ಬೆಂಗಳೂರು | ಪಬ್ನಲ್ಲಿ ಕುಡಿದ ಮತ್ತಿನಲ್ಲಿ ಅಬಕಾರಿ ಇನ್ಸ್ಪೆಕ್ಟರ್ ರಾದ್ಧಾಂತ
ಬೆಂಗಳೂರು: ಪಬ್ನಲ್ಲಿ ಕುಡಿದ ಮತ್ತಿನಲ್ಲಿ ಅಬಕಾರಿ ಇನ್ಸ್ಪೆಕ್ಟರ್ (Excise Inspector) ರಾದ್ಧಾಂತ ಮಾಡಿರುವ ಘಟನೆ ಜೆ.ಪಿ.ನಗರದಲ್ಲಿ (J.P.Nagar) ನಡೆದಿದೆ. ಮಲ್ಲಪ್ಪ ಎಸ್ ಕುಂದಗೋಳ ಕುಡಿದು ಕಿರಿಕ್ ಮಾಡಿದ ಅಬಕಾರಿ ಇನ್ಸಪೆಕ್ಟರ್. ಸರ್ಕಾರಿ ಐಡಿ ಕಾರ್ಡ್ ಹಾಕಿಕೊಂಡು ಇನ್ಸ್ಪೆಕ್ಟರ್ ಪಬ್ಗೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಕಂಠಪೂರ್ತಿ ಕುಡಿದು ಸಿಕ್ಕಸಿಕ್ಕವರ

ಬೆಂಗಳೂರು: ಪಬ್ನಲ್ಲಿ ಕುಡಿದ ಮತ್ತಿನಲ್ಲಿ ಅಬಕಾರಿ ಇನ್ಸ್ಪೆಕ್ಟರ್ (Excise Inspector) ರಾದ್ಧಾಂತ ಮಾಡಿರುವ ಘಟನೆ ಜೆ.ಪಿ.ನಗರದಲ್ಲಿ (J.P.Nagar) ನಡೆದಿದೆ. ಮಲ್ಲಪ್ಪ ಎಸ್ ಕುಂದಗೋಳ ಕುಡಿದು ಕಿರಿಕ್ ಮಾಡಿದ ಅಬಕಾರಿ ಇನ್ಸಪೆಕ್ಟರ್. ಸರ್ಕಾರಿ ಐಡಿ ಕಾರ್ಡ್ ಹಾಕಿಕೊಂಡು ಇನ್ಸ್ಪೆಕ್ಟರ್ ಪಬ್ಗೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಕಂಠಪೂರ್ತಿ ಕುಡಿದು ಸಿಕ್ಕಸಿಕ್ಕವರಿಗೆ ಅವಾಜ್ ಹಾಕಿದ್ದಾರೆ. ಇನ್ಸ್ಪೆಕ್ಟರ್ ರಾದ್ಧಾಂತದ ವೀಡಿಯೋ ಲಭ್ಯವಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಷಡ್ಯಂತ್ರ ಕೇಸ್ – ಬೆಳ್ತಂಗಡಿ ಕೋರ್ಟ್ಗೆ ವರದಿ ಸಲ್ಲಿಸಿದ ಎಸ್ಐಟಿ ಪಬ್ನಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಜೊತೆಯೂ ಇನ್ಸ್ಪೆಕ್ಟರ್ ಕಿರಿಕ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಮ್ಯಾನೇಜರ್ಗೂ ಅವಾಜ್ ಹಾಕಿದ್ದಾರೆ. ಅಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪಬ್ನಲ್ಲಿ ಜನ ಗುಂಪುಗಟ್ಟಿದ ಬೆನ್ನಲ್ಲೇ ಅಧಿಕಾರಿ ಹೊರನಡೆದಿದ್ದಾರೆ. ಸಬ್ ಡಿವಿಸನ್ 11 ರಲ್ಲಿ ಕೆಲಸ ಮಾಡುತ್ತಿರುವ ಮಲ್ಲಪ್ಪ ಎಸ್ ಕುಂದಗೋಳ ಪಬ್ಗೆ ಹೋಗಿದ್ದರು. ಕುತ್ತಿಗೆಗೆ ಹಾಕಿರುವ ಐಡಿ ಕಾರ್ಡ್ ಕೂಡ ತೆಗೆಯದೇ ಕುಡಿದು ರಾದ್ಧಾಂತ ಮಾಡಿದ್ದರು. ಇದನ್ನೂ ಓದಿ: ರಾಯಚೂರಿನ ಸಿಂಧನೂರಿನಲ್ಲಿ ಅಕ್ರಮವಾಗಿ ವಾಸವಿದ್ದ ಬಾಂಗ್ಲಾದೇಶದ ಪ್ರಜೆಗೆ 3 ವರ್ಷ ಜೈಲು ಶಿಕ್ಷೆ