ಭಾರತದ ಮೇಲೆ 500% ಅಲ್ಲ 100% ಸುಂಕ ವಿಧಿಸುತ್ತಾ ಅಮೆರಿಕ?
ವಾಷಿಂಗ್ಟನ್: ರಷ್ಯಾದಿಂದ(Russia) ಭಾರೀ ಪ್ರಮಾಣದದಲ್ಲಿ ಕಚ್ಚಾ ತೈಲವನ್ನು (Crude Oil) ಆಮದು ಮಾಡುತ್ತಿರುವುದಕ್ಕೆ ಭಾರತದ (India) ಮೇಲೆ ಅಮೆರಿಕ 100% ಸುಂಕ ವಿಧಿಸುತ್ತಾ ಎಂಬ ಪ್ರಶ್ನೆ ಎದ್ದಿದೆ. ರಷ್ಯಾ ಮತ್ತು ಉಕ್ರೇನ್ (Russia Ukraine War) ನಡುವಿನ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾಗೆ ಆರ್ಥಿಕವಾಗಿ ಹಾನಿ ಮಾಡಲು ಅಮೆರಿಕವು ರಷ್ಯಾದಿಂದ ತೈಲ ಖರೀದಿಸುವ ದೇಶ

ವಾಷಿಂಗ್ಟನ್: ರಷ್ಯಾದಿಂದ(Russia) ಭಾರೀ ಪ್ರಮಾಣದದಲ್ಲಿ ಕಚ್ಚಾ ತೈಲವನ್ನು (Crude Oil) ಆಮದು ಮಾಡುತ್ತಿರುವುದಕ್ಕೆ ಭಾರತದ (India) ಮೇಲೆ ಅಮೆರಿಕ 100% ಸುಂಕ ವಿಧಿಸುತ್ತಾ ಎಂಬ ಪ್ರಶ್ನೆ ಎದ್ದಿದೆ. ರಷ್ಯಾ ಮತ್ತು ಉಕ್ರೇನ್ (Russia Ukraine War) ನಡುವಿನ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾಗೆ ಆರ್ಥಿಕವಾಗಿ ಹಾನಿ ಮಾಡಲು ಅಮೆರಿಕವು ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಭಾರಿ ಪ್ರಮಾಣದ ಸುಂಕ (Tariff) ವಿಧಿಸಲು ಈ ಹಿಂದೆ ಮಸೂದೆಯೊಂದನ್ನು ರೂಪಿಸಿತ್ತು ಇತ್ತೀಚಿಗೆ ನಿಧನರಾದ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಮತ್ತು ಡೆಮಾಕ್ರಟಿಕ್ ಸೆನೆಟರ್ ರಿಚರ್ಡ್ ಬ್ಲೂಮೆಂಥಾಲ್ ಅವರು ಜಂಟಿಯಾಗಿ ಮಂಡಿಸಿದ್ದ ಈ ದ್ವಿಪಕ್ಷೀಯ ಮಸೂದೆಯಲ್ಲಿ, ರಷ್ಯಾ ಮೂಲದ ಇಂಧನವನ್ನು ಆಮದು ಮಾಡಿಕೊಳ್ಳುವ ಭಾರತ ಮತ್ತು ಚೀನಾ (China) ಸೇರಿದಂತೆ ಇತರ ದೇಶಗಳ ಮೇಲಿನ ಮೂಲ 500% ರಷ್ಟು ಸುಂಕ (Tariff) ವಿಧಿಸುವ ಪ್ರಸ್ತಾಪವನ್ನು ಒಳಗೊಂಡಿತ್ತು. ಈಗ ರಷ್ಯಾ ಮೂಲದ ಇಂಧನವನ್ನು ಖರೀದಿಸುವ ದೇಶಗಳ ಮೇಲಿನ ಕಠಿಣ ನಿರ್ಬಂಧಗಳನ್ನು ಅಮೆರಿಕ ಕೊಂಚ ಸಡಿಲಗೊಳಿಸಿದೆ. ಮಸೂದೆಯ ಹೊಸ ಆವೃತ್ತಿಯ ಪ್ರಕಾರ, ರಷ್ಯಾದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಖರೀದಿಸುವ ಮೂರನೇ ವ್ಯಕ್ತಿ (ಇತರ ದೇಶಗಳು) ದೇಶಗಳ ಮೇಲೆ ವಿಧಿಸಬಹುದಾದ ಗರಿಷ್ಠ ಸುಂಕದ ಪ್ರಮಾಣವನ್ನು 100% ಕ್ಕೆ ಇಳಿಸಲಾಗಿದೆ. ಈ ನವೀಕೃತ ಆವೃತ್ತಿಯು ರಷ್ಯಾದ ಒಟ್ಟು ನೈಸರ್ಗಿಕ ಅನಿಲ ರಫ್ತಿನಲ್ಲಿ 15% ಕ್ಕಿಂತ ಕಡಿಮೆ ಆಮದು ಮಾಡಿಕೊಳ್ಳುವ ಹಾಗೂ ಆ ಆಮದನ್ನು ಮತ್ತಷ್ಟು ಕಡಿಮೆ ಮಾಡಲು ಗಮನಾರ್ಹ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ದೇಶಗಳಿಗೆ ವಿನಾಯಿತಿ ನೀಡಲು ಅವಕಾಶ ಕಲ್ಪಿಸಿದೆ. ಮೊದಲಿದ್ದ 500% ರಷ್ಟು ಭಾರಿ ಸುಂಕದ ನಿಯಮದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಬಹುದು ಮತ್ತು ಉಕ್ರೇನ್ ಯುದ್ಧದಲ್ಲಿ ತನಗೆ ಬೆಂಬಲ ನೀಡುತ್ತಿರುವ ಇತರ ಮಿತ್ರ ರಾಷ್ಟ್ರಗಳಿಗೂ ಆರ್ಥಿಕವಾಗಿ ನಷ್ಟವಾಗಬಹುದು ಎಂಬ ಆತಂಕ ಅಮೆರಿಕದ ಸಂಸದರಲ್ಲಿ ಮೂಡಿತ್ತು. ಹೀಗಾಗಿ ಮಸೂದೆಯಲ್ಲಿ ಈ ಬದಲಾವಣೆಗಳನ್ನು ತರಲಾಗಿದೆ. ಇದನ್ನೂ ಓದಿ: 14 ವರ್ಷಗಳ ಬಳಿಕ ಮತ್ತದೇ ಕುಟುಂಬದ ಮೇಲೆ ದಾಳಿ – ಊರು ಬಿಟ್ಟರೂ ಹುಡುಕಿ ಬಂದು ಇಬ್ಬರನ್ನು ಬಲಿ ಪಡೆದ ಕಾಡಾನೆ ರಷ್ಯಾದ ನೈಸರ್ಗಿಕ ಅನಿಲವನ್ನು 15% ಕ್ಕಿಂತ ಕಡಿಮೆ ಆಮದು ಮಾಡಿಕೊಳ್ಳುವ ಹಾಗೂ ಅದನ್ನು ಇನ್ನೂ ಕಡಿಮೆ ಮಾಡಲು ಕ್ರಮ ಕೈಗೊಳ್ಳುತ್ತಿರುವ ಜಪಾನ್, ಫ್ರಾನ್ಸ್, ಹಂಗೇರಿ ಮತ್ತು ಬೆಲ್ಜಿಯಂನಂತಹ ದೇಶಗಳಿಗೆ ಈ ನಿಯಮದಿಂದ ವಿನಾಯಿತಿ ಸಿಗುವ ಸಾಧ್ಯತೆಯಿದೆ. ಕಳೆದ ಶನಿವಾರ ಹಠಾತ್ತನೆ ನಿಧನರಾದ ಸೆನೆಟರ್ ಗ್ರಹಾಂ ಅವರು, ತಮ್ಮ ಸಾವಿಗೆ ಕೇವಲ ಒಂದು ದಿನ ಮುಂಚಿತವಾಗಿ ಉಕ್ರೇನ್ ಪ್ರವಾಸದಲ್ಲಿದ್ದಾಗ ಈ ಮಸೂದೆಯ ಕುರಿತು ಮಾತನಾಡಿದ್ದರು. ಮಸೂದೆಯನ್ನು ಮಂಡಿಸಿ ಒಂದು ವರ್ಷಕ್ಕೂ ಅಧಿಕ ಸಮಯ ಕಳೆದಿದ್ದು, ಇದನ್ನು ಮುಂದಕ್ಕೆ ಕೊಂಡೊಯ್ಯಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರೊಂದಿಗೆ ತಾವು ಒಪ್ಪಂದಕ್ಕೆ ಬಂದಿರುವುದಾಗಿ ಅವರು ಘೋಷಿಸಿದ್ದರು. ರಷ್ಯಾದಿಂದ ಕಚ್ಚಾ ತೈಲವನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ವಿಶ್ವದ ಟಾಪ್ 5 ದೇಶಗಳನ್ನು (ಚೀನಾ, ಭಾರತ, ಸ್ಲೋವಾಕಿಯಾ, ಹಂಗೇರಿ ಮತ್ತು ಅಜರ್ಬೈಜಾನ್) ಗುರಿಯಾಗಿಸಿಕೊಂಡು ಈ ಸುಂಕದ ನಿಯಮ ರೂಪಿಸಲಾಗಿದೆ. ಇದನ್ನೂ ಓದಿ: ಕಚ್ಚಾ ತೈಲ ದರ ಸಮರ – ಸೌದಿಯಿಂದ ಭಾರೀ ಕಡಿತ, ಭಾರತಕ್ಕೆ ಏನು ಲಾಭ? ಹೊಸ ಪರಿಷ್ಕೃತ ಮಸೂದೆಯ ಪ್ರಕಾರ ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆಯಾಗದಂತೆ ತಡೆಯಲು ಅಗತ್ಯ ಬಿದ್ದರೆ ಈ ಸುಂಕದ ನಿರ್ಬಂಧಗಳಿಂದ ಕೆಲವು ದೇಶಗಳಿಗೆ ವಿನಾಯಿತಿ ನೀಡುವ ವಿಶೇಷ ಅಧಿಕಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೀಡಲಾಗಿದೆ. ಭಾರತದ ಅಮೆರಿಕ ವಸ್ತುಗಳಿಗೆ ಭಾರೀ ತೆರಿಗೆ ವಿಧಿಸುತ್ತದೆ ಎಂದು ಹೇಳಿ ಟ್ರಂಪ್ ಆರಂಭದಲ್ಲಿ 25% ಸುಂಕ ವಿಧಿಸಿದ್ದರು. ಬಳಿಕ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ಸುಂಕ ಹೇರಿದ್ದರು. ಪರಿಣಾಮ ಭಾರತದ ಕೆಲ ವಸ್ತುಗಳಿಗೆ 50% ಸುಂಕವನ್ನು ಅಮೆರಿಕ ವಿಧಿಸಿತ್ತು. ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್ ಸರ್ಕಾರದ ಹಿಂದಿನ ಕೆಲವು ಸುಂಕಗಳನ್ನು ಕಾನೂನುಬಾಹಿರ ಎಂದು ತೀರ್ಪು ನೀಡಿದ ನಂತರ, ಶ್ವೇತಭವನವು ಸೆಕ್ಷನ್ 122 ರ ಅಡಿಯಲ್ಲಿ ಭಾರತಕ್ಕೆ ತಾತ್ಕಾಲಿಕವಾಗಿ 10% ರಷ್ಟು ಜಾಗತಿಕ ಸುಂಕವನ್ನು ನಿಗದಿಪಡಿಸಿದೆ.