಯಗಳಾದ ತೊಗರಿ, ಅಲಸಂದೆ, ಹೆಸರು ಅಥವಾ ಉದ್ದು ಬೆಳೆಗಳನ್ನು ಅಂತರ ಬೆಳೆಯಾಗಿ ಬಿತ್ತನೆ ಮಾಡಬೇಕು. ಬಿತ್ತನೆಗೆ ಮುನ್ನ ಪ್ರತಿ ಕೆ.ಜಿ. ಬೀಜಕ್ಕೆ 4 ಗ್ರಾಂ ಮೆಟಾಲಾಕ್ಸಿಲ್ ಎಂ.ಝಡ್. ಮತ್ತು 5 ಎಂ.ಎಲ್. ಕ್ಲೋರೋಪೈರಿಫಾಸ್ ಬೆರೆಸಿ ಬೀಜೋಪಚಾರ ಮಾಡುವುದು ಕಡ್ಡಾಯವಾಗಿದೆ.ರಸಗೊಬ್ಬರ ನಿರ್ವಹಣೆಈಗಾಗಲೇ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದ್ದು, ಮಣ್ಣಿನಲ್ಲಿ ತೇವಾಂಶ ಕಡಿಮೆ ಇದ್ದಲ್ಲಿ ಹರಳು ರೂಪದ ಗೊಬ್ಬರವನ್ನು ಬಳಸಬಾರದು. ಬದಲಾಗಿ, ನೀರಿನಲ್ಲಿ ಕರಗುವ 19:19:19 ಗೊಬ್ಬರವನ್ನು (ಪ್ರತಿ ಲೀಟರ್ ನೀರಿಗೆ 5 ಗ್ರಾಂ) ಬೆರೆಸಿ, ಬಿತ್ತನೆಯಾದ 25ನೇ ದಿನ ಹಾಗೂ 45ನೇ ದಿನದಂದು ಸಿಂಪಡಿಸಬೇಕು.ಹೊಲದಲ್ಲಿ ಎರಡು ಸಾಲುಗಳ ಮಧ್ಯೆ ಎಡೆಕುಂಟೆ ಹಾಯಿಸುವುದರಿಂದ ಕಳೆ ನಿಯಂತ್ರಿಸುವುದರ ಜತೆಗೆ, ಮಣ್ಣಿನಿಂದ ನೀರು ಆವಿಯಾಗುವುದನ್ನು ತಡೆದು ತೇವಾಂಶ ಕಾಯ್ದುಕೊಳ್ಳಬಹುದು.ಭತ್ತದ ಬೇಸಾಯತಗ್ಗು ಪ್ರದೇಶ ಹಾಗೂ ನೀರಿನ ಲಭ್ಯತೆ ಇರುವ ಕಡೆಗಳಲ್ಲಿ ಮಧ್ಯಮಾವಧಿ ಭತ್ತದ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಸಾಂಪ್ರದಾಯಿಕ ನಾಟಿ ಪದ್ಧತಿಯ ಬದಲಾಗಿ 'ಡ್ರಂಸೀಡರ್' ಬಳಸಿ ಬಿತ್ತನೆ ಮಾಡುವುದು ಸೂಕ್ತ.ಜುಲೈ ಕೊನೆಯ ವಾರದ ಪರ್ಯಾಯಒಂದು ವೇಳೆ ಮುಂಗಾರು ಮಳೆ ಜುಲೈ ನಾಲ್ಕನೇ ವಾರದವರೆಗೂ ತಡವಾದರೆ, ರೈತರು ರಾಗಿ ಹಾಗೂ ದ್ವಿದಳ ಧಾನ್ಯದ ಬೆಳೆಗಳನ್ನು ಬಿತ್ತನೆ ಮಾಡಲು ಆದ್ಯತೆ ನೀಡಬೇಕು.ಬಿತ್ತನೆ ಅಥವಾ ನಾಟಿ ಮಾಡುವ ಮುನ್ನ ಭೂಮಿಯ ತೇವಾಂಶ ಹಾಗೂ ನೀರಿನ ಲಭ್ಯತೆಯನ್ನು ಖಾತರಿ ಪಡಿಸಿಕೊಳ್ಳುವುದು ಅವಶ್ಯಕವಾಗಿದೆ. ಹೆಚ್ಚಿನ ಮಾಹಿತಿ ಮತ್ತು ತಾಂತ್ರಿಕ ಮಾರ್ಗದರ್ಶನಕ್ಕಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಶಿವಮೊಗ್ಗ ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಸಕಾಲದಲ್ಲಿ ಮಳೆ ಬಾರದೇ ಇರುವುದರಿಂದ ರೈತರು ಎದುರಿಸುತ್ತಿರುವ ಸಮಸ್ಯೆಗೆ ಕೃಷಿ ಇಲಾಖೆ ಸೂಕ್ತ ಪರ್ಯಾಯ ಮಾರ್ಗೋಪಾಯ ಪ್ರಕಟಿಸಿದೆ. ರೈತರು ಇಲಾಖೆ ಸೂಚಿಸಿದ ಕೃಷಿ ಪದ್ಧತಿಗಳು, ಪರ್ಯಾಯ ಬೆಳೆ ಅನುಸರಿಸಬೇಕು.