ಹಣ ಕಳವು: ಪರಿಶೀಲನೆ ವೇಳೆ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕಿ!
ಜೈಪುರ: ಹಣ ಕಳೆದುಹೋಗಿದೆ ಎಂದು ಶಿಕ್ಷಕಿಯೊಬ್ಬರು ಶೋಧನೆಗಾಗಿ 9 ಮತ್ತು 11ನೇ ತರಗತಿಯ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ್ದಾರೆ. ರಾಜಸ್ಥಾನದ ಸವಾಯಿ ಮಾದೋಪುರದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ ಈ ದುರ್ವರ್ತನೆ ತೋರಿದ್ದು, ಅಮಾನತುಗೊಂಡಿದ್ದಾರೆ.ಲಿವಲಿ ಹಳ್ಳಿಯ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು, ಶಾಲೆಯ ಗೇಟ್ ಬಂದ್ ಮಾಡಿದ ಗ್ರಾಮಸ್ಥರು ಮತ್ತ

ಜೈಪುರ: ಹಣ ಕಳೆದುಹೋಗಿದೆ ಎಂದು ಶಿಕ್ಷಕಿಯೊಬ್ಬರು ಶೋಧನೆಗಾಗಿ 9 ಮತ್ತು 11ನೇ ತರಗತಿಯ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ್ದಾರೆ. ರಾಜಸ್ಥಾನದ ಸವಾಯಿ ಮಾದೋಪುರದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ ಈ ದುರ್ವರ್ತನೆ ತೋರಿದ್ದು, ಅಮಾನತುಗೊಂಡಿದ್ದಾರೆ.ಲಿವಲಿ ಹಳ್ಳಿಯ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು, ಶಾಲೆಯ ಗೇಟ್ ಬಂದ್ ಮಾಡಿದ ಗ್ರಾಮಸ್ಥರು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ಈ ಘಟನೆ ನಡೆದಿದೆ. ಹಿರಿಯ ಹಿಂದಿ ಶಿಕ್ಷಕಿ ಸರಸ್ವತಿ ಮೀನಾ ಎಂಬುವವರು ತಮ್ಮಲ್ಲಿದ್ದ ₹1,000 ಹಣ ಕಳುವಾಗಿದೆ ಎಂದು ಆರೋಪಿಸಿದ್ದರು. 9 ಮತ್ತು 11ನೇ ತರಗತಿಯ ವಿದ್ಯಾರ್ಥಿನಿಯರ ಬಗ್ಗೆ ಅನುಮಾನಗೊಂಡ ಶಿಕ್ಷಕಿ, ಅವರ ಬಟ್ಟೆ ಬಿಚ್ಚಿಸಿ ಶೋಧ ನಡೆಸಿದ್ದಾರೆ.ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಶಿಕ್ಷಕಿಯನ್ನು ಅಮಾನತು ಮಾಡಿರುವ ಶಿಕ್ಷಣ ಇಲಾಖೆ, ಮುಖ್ಯ ಶಿಕ್ಷಕಿ ವಿರುದ್ಧವೂ ಕ್ರಮಕ್ಕೆ ಆದೇಶಿಸಿದೆ.ಆರೋಪ ತಳ್ಳಿ ಹಾಕಿರುವ ಶಿಕ್ಷಕಿ ಮೀನಾ, ಹಣ ಕಳೆದುಹೋಗಿದ್ದರಿಂದ ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದ್ದೇನೆಯೇ ಹೊರತು ಬಟ್ಟೆ ಬಿಚ್ಚಿಸಿಲ್ಲ. ಒಬ್ಬ ಶಿಕ್ಷಕಿಯಾಗಿ ಅಂತಹ ಕೆಲಸ ಮಾಡುವುದು ಸರಿಯಲ್ಲ ಎಂಬುದು ನನಗೆ ತಿಳಿದಿದೆ ಎಂದಿದ್ದಾರೆ.ಬಟ್ಟೆ ಬಿಚ್ಚಿಸಿರುವುದರಿಂದ ವಿದ್ಯಾರ್ಥಿನಿಯರು ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದು, ಶಾಲೆಯಿಂದ ಮನೆಗೆ ಬಂದ ಬಳಿಕ ವೃತ್ತಾಂತದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಾರೆ.ಕೂಡಲೇ ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಶಿಕ್ಷಣಾಧಿಕಾರಿ ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ ನೀಡಿ ಗ್ರಾಮಸ್ಥರ ಮನವೊಲಿಸಿದ್ದಾರೆ.