ಅಯೋಧ್ಯೆ, ಬದರಿನಾಥ ಬಳಿಕ ಈಗ ವೈಷ್ಣೋದೇವಿಯಲ್ಲೂ ಅಕ್ರಮ
ಶ್ರೀನಗರ: ಅಯೋಧ್ಯೆ ರಾಮಮಂದಿರ ಹಾಗೂ ಬದರಿನಾಥ ದೇಗುಲ ದೇಣಿಗೆ ದುರುಪಯೋಗ ಪ್ರಕರಣದ ನಂತರ ಇದೀಗ ಜಮ್ಮುವಿನ ಕಟ್ರಾದಲ್ಲಿರುವ ವೈಷ್ಣೋದೇವಿ ದೇಗುಲದಲ್ಲಿ (Vaishno Devi Temple) ಅಕ್ರಮ ಬೆಳಕಿಗೆ ಬಂದಿದೆ. ರಾಮಮಂದಿರ ದೇಣಿಗೆ ಅಕ್ರಮದ ಬಳಿಕ ಬದರಿನಾಥ ದೇಗುಲದಲ್ಲಿಯೂ ತನಿಖೆಗೆ ಸಮಿತಿ ರಚಿಸಲಾಗಿದೆ. ಇದರ ನಂತರ ದೇಶದ ಹಲವು ದೇವಾಲಯಗಳು ತನಿಖಾ ವ್ಯಾಪ್ತಿಗೆ ಒಳಪಟ್ಟಿದ್ದು

ಶ್ರೀನಗರ: ಅಯೋಧ್ಯೆ ರಾಮಮಂದಿರ ಹಾಗೂ ಬದರಿನಾಥ ದೇಗುಲ ದೇಣಿಗೆ ದುರುಪಯೋಗ ಪ್ರಕರಣದ ನಂತರ ಇದೀಗ ಜಮ್ಮುವಿನ ಕಟ್ರಾದಲ್ಲಿರುವ ವೈಷ್ಣೋದೇವಿ ದೇಗುಲದಲ್ಲಿ (Vaishno Devi Temple) ಅಕ್ರಮ ಬೆಳಕಿಗೆ ಬಂದಿದೆ. ರಾಮಮಂದಿರ ದೇಣಿಗೆ ಅಕ್ರಮದ ಬಳಿಕ ಬದರಿನಾಥ ದೇಗುಲದಲ್ಲಿಯೂ ತನಿಖೆಗೆ ಸಮಿತಿ ರಚಿಸಲಾಗಿದೆ. ಇದರ ನಂತರ ದೇಶದ ಹಲವು ದೇವಾಲಯಗಳು ತನಿಖಾ ವ್ಯಾಪ್ತಿಗೆ ಒಳಪಟ್ಟಿದ್ದು, ಇದೀಗ ವೈಷ್ಣೋದೇವಿ ದೇಗುಲದಲ್ಲಿ 530 ಕೋಟಿ ರೂ. ನಕಲಿ ಬೆಳ್ಳಿ ಹಗರಣ ನಡೆದಿರುವುದು ಪತ್ತೆಯಾಗಿದೆ. ಇದನ್ನೂ ಓದಿ: E20 ವಿವಾದ| ತಪ್ಪು ಮಾಹಿತಿ ಹರಡಿ ಗಡ್ಕರಿ ಇಮೇಜ್ಗೆ ಧಕ್ಕೆ – ನಾಲ್ವರು ಇನ್ಫ್ಲುಯೆನ್ಸರ್ಗಳ ವಿರುದ್ಧ ಎಫ್ಐಆರ್ ವೈಷ್ಟೋದೇವಿ ದೇವಸ್ಥಾನಕ್ಕೆ ಭಕ್ತರು ಅರ್ಪಿಸಿದ 530 ಕೋಟಿ ರೂ. ಮೌಲ್ಯದ ಬೆಳ್ಳಿಯಲ್ಲಿ ಬೃಹತ್ ಹಗರಣದ ಶಂಕೆ ವ್ಯಕ್ತವಾಗಿದೆ. ದೇಗುಲ ಮಂಡಳಿ ಪರೀಕ್ಷೆಗೆ ಸರ್ಕಾರಿ ಟಂಕಸಾಲೆಗೆ ಕಳುಹಿಸಿದ್ದ 20 ಟನ್ ಬೆಳ್ಳಿಯ ಪೈಕಿ ಶೇ.95ರಷ್ಟು ನಕಲಿ ಲೋಹ ಮಿಶ್ರಣವಾಗಿದ್ದು, 5%-6% ಮಾತ್ರ ಆಸಲಿ ಬೆಳ್ಳಿ ಆಗಿದೆ. ಜೊತೆಗೆ ವಿಷಕಾರಿ ಕ್ಯಾಡ್ಮಿಯಂ, ಕಬ್ಬಿಣದ ಮಿಶ್ರಣ ಪತ್ತೆಯಾಗಿದೆ ಎಂದು ತನಿಖೆ ವೇಳೆ ಬಯಲಾಗಿದೆ. ಈ ಸಂಬಂಧ ತನಿಖೆಗೆ ವಿಳಂಬ ಮಾಡಿದ ಹಿನ್ನೆಲೆ ಕ್ರೈಂ ಬ್ರಾಂಚ್ ಅಧಿಕಾರಿಗಳಿಗೆ ಸಮನ್ಸ್ ನೀಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣವಾದ ದಾಖಲೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಜಮ್ಮು ನ್ಯಾಯಾಲಯದಿಂದ ಸೂಚನೆ ನೀಡಲಾಗಿದೆ. ಸದ್ಯ ವೈಷ್ಣೋದೇವಿ ದೇಗುಲದಲ್ಲಿ ಭಕ್ತರಿಂದ ಅರ್ಪಿತವಾದ ಬೆಳ್ಳಿಯೇ ನಕಲಿಯಾಗಿತ್ತೋ ಅಥವಾ ಟ್ರಸ್ಟ್ನಿಂದಲೇ ಆಕ್ರಮ ನಡೆದಿದೆಯೇ ಎಂಬುದು ವಿಚಾರಣೆಯ ಕೇಂದ್ರಬಿಂದುವಾಗಿದೆ.ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಹೆಚ್ಚಿದ ಕೊರೋನಾ ಭೀತಿ – 32 ಜನರಲ್ಲಿ ಸೋಂಕು ದೃಢ