ಬೆಂಗಳೂರಿಗರಿಗೆ ಗುಡ್ನ್ಯೂಸ್; ಇನ್ಸ್ಟಾಮಾರ್ಟ್ ಆ್ಯಪ್ನಲ್ಲಿ ಸಿಗಲಿದೆ HP ಗ್ಯಾಸ್ ಸಿಲಿಂಡರ್; ಆರ್ಡರ್ ಮಾಡುವುದು ಹೇಗೆ?
ನವದೆಹಲಿ/ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಇನ್ಸ್ಟಾಮಾರ್ಟ್ ಆ್ಯಪ್ನಲ್ಲಿ (Swiggy’s Instamart App) `ಎಲ್ಪಿಜಿ ಗ್ಯಾಸ್ ಸಿಲಿಂಡರ್’ ಖರೀದಿಸುವ ಕ್ರಾಂತಿಕಾರಿ ಬದಲಾವಣೆಗೆ ಹೆಚ್ಪಿ ಗ್ಯಾಸ್ ಕಂಪನಿ ಮುಂದಡಿ ಇಟ್ಟಿದ್ದು, ಬೆಂಗಳೂರಿಗೆ ಸಿಹಿ ಸುದ್ದಿ ಕೊಟ್ಟಿದೆ. ಹಾಗಾಗಿ ಇನ್ಮುಂದೆ ವೆರೈಟಿ ಆಹಾರ, ತರಕಾರಿ ದಿನಸಿ ಬಟ್ಟೆ ಬರೆಗೆ ಮಾತ್ರವಲ್ಲ, ಗ್ಯಾಸ್ ಸಿಲಿಂಡರ

ನವದೆಹಲಿ/ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಇನ್ಸ್ಟಾಮಾರ್ಟ್ ಆ್ಯಪ್ನಲ್ಲಿ (Swiggy’s Instamart App) `ಎಲ್ಪಿಜಿ ಗ್ಯಾಸ್ ಸಿಲಿಂಡರ್’ ಖರೀದಿಸುವ ಕ್ರಾಂತಿಕಾರಿ ಬದಲಾವಣೆಗೆ ಹೆಚ್ಪಿ ಗ್ಯಾಸ್ ಕಂಪನಿ ಮುಂದಡಿ ಇಟ್ಟಿದ್ದು, ಬೆಂಗಳೂರಿಗೆ ಸಿಹಿ ಸುದ್ದಿ ಕೊಟ್ಟಿದೆ. ಹಾಗಾಗಿ ಇನ್ಮುಂದೆ ವೆರೈಟಿ ಆಹಾರ, ತರಕಾರಿ ದಿನಸಿ ಬಟ್ಟೆ ಬರೆಗೆ ಮಾತ್ರವಲ್ಲ, ಗ್ಯಾಸ್ ಸಿಲಿಂಡರ್ ಖರೀದಿಗೂ ಆನ್ಲೈನ್ ಶಾಪಿಂಗ್ ಮೊರೆ ಹೋಗಬಹುದು. ಇನ್ಸ್ಟಾಮಾರ್ಟ್ ಹೆಚ್ಪಿಸಿಎಲ್ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಆ್ಯಪ್ ಮೂಲಕ ಗ್ಯಾಸ್ ಸಿಲಿಂಡರ್ ವಿತರಣಾ ಸೇವೆ ಆರಂಭಿಸಿದೆ. ಇಲ್ಲಿ ಹೊಸ ತಂತ್ರಜ್ಞಾನದ 10 ಕೆಜಿ ‘ಹೆಚ್ಪಿ ನವ್ಯ’ ಕಾಂಪೋಸಿಟ್ ಮತ್ತು 5 ಕೆಜಿ ಸಿಲಿಂಡರ್ಗಳು (HP LPG cylinder) ಲಭ್ಯವಿವೆ. ಯಾವುದೇ ಕಠಿಣ ದಾಖಲೆಗಳ ಗೋಜಿಲ್ಲದೆ ಸುಲಭವಾಗಿ ಆರ್ಡರ್ ಮಾಡಬಹುದಾಗಿದ್ದು, ಹೆಚ್ಪಿಸಿಎಲ್ನ ತರಬೇತಿ ಪಡೆದ ಅಧಿಕೃತ ವಿತರಕರು ಸುರಕ್ಷತಾ ನಿಯಮಗಳೊಂದಿಗೆ ಸಿಲಿಂಡರ್ಗಳನ್ನು ಗ್ರಾಹಕರ ಮನೆಗೆ ತಲುಪಿಸಲಿದ್ದಾರೆ. ಕೇಂದ್ರ ಸರ್ಕಾರದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. (HPCL) ಜೊತೆ ಒಪ್ಪಂದ ಮಾಡಿಕೊಂಡಿರುವ ಇನ್ಸ್ಟಾಮಾರ್ಟ್, ಬೇಡಿಕೆಯ ಮೇರೆಗೆ ಗ್ಯಾಸ್ ಸಿಲಿಂಡರ್ ಡೆಲಿವರಿ ಸೇವೆಯನ್ನು ಆರಂಭಿಸಿದೆ. ಇನ್ಸ್ಟಾಮಾರ್ಟ್ನಲ್ಲಿ ಸಿಲಿಂಡರ್ ಖರೀದಿಸಲು ಯಾವುದೇ ಕನೆಕ್ಷನ್, ದಾಖಲೆಗಳ ಗೋಜಲಿಲ್ಲ. ಎಮರ್ಜೆನ್ಸಿಗೆ ಎರಡನೇ ಸಿಲಿಂಡರ್ ಬೇಕು ಎನ್ನುವವರಿಗೂ, ಫ್ಲ್ಯಾಟ್ಗಳಲ್ಲಿ ವಾಸಿಸುವವರಿಗೂ ಇದು ಅತ್ಯುತ್ತಮ ಆಯ್ಕೆಯಾಗಿದೆ. ಏನಿದು ‘ಹೆಚ್ಪಿ ನವ್ಯ’ ಸಿಲಿಂಡರ್? ಈ ಒಪ್ಪಂದದ ಭಾಗವಾಗಿ ಹೆಚ್ಪಿಸಿಎಲ್ ತನ್ನ ಹೊಸ ಪೀಳಿಗೆಯ ಸಿಲಿಂಡರ್ ಆದ ‘ಹೆಚ್ಪಿ ನವ್ಯ’ವನ್ನು ಇನ್ಸ್ಟಾಮಾರ್ಟ್ ಮೂಲಕ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದು 10 ಕೆಜಿ ಸಾಮರ್ಥ್ಯದ ಕಾಂಪೋಸಿಟ್ ಸಿಲಿಂಡರ್ ಆಗಿದ್ದು, ಸಾಮಾನ್ಯ ಸಿಲಿಂಡರ್ಗಿಂತ ಅತಿ ಹಗುರವಾಗಿದೆ. ತುಕ್ಕು ಹಿಡಿಯದಂತೆ ವಿನ್ಯಾಸಗೊಳಿಸಲಾಗಿರುವ ಈ ಸಿಲಿಂಡರ್, ಅರೆ-ಪಾರದರ್ಶಕ ಬಾಡಿಯನ್ನು ಹೊಂದಿದೆ. ಇದರಿಂದ ಒಳಗಡೆ ಎಷ್ಟು ಗ್ಯಾಸ್ ಉಳಿದಿದೆ ಎಂಬುದನ್ನೂ ಗ್ರಾಹಕರು ಹೊರಗಿನಿಂದಲೇ ಸುಲಭವಾಗಿ ನೋಡಬಹುದು. ಇದರ ಜೊತೆಗೆ 5 ಕೆಜಿ ಸಾಮರ್ಥ್ಯದ ಸಾಮಾನ್ಯ ಮೆಟಲ್ ಸಿಲಿಂಡರ್ ಕೂಡ ಆ್ಯಪ್ನಲ್ಲಿ ಲಭ್ಯವಿರಲಿದೆ. ಆರ್ಡರ್ ಮಾಡುವುದು ಹೇಗೆ? ಗ್ರಾಹಕರು ಇನ್ಸ್ಟಾಮಾರ್ಟ್ ಆ್ಯಪ್ ತೆರೆದು ತಮಗೆ ಬೇಕಾದ 10 ಕೆಜಿ ಅಥವಾ 5 ಕೆಜಿ ಸಿಲಿಂಡರ್ ಅನ್ನು ಕಾರ್ಟ್ಗೆ ಸೇರಿಸಿ ಆರ್ಡರ್ ಮಾಡಬಹುದು. ಮೊದಲ ಬಾರಿಗೆ ಆರ್ಡರ್ ಮಾಡುತ್ತಿದ್ದರೆ, ಹೊಸ ಸಿಲಿಂಡರ್ನ ಪೂರ್ಣ ಹಣವನ್ನು ಪಾವತಿಸಬೇಕು. ಈ ವೇಳೆ ಗುರುತಿನ ಚೀಟಿ ಪರಿಶೀಲನೆ ಇರುತ್ತದೆ. ಒಮ್ಮೆ ಗ್ಯಾಸ್ ಖಾಲಿಯಾದ ನಂತರ, ಮತ್ತೆ ಆ್ಯಪ್ನಲ್ಲಿ ರಿಫಿಲ್ ಆರ್ಡರ್ ಮಾಡಬಹುದು. ಆಗ ಸಾಮಾನ್ಯ ಗ್ಯಾಸ್ನಂತೆಯೇ ಹೊಸ ಸಿಲಿಂಡರ್ ತಂದು ಕೊಡುವಾಗ, ಹಳೆಯ ಖಾಲಿ ಸಿಲಿಂಡರ್ ಅನ್ನು ವಾಪಸ್ ನೀಡಬೇಕಾಗುತ್ತದೆ. ಡೆಲಿವರಿ ಯಾರು ಮಾಡ್ತಾರೆ? ಈ ಗ್ಯಾಸ್ ಸಿಲಿಂಡರ್ಗಳನ್ನ ಸಾಮಾನ್ಯ ಡೆಲಿವರಿ ಬಾಯ್ಸ್ ತರುವುದಿಲ್ಲ. ಬದಲಾಗಿ, ಆಯಾ ಏರಿಯಾದಲ್ಲಿರುವ ಹೆಚ್ಪಿಸಿಲ್ನ ಅಧಿಕೃತ ವಿತರಕರೇ, ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳನ್ನ ಪಾಲಿಸಿ, ತರಬೇತಿ ಪಡೆದ ಸಿಬ್ಬಂದಿಯ ಮೂಲಕವೇ ಸಿಲಿಂಡರ್ನ್ನು ನಿಮ್ಮ ಮನೆ ಬಾಗಿಲಿಗೆ ಸುರಕ್ಷಿತವಾಗಿ ತಲುಪಿಸಲಿದ್ದಾರೆ.