ಹಡಗು ಸುರಕ್ಷಿತವಾಗಿ ಕೊಲ್ಲಿ ದಾಟಿದೆ: ಡೆಡ್ಲಿ ಅಟ್ಯಾಕ್ಗೂ ಮುನ್ನ ಕುಟುಂಬಸ್ಥರಿಗೆ ಭಾರತೀಯ ನಾವಿಕನ ಕೊನೆಯ ಸಂದೇಶ
ಟೆಹ್ರಾನ್: ಒಮಾನ್ ಕರಾವಳಿಯಲ್ಲಿ ಸೈಪ್ರಸ್ ಧ್ವಜ ಹೊತ್ತ ವಾಣಿಜ್ಯ ಹಡಗಿನ ಮೇಲೆ ಇರಾನಿನ ದಾಳಿಯಲ್ಲಿ ಸಾವನ್ನಪ್ಪಿದ ಭಾರತೀಯ ನಾವಿಕ ಹೆರಾಂಬ್ ಕರ್ಮಾರ್ಕರ್ ತನ್ನ ಕುಟುಂಬಸ್ಥರಿಗೆ ಕಳಿಸಿದ್ದ ಕೊನೆಯ ಸಂದೇಶ ಬೆಳಕಿಗೆ ಬಂದಿದೆ. ಹಾರ್ಮುಜ್ ಜಲಸಂಧಿಯನ್ನು (Strait of Hormuz) ದಾಟುವಾಗ ತನ್ನ ಹಡಗು ದಾಳಿಗೆ ಒಳಗಾಗುವ ಮೊದಲು ನಾವಿಕ ಹೆರಾಂಬ್, ʼನಾವು ಅಪಾಯದಿಂದ ಪಾರಾಗಿದ

ಟೆಹ್ರಾನ್: ಒಮಾನ್ ಕರಾವಳಿಯಲ್ಲಿ ಸೈಪ್ರಸ್ ಧ್ವಜ ಹೊತ್ತ ವಾಣಿಜ್ಯ ಹಡಗಿನ ಮೇಲೆ ಇರಾನಿನ ದಾಳಿಯಲ್ಲಿ ಸಾವನ್ನಪ್ಪಿದ ಭಾರತೀಯ ನಾವಿಕ ಹೆರಾಂಬ್ ಕರ್ಮಾರ್ಕರ್ ತನ್ನ ಕುಟುಂಬಸ್ಥರಿಗೆ ಕಳಿಸಿದ್ದ ಕೊನೆಯ ಸಂದೇಶ ಬೆಳಕಿಗೆ ಬಂದಿದೆ. ಹಾರ್ಮುಜ್ ಜಲಸಂಧಿಯನ್ನು (Strait of Hormuz) ದಾಟುವಾಗ ತನ್ನ ಹಡಗು ದಾಳಿಗೆ ಒಳಗಾಗುವ ಮೊದಲು ನಾವಿಕ ಹೆರಾಂಬ್, ʼನಾವು ಅಪಾಯದಿಂದ ಪಾರಾಗಿದ್ದೇವೆ’ ಎಂದು ಕುಟುಂಬಸ್ಥರಿಗೆ ಸಂದೇಶ ಕಳುಹಿಸಿದ್ದರು. ಸಾವಿಗೆ ಕೆಲವೇ ಕ್ಷಣಗಳ ಮೊದಲು, ʼಹಡಗು ಸುರಕ್ಷಿತವಾಗಿ ಕೊಲ್ಲಿಯನ್ನು ದಾಟಿದೆʼ ಎಂದು ಮೆಸೇಜ್ ಕಳುಹಿಸಿದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಆ ಸಂದೇಶವೇ ಹೆರಾಂಬ್ ತನ್ನ ಕುಟುಂಬದೊಂದಿಗೆ ನಡೆಸಿದ ಕೊನೆಯ ಸಂವಹನವಾಗಿತ್ತು. ಇದನ್ನೂ ಓದಿ: 2 ಯುಎಇ ಟ್ಯಾಂಕರ್ ಮೇಲೆ ಇರಾನ್ ದಾಳಿ – ಓರ್ವ ಭಾರತೀಯ ಸಾವು, 6 ಮಂದಿಗೆ ಗಾಯ ಭಾನುವಾರ ಹಾರ್ಮುಜ್ ಜಲಸಂಧಿಯಲ್ಲಿ ಒಮಾನ್ ಕರಾವಳಿಯ ಬಳಿ ‘ಜಿಎಫ್ಎಕ್ಸ್ ಗ್ಯಾಲಕ್ಸಿ’ ವ್ಯಾಪಾರಿ ಹಡಗಿನ ಮೇಲೆ ದಾಳಿ ನಡೆದಿತ್ತು. ಈ ವೇಳೆ ಕಾಣೆಯಾದ ಭಾರತೀಯ ಸಿಬ್ಬಂದಿಯಲ್ಲಿ 30 ವರ್ಷದ ಹೆರಾಂಬ್ ಕರ್ಮಾರ್ಕರ್ ಕೂಡ ಒಬ್ಬರು. ವಿದೇಶಾಂಗ ಸಚಿವಾಲಯ (ಎಂಇಎ) ಹಡಗಿನಲ್ಲಿದ್ದ 10 ಭಾರತೀಯ ಪ್ರಜೆಗಳನ್ನು ರಕ್ಷಿಸಲಾಗಿದೆ ಎಂದು ಹೇಳಿತ್ತು. ಆದರೆ, ಒಬ್ಬರು ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು. ಹೆರಾಂಬ್ 30ರ ಯುವಕ. ಅವನಿಗೆ ವಯಸ್ಸಾಗಿರಲಿಲ್ಲ. ಭಾರತ ಸರ್ಕಾರಕ್ಕೆ ನಮ್ಮ ಏಕೈಕ ವಿನಂತಿ. ಅವನ ದೇಹವನ್ನು ಹಾನಿಯಾಗದಂತೆ ನಮಗೆ ಹಸ್ತಾಂತರಿಸಿ ಮನೆಗೆ ತರಬೇಕು ಎಂದು ಕರ್ಮಾರ್ಕರ್ ಅವರ ಮಾವ ವಿವೇಕ್ ಟಂಡನ್ ಕಂಬನಿ ಮಿಡಿದಿದ್ದಾರೆ. ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ವಾಣಿಜ್ಯ ಹಡಗುಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿ ತೀವ್ರ ಖಂಡನೀಯ ಎಂದು ಹೇಳಿತ್ತು. ಇದನ್ನೂ ಓದಿ: ಕಚ್ಚಾ ತೈಲ ದರ ಸಮರ – ಸೌದಿಯಿಂದ ಭಾರೀ ಕಡಿತ, ಭಾರತಕ್ಕೆ ಏನು ಲಾಭ?