ಚಿಂಚೋಳಿ ಮತದಾರರ ಗಣತಿ ನಮೂನೆಗಳು ಶೇ 99.8 ವಿತರಣೆ
ಚಿಂಚೋಳಿ: ‘ಮತದಾರರ ವಿಶೇಷ ಪರಿಷ್ಕರಣೆಯ ಭಾಗವಾಗಿ (ಚಿಂಚೋಳಿ ಮತ್ತು ಭಾಗಶ:ಕಾಳಗಿ ತಾಲ್ಲೂಕು ಒಳಗೊಂಡ) ಚಿಂಚೋಳಿ ವಿಧಾನಸಭಾ ಮತಕ್ಷೇತ್ರದ 242 ಮತಗಟ್ಟೆಗಳಲ್ಲಿ ಮತದಾರರಿಗೆ ಮತದಾರರ ಗಣತಿ ನಮೂನೆಗಳು ಶೇ 99.8 ವಿತರಿಸಲಾಗಿದೆ’ ಎಂದು ವಿಧಾನಸಭಾ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸಂತೋಷ ಇನಾಂದಾರ ತಿಳಿಸಿದ್ದಾರೆ.42-ಚಿಂಚೋ

ಚಿಂಚೋಳಿ: ‘ಮತದಾರರ ವಿಶೇಷ ಪರಿಷ್ಕರಣೆಯ ಭಾಗವಾಗಿ (ಚಿಂಚೋಳಿ ಮತ್ತು ಭಾಗಶ:ಕಾಳಗಿ ತಾಲ್ಲೂಕು ಒಳಗೊಂಡ) ಚಿಂಚೋಳಿ ವಿಧಾನಸಭಾ ಮತಕ್ಷೇತ್ರದ 242 ಮತಗಟ್ಟೆಗಳಲ್ಲಿ ಮತದಾರರಿಗೆ ಮತದಾರರ ಗಣತಿ ನಮೂನೆಗಳು ಶೇ 99.8 ವಿತರಿಸಲಾಗಿದೆ’ ಎಂದು ವಿಧಾನಸಭಾ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸಂತೋಷ ಇನಾಂದಾರ ತಿಳಿಸಿದ್ದಾರೆ.42-ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ 2,18,160 ಮತದಾರರ ಗಣತಿಯ ಮುದ್ರಿತ ನಮೂನೆಗಳು ಇದ್ದು, ಇವುಗಳಲ್ಲಿ 2,17,794 ನಮೂನೆ ಫಾರಂಗಳನ್ನು ವಿತರಿಸಲಾಗಿದೆ. ಈಗಾಗಲೇ 1,03,982 ಡಿಜಿಟಲೀಕರಣ ನಡೆಸಲಾಗಿದೆ. ಇದು ಒಟ್ಟು ಮತದಾರರ ಗಣತಿ ನಮೂನೆಯ ಶೇ 47.66 ಆಗಿದೆ ಎಂದರು.‘ಮತಗಟ್ಟೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಜನರ ಸ್ಪಂದನೆಯೂ ಉತ್ತಮವಾಗಿದೆ. ಮತದಾರರ ಗಣತಿ ನಮೂನೆಗಳನ್ನು ಸ್ವೀಕರಿಸಿ ಡಿಜಿಟಲೀಕರಣ ನಡೆಸುವಲ್ಲಿ ಜಿಲ್ಲೆಗೆ ಚಿಂಚೋಳಿ ಮೊದಲ ಸ್ಥಾನದಲ್ಲಿದೆ’ ಎಂದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260715-31-1985733895