ಐರ್ಲೆಂಡ್ನ ಪ್ರಕೃತಿ ಮಡಿಲಲ್ಲಿ ಖ್ಯಾತ ನಟಿ ಭಾವನಾ ಮೆನನ್: ಚಿತ್ರಗಳು ಇಲ್ಲಿವೆ
ಚಂದನವನದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಭಾವನಾ ಮೆನನ್ ಅವರು ಕನ್ನಡಿಗರ ನೆಚ್ಚಿನ ನಟಿಯಾಗಿದ್ದಾರೆ.ಕೇರಳ ಮೂಲದವರಾದ ನಟಿ ಭಾವನಾ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಸನ್ನು ಗೆದ್ದುಕೊಂಡಿದ್ದಾರೆ.ಸದ್ಯ ನಟಿ ಭಾವನಾ ಮೆನನ್ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಐರ್ಲೆಂಡ್ಗೆ ಭೇಟಿ ಕೊಟ್ಟಿರುವ ನಟಿ ಅಲ್ಲಿನ ಪ್ರಕೃ

ಚಂದನವನದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಭಾವನಾ ಮೆನನ್ ಅವರು ಕನ್ನಡಿಗರ ನೆಚ್ಚಿನ ನಟಿಯಾಗಿದ್ದಾರೆ.ಕೇರಳ ಮೂಲದವರಾದ ನಟಿ ಭಾವನಾ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಸನ್ನು ಗೆದ್ದುಕೊಂಡಿದ್ದಾರೆ.ಸದ್ಯ ನಟಿ ಭಾವನಾ ಮೆನನ್ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಐರ್ಲೆಂಡ್ಗೆ ಭೇಟಿ ಕೊಟ್ಟಿರುವ ನಟಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ.ಇದೇ ಫೋಟೊಗಳನ್ನು ನಟಿ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಐರ್ಲೆಂಡ್ನ ಪ್ರಕೃತಿ, ಕೋಟೆಗಳು ಮತ್ತು ಅಲ್ಲಿನ ವಿಶಿಷ್ಟ ತಿಂಡಿಗಳ ಬಗ್ಗೆ ಬರೆದುಕೊಂಡಿದ್ದಾರೆ.‘ಸಿನಿಮಾಗಳಲ್ಲಿ ಮಾತ್ರ ‘ಬ್ರೇವ್ಹಾರ್ಟ್’ ಮತ್ತು ‘ದಿ ಬ್ಯಾನ್ಶೀಸ್ ಆಫ್ ಇನಿಶೆರಿನ್’ ನಂತಹ ಪ್ರಕೃತಿ ಸೌಂದರ್ಯವನ್ನು ನಾನು ನೋಡಿದ್ದೆ. ಆದರೆ ಈಗ ನಾನು ಅದನ್ನು ನಿಜವಾಗಿಯೂ ಕಣ್ಣಾರೆ ಕಂಡು, ಅನುಭವಿಸಿ ಬದುಕಿದ್ದೇನೆ’ ಎಂದಿದ್ದಾರೆ.‘ಕಣ್ಣು ಕೋರೈಸುವ ‘ಕ್ಲಿಫ್ಸ್ ಆಫ್ ಮೊಹರ್’ ಕಡಿದಾದ ಕಲ್ಲುಬಂಡೆಗಳ ತೀರ ಮತ್ತು ನಯನಮನೋಹರ ‘ವಿಕ್ಲೋ ಮೌಂಟೇನ್ಸ್’ನಿಂದ ಹಿಡಿದು, ಐತಿಹಾಸಿಕ ‘ಬುನ್ರಾಟ್ಟಿ ಕೋಟೆ’ಯ ಪರಿಶೋಧನೆ, ನಿಗೂಢ ‘ದೂಲಿನ್ ಗುಹೆ’ಯ ಸಾಹಸ ಹಾಗೂ ಡಬ್ಲಿನ್ನ ಆಕರ್ಷಕ ರಸ್ತೆಗಳಲ್ಲಿ ರಾತ್ರಿಯ ನಡಿಗೆಯವರೆಗೆ.. ಪ್ರತಿಯೊಂದು ಕ್ಷಣವೂ ಮ್ಯಾಜಿಕ್ನಿಂದ ಕೂಡಿತ್ತು’ ಎಂದು ಅಲ್ಲಿನ ಅನುಭವವನ್ನು ಬಿಚ್ಚಿಟ್ಟಿದ್ದಾರೆ.‘ಇನ್ನು ಇಲ್ಲಿನ ಆಹಾರ ನಿಜಕ್ಕೂ ಇಷ್ಟವಾಯಿತು. ‘ಜಾನಿ ಫಾಕ್ಸ್’ನಲ್ಲಿ ಸವಿದ ಫಿಶ್ ಆ್ಯಂಡ್ ಚಿಪ್ಸ್, ಇಲ್ಲಿನ ಐಕಾನಿಕ್ ಸಾಫ್ಟ್ ಸರ್ವ್ ಐಸ್ಕ್ರೀಮ್ ‘99 ಫ್ಲೇಕ್’ ಮತ್ತು ಖಾರ ಖಾರವಾದ ‘ಸ್ಪೈಸ್ ಬ್ಯಾಗ್’.. ಪ್ರತಿಯೊಂದು ತುತ್ತೂ ಬಾಯಿಗೆ ಆನಂದವನ್ನು ನೀಡಿತು’ ಎಂದಿದ್ದಾರೆ.ನಟ, ದಿವಂಗತ ನಟ ಪುನೀತ್ ರಾಜ್ಕುಮಾರ್ ನಟನೆಯ ‘ಜಾಕಿ’ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ. ಶಿವರಾಜ್ಕುಮಾರ್, ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಪ್ರಜ್ವಲ್ ದೇವರಾಜ್ ಜೊತೆ ನಟಿಸಿದ್ದಾರೆ. ‘ರೋಮಿಯೋ’, ‘ಇನ್ಸ್ಪೆಕ್ಟರ್ ವಿಕ್ರಂ’ ‘ಬಚ್ಚನ್’, ‘ಮುಕುಂದ ಮುರಾರಿ’ ‘99’, ‘ಭಜರಂಗಿ 2’, ‘ಗೋವಿಂದ ಗೋವಿಂದ’ ಸೇರಿ ಹಲವು ಮನಮುಟ್ಟುವ ಚಿತ್ರಗಳಲ್ಲಿ ಭಾವನಾ ಕಾಣಿಸಿಕೊಂಡಿದ್ದಾರೆ.ನಟಿ ಇತ್ತೀಚೆಗೆ ನನ್ನದು ಫೇಸ್ಬುಕ್ ಖಾತೆ ಇಲ್ಲವೇ ಇಲ್ಲ. ನಕಲಿ ಪ್ರೊಫೈಲ್ ಸೃಷ್ಟಿಸಿದ್ದವರಿಗೆ ನಟಿ ಎಚ್ಚರಿಕೆ ನೀಡಿದ್ದರು. ‘ನನ್ನದು ಯಾವುದೇ ಫೇಸ್ಬುಕ್ ಖಾತೆ ಇಲ್ಲವೇ ಇಲ್ಲ. ಇನ್ಸ್ಟಾಗ್ರಾಂನಲ್ಲಿ ಮಾತ್ರ ನಾನು ಸಕ್ರಿಯವಾಗಿದ್ದೇನೆ. ಇದನ್ನು ಹೊರತುಪಡಿಸಿ, ನನ್ನ ಹೆಸರಿನಲ್ಲಿ ಸೃಷ್ಟಿಸಲಾಗಿರುವ ಬೇರೆ ಯಾವುದೇ ಖಾತೆಗಳು ನಿಮ್ಮ ಗಮನಕ್ಕೆ ಬಂದರೆ, ಅವು ಖಂಡಿತವಾಗಿಯೂ ನನ್ನದಲ್ಲ ಎಂಬುದನ್ನು ದಯವಿಟ್ಟು ನೆನಪಿನಲ್ಲಿಡಿ’ ಎಂದು ಪೋಸ್ಟ್ ಹಂಚಿಕೊಂಡಿದ್ದರು.