ಸಾಮಾಜಿಕ ಮಾಧ್ಯಮ ಬಳಸುವ 16, 17 ವರ್ಷ ವಯಸ್ಸಿನ ಮಕ್ಕಳಿಗೆ ಮಧ್ಯರಾತ್ರಿ ಕರ್ಫ್ಯೂ!
ಲಂಡನ್: ಆನ್ಲೈನ್ ವೇದಿಕೆಗಳ ಅತ್ಯಂತ ವ್ಯಸನಕಾರಿ ಅಂಶಗಳಿಂದ ಹದಿಹರೆಯದವರನ್ನು ರಕ್ಷಿಸುವ ಕ್ರಮದ ಭಾಗವಾಗಿ, ಸಾಮಾಜಿಕ ಜಾಲತಾಣಗಳನ್ನು ಬಳಸುವ 16 ಮತ್ತು 17 ವರ್ಷ ವಯಸ್ಸಿನವರಿಗೆ ಮಧ್ಯರಾತ್ರಿಯ ಕರ್ಫ್ಯೂ ಜಾರಿಗೆ ತರುವ ಯೋಜನೆಗಳನ್ನು ಬ್ರಿಟನ್ ಸರ್ಕಾರ ಬುಧವಾರ ಪ್ರಕಟಿಸಿದೆ.ಸಾಮಾಜಿಕ ಮಾಧ್ಯಮಗಳಲ್ಲಿ16 ಮತ್ತು 17 ವರ್ಷ ವಯಸ್ಸಿನವರಿಗೆ ಲೈವ್ಸ್ಟ್ರೀಮಿಂಗ್ ಮತ್ತು ಅಪರ

ಲಂಡನ್: ಆನ್ಲೈನ್ ವೇದಿಕೆಗಳ ಅತ್ಯಂತ ವ್ಯಸನಕಾರಿ ಅಂಶಗಳಿಂದ ಹದಿಹರೆಯದವರನ್ನು ರಕ್ಷಿಸುವ ಕ್ರಮದ ಭಾಗವಾಗಿ, ಸಾಮಾಜಿಕ ಜಾಲತಾಣಗಳನ್ನು ಬಳಸುವ 16 ಮತ್ತು 17 ವರ್ಷ ವಯಸ್ಸಿನವರಿಗೆ ಮಧ್ಯರಾತ್ರಿಯ ಕರ್ಫ್ಯೂ ಜಾರಿಗೆ ತರುವ ಯೋಜನೆಗಳನ್ನು ಬ್ರಿಟನ್ ಸರ್ಕಾರ ಬುಧವಾರ ಪ್ರಕಟಿಸಿದೆ.ಸಾಮಾಜಿಕ ಮಾಧ್ಯಮಗಳಲ್ಲಿ16 ಮತ್ತು 17 ವರ್ಷ ವಯಸ್ಸಿನವರಿಗೆ ಲೈವ್ಸ್ಟ್ರೀಮಿಂಗ್ ಮತ್ತು ಅಪರಿಚಿತರ ಸಂವಹನದಂತಹ ಕೆಲವು ಚಟುವಟಿಕೆಗಳ ಮೇಲೆ ಸ್ವಯಂಚಾಲಿತವಾಗಿ ನಿರ್ಬಂಧ ಹೇರಲಾಗುತ್ತದೆ. 18 ವರ್ಷದೊಳಗಿನವರು ಸ್ಕ್ರೋಲಿಂಗ್ ಮಾಡುವಾಗ ಆಗಾಗ್ಗೆ ಬಲವಂತದ ವಿರಾಮ ಸಹ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.‘ಮಕ್ಕಳನ್ನು ಸುರಕ್ಷಿತ ಮತ್ತು ಖುಷಿಯಾಗಿಡಲು ಪೋಷಕರು ಬಯಸುತ್ತಾರೆ. ಆದರೆ, ಆನ್ಲೈನ್ ಅದನ್ನು ಹಿಂದೆಂದಿಗಿಂತಲೂ ಕಠಿಣವಾಗಿಸಿದೆ’ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿದ್ದಾರೆ.ಮಕ್ಕಳು ಸಾಮಾಜಿಕ ಮಾಧ್ಯಮ ಬಳಕೆಗೆ ಕಡಿವಾಣ ಹಾಕಲು ಪೋಷಕರೇ ಅಲವತ್ತುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೇರೆಲ್ಲ ದೇಶಗಳಿಗಿಂತ ಮೊದಲೇ ನಾವು ಮುಂದಡಿ ಇಟ್ಟು, 16 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಿದ್ದೇವೆ. ಮಕ್ಕಳಿಗೆ ಅವರ ಬಾಲ್ಯವನ್ನು ಅನುಭವಿಸುವ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ತಂತ್ರಜ್ಞಾನ ದೈತ್ಯ ಸಂಸ್ಥೆಗಳೇ ಕ್ರಮ ಕೈಗೊಳ್ಳಬಹುದಿತ್ತು. ಆದರೆ, ಅವುಗಳು ವೈಫಲ್ಯ ಅನುಭವಿಸಿದ್ದು, ಮಕ್ಕಳನ್ನು ರಕ್ಷಿಸಲು ನಾವು ಮಧ್ಯಪ್ರವೇಶಿಸನಬೇಕಾಯಿತು ಎಂದಿದ್ದಾರೆ. ಲೈಂಗಿಕ ಸಂಬಂಧ ಉತ್ತೇಜಿಸಲು ವಿನ್ಯಾಸಗೊಳಿಸಲಾಗಿರುವ ಎಐ ರೊಮ್ಯಾಂಟಿಕ್ ಕಂಪ್ಯಾನಿಯನ್ ಚಾಟ್ಬಾಟ್ ಅನ್ನು 18 ವರ್ಷ ಮೇಲ್ಪಟ್ಟವರು ಮಾತ್ರ ಬಳಸುವಂತೆ ನಿಯಮ ರೂಪಿಸಲಾಗಿದೆ ಎಂದು ವಿಜ್ಞಾನ, ನಾವೀನ್ಯ ತಂತ್ರಜ್ಞಾನ ಇಲಾಖೆ ಹೇಳಿದೆ.ಸಾಮಾಜಿಕ ಮಾಧ್ಯಮ ನಿಷೇಧಕ್ಕಿಂತಲೂ ಈ ಹೊಸ ಉಪಕ್ರಮವು ಮತ್ತಷ್ಟು ಸಮಗ್ರವಾಗಿದೆ ಎಂದು ಬ್ರಿಟನ್ ಸರ್ಕಾರ ಹೇಳಿದೆ.ಅಮೆರಿಕ | ವೀಸಾ ಪ್ರಕ್ರಿಯೆ ಪುನರಾರಂಭ: ಸಾಮಾಜಿಕ ಮಾಧ್ಯಮ ಖಾತೆಗಳ ಪರಿಶೀಲನೆ