ಅಹಮದಾಬಾದ್ ದುರಂತದ ಅಂತಿಮ ತನಿಖಾ ವರದಿ ಅಕ್ಟೋಬರ್ನಲ್ಲಿ ಸಿದ್ಧ: ಸುಪ್ರೀಂಗೆ AAIB
ನವದೆಹಲಿ: 2025ರ ಜೂನ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ ತನಿಖೆಯ ಅಂತಿಮ ಕರಡು ವರದಿ ಈ ವರ್ಷದ ಅಕ್ಟೋಬರ್ನಲ್ಲಿ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಸುಪ್ರೀಂ ಕೋರ್ಟ್ಗೆ ತಿಳಿಸಿದೆ.ಅಂತರರಾಷ್ಟ್ರೀಯ ನಿಯಮಾಗಳಡಿ ತನಿಖೆಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ವಿವರವಾದ ಅಫಿಡವಿಟ್ನಲ್ಲಿ ಎಎಐಬಿ ಈ ಕೆಳಗಿನ ಅಂಶಗಳನ್ನು

ನವದೆಹಲಿ: 2025ರ ಜೂನ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ ತನಿಖೆಯ ಅಂತಿಮ ಕರಡು ವರದಿ ಈ ವರ್ಷದ ಅಕ್ಟೋಬರ್ನಲ್ಲಿ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಸುಪ್ರೀಂ ಕೋರ್ಟ್ಗೆ ತಿಳಿಸಿದೆ.ಅಂತರರಾಷ್ಟ್ರೀಯ ನಿಯಮಾಗಳಡಿ ತನಿಖೆಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ವಿವರವಾದ ಅಫಿಡವಿಟ್ನಲ್ಲಿ ಎಎಐಬಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದೆ. ಅಂತರರಾಷ್ಟ್ರೀಯ ವಿಮಾನಯಾನಕ್ಕೆ ಸಂಬಂಧಿಸಿದ ಅಪಘಾತದ ತನಿಖೆಯು, ಕೇವಲ ದೇಶಿಯ ಕಾನೂನು ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ. ಅದಕ್ಕೆ ಜಾಗತಿಕ ನಿಯಮಗಳಿರುತ್ತವೆ. ಹೀಗಾಗಿ ಈ ತನಿಖೆಯು ಚಿಕಾಗೋ ಕನ್ವೆನ್ಷನ್ ಮತ್ತು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ನಿಯಮಗಳ ಅನುಬಂಧ 13ರ ಅಡಿಯಲ್ಲಿಯೇ ತನಿಖೆ ನಡೆಯಬೇಕು ಎಂದು ಎಎಐಬಿ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.ಈ ನಿಯಮಗಳ ಪ್ರಕಾರ ವಿಮಾನವನ್ನು ನೋಂದಣಿ ಮಾಡಿದ ದೇಶ, ವಿಮಾನ ತಯಾರಿಸಿದ ದೇಶ ಮತ್ತು ವಿನ್ಯಾಸಗೊಳಿಸಿದ ದೇಶಗಳು ಕೂಡ ತನಿಖೆಯಲ್ಲಿ ಭಾಗವಹಿಸುವ ಹಕ್ಕನ್ನು ಹೊಂದಿರುತ್ತವೆ ಎಂದೂ ಹೇಳಿದೆ.ಸುರಕ್ಷತೆಗೆ ಹೆಚ್ಚಿನ ಆದ್ಯತೆ ವಿಮಾನ ಅಪಘಾತದ ತನಿಖೆಯ ಮುಖ್ಯ ಉದ್ದೇಶ ನಾಗರಿಕ ವಿಮಾನಯಾನ ಸುರಕ್ಷತೆಯನ್ನು ಸುಧಾರಿಸುವುದು ಮತ್ತು ಭವಿಷ್ಯದಲ್ಲಿ ಇಂತಹ ಅಪಘಾತಗಳು ಮರುಕಳಿಸದಂತೆ ತಡೆಯುವುದೇ ಹೊರತು, ಯಾರ ಮೇಲೆಯೂ ತಪ್ಪು ಹೊರಿಸುವುದು ಅಥವಾ ಸಿವಿಲ್/ಕ್ರಿಮಿನಲ್ ಪ್ರಕರಣವನ್ನು ನಿಗದಿಪಡಿಸುವುದಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.ಅಪಘಾತದ ಗಂಭೀರತೆ ಮತ್ತು ಜಟಿಲತೆಯನ್ನು ಗಮನದಲ್ಲಿಟ್ಟುಕೊಂಡು ತನಿಖೆಯ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ಬಾಕಿ ಉಳಿದಿರುವ ಕೆಲವು ಪ್ರಕ್ರಿಯೆಗಳು ಮುಗಿದರೆ, ಮುಂದಿನ ಆರು ವಾರಗಳಲ್ಲಿ ತನಿಖಾ ಪ್ರಕ್ರಿಯೆಗಳು ಮುಕ್ತಾಯಗೊಳ್ಳಲಿವೆ. ವಿಶ್ಲೇಷಣಾ ಹಂತ ಮುಗಿದು, 2026ರ ಅಕ್ಟೋಬರ್ ವೇಳೆಗೆ ಅಂತಿಮ ಕರಡು ವರದಿ ಸಿದ್ಧವಾಗಲಿದೆ ಎಂದು ಎಎಐಬಿ ಸ್ಪಷ್ಟಪಡಿಸಿದೆ.ಮಾಹಿತಿಯ ಗೋಪ್ಯತೆ ಸಾಕ್ಷಿಗಳ ಹೇಳಿಕೆಗಳು, ಕಾಕ್ಪಿಟ್ ವಾಯ್ಸ್ ರೆಕಾರ್ಡರ್ (CVR) ಧ್ವನಿಮುದ್ರಣಗಳು, ಏರ್ ಟ್ರಾಫಿಕ್ ಕಂಟ್ರೋಲ್ (ATC) ಸಂವಹನಗಳು ಅತ್ಯಂತ ಸೂಕ್ಷ್ಮ ದಾಖಲೆಗಳಾಗಿದ್ದು, ಇವುಗಳ ಗೋಪ್ಯತೆಯನ್ನು ಕಾಯ್ದುಕೊಳ್ಳುವುದು ಕಾನೂನುಬದ್ಧವಾಗಿ ಅಗತ್ಯವಾಗಿದೆ ಎಂದೂ ಸಂಸ್ಥೆ ಪ್ರತಿಪಾದಿಸಿದೆ.ಕ್ಷಣಾರ್ಧದಲ್ಲಿ ಸಂಭವಿಸಿದ್ದ ದುರಂತ 2025ರ ಜೂನ್ 12ರಂದು ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕ್-ಆಫ್ ಆದ ಕೆಲವೇ ನಿಮಿಷಗಳಲ್ಲಿ ರನ್ವೇ ಕೊನೆಯಿಂದ ಒಂದು ನಾಟಿಕಲ್ ಮೈಲಿಗಿಂತ ಕಡಿಮೆ ದೂರದಲ್ಲಿದ್ದ ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಅಪ್ಪಳಿಸಿತ್ತು.ಈ ಭೀಕರ ದುರಂತದಲ್ಲಿ ವಿಮಾನದಲ್ಲಿದ್ದ 229 ಪ್ರಯಾಣಿಕರು, 12 ಸಿಬ್ಬಂದಿ ಮತ್ತು ವೈದ್ಯಕೀಯ ಕಾಲೇಜಿನಲ್ಲಿದ್ದ 19 ಜನ ಸೇರಿದಂತೆ ಒಟ್ಟು 260 ಮಂದಿ ಸಾವಿಗೀಡಾಗಿದ್ದರು. ಅದೃಷ್ಟವಾತ್ ಓರ್ವ ಪ್ರಯಾಣಿಕ ಮಾತ್ರ ಬದುಕುಳಿದಿದ್ದ.ಅಪಘಾತದ ಸಮಯದಲ್ಲಿ ತುರ್ತು ಲೊಕೇಟರ್ ಟ್ರಾನ್ಸ್ಮಿಟರ್ (ELT) ಕಾರ್ಯನಿರ್ವಹಿಸಲು ವಿಫಲವಾಗಿತ್ತು. ಪೈಲಟ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮತ್ತು ಸಹ-ಪೈಲಟ್ ಕ್ಯಾಪ್ಟನ್ ಕ್ಲೈವ್ ಕುಂದರ್ ಇಬ್ಬರೂ ಸಾವಿಗೀಡಾಗಿದ್ದರು.ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪೈಲಟ್ ತಂದೆವಿಮಾನ ಅಪಘಾತದ ಬಗ್ಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಕೋರಿ ದುರಂತದಲ್ಲಿ ಮೃತಪಟ್ಟ ಪೈಲಟ್ ಸುಮೀತ್ ಸಭರ್ವಾಲ್ ಅವರ ತಂದೆ ಪುಷ್ಕರಾಜ್ ಸಭರ್ವಾಲ್ ಮತ್ತು ಭಾರತೀಯ ಪೈಲಟ್ಗಳ ಒಕ್ಕೂಟವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.ದುರಂತದ ಬಗ್ಗೆ ನ್ಯಾಯಯುತ, ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದರು.ಅಪಘಾತದ ನಿಖರವಾದ ಕಾರಣವನ್ನು ಗುರುತಿಸದೆ ಅಪೂರ್ಣ ಮತ್ತು ಪೂರ್ವಾಗ್ರಹ ಪೀಡಿತ ತನಿಖೆಯು ಭವಿಷ್ಯದಲ್ಲಿ ಪ್ರಯಾಣಿಕರ ಜೀವಕ್ಕೆ ಕುತ್ತು ತರುವುದಲ್ಲದೇ ವಾಯುಯಾನ ಸುರಕ್ಷತೆಯನ್ನು ದುರ್ಬಲಗೊಳಿಸುತ್ತದೆ. ಇದು ಸಂವಿಧಾನದ 21ನೇ ವಿಧಿಯ (ಜೀವಿಸುವ ಹಕ್ಕು) ಉಲ್ಲಂಘನೆಯಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.ಅಹಮದಾಬಾದ್ ವಿಮಾನ ದುರಂತ: ಮೃತಪಟ್ಟ ಬಳಿಕವೂ ಮಾತು ಉಳಿಸಿಕೊಂಡ ಮಗ; ತಂದೆ ಭಾವುಕ