ಹಿಟ್ ಆ್ಯಂಡ್ ರನ್ ಪ್ರಕರಣ: ಆಂಧ್ರದ ಮಾಜಿ ಸಚಿವರ ಮಗನ ಬಂಧನ
ಶ್ರೀಕಾಕುಲಂ: ಆಂಧ್ರಪ್ರದೇಶದ ಮಾಜಿ ಸಚಿವ ಮತ್ತು ವೈಎಸ್ಆರ್ಸಿಪಿ ಪಕ್ಷದ ಹಿರಿಯ ಮುಖಂಡ ಸೀದಿರಿ ಅಪ್ಪಲರಾಜು ಅವರ ಪುತ್ರ ಆರವ್, ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ. ಶ್ರೀಕಾಕುಲಂ ಜಿಲ್ಲೆಯಲ್ಲಿ ಕುರಿಗಾಹಿಯೊಬ್ಬರ ಸಾವಿಗೆ ಕಾರಣವಾಗಿದ್ದ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ, ಅಪಘಾತ ನಡೆದಾಗ ಆರವ್ ಬೈಕ್ ಚಲಾಯಿಸುತ್ತಿದ್ದರು ಎಂಬುದು ತನಿಖೆಯಲ್

ಶ್ರೀಕಾಕುಲಂ: ಆಂಧ್ರಪ್ರದೇಶದ ಮಾಜಿ ಸಚಿವ ಮತ್ತು ವೈಎಸ್ಆರ್ಸಿಪಿ ಪಕ್ಷದ ಹಿರಿಯ ಮುಖಂಡ ಸೀದಿರಿ ಅಪ್ಪಲರಾಜು ಅವರ ಪುತ್ರ ಆರವ್, ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ. ಶ್ರೀಕಾಕುಲಂ ಜಿಲ್ಲೆಯಲ್ಲಿ ಕುರಿಗಾಹಿಯೊಬ್ಬರ ಸಾವಿಗೆ ಕಾರಣವಾಗಿದ್ದ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ, ಅಪಘಾತ ನಡೆದಾಗ ಆರವ್ ಬೈಕ್ ಚಲಾಯಿಸುತ್ತಿದ್ದರು ಎಂಬುದು ತನಿಖೆಯಲ್ಲಿ ದೃಢಪಟ್ಟ ಬೆನ್ನಲ್ಲೇ ಈ ಶರಣಾಗತಿ ನಡೆದಿದೆ.ಜುಲೈ 10ರ ರಾತ್ರಿ ಕಾಸಿಬುಗ್ಗಾ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬೈಕ್ ಚಲಾಯಿಸುತ್ತಿದ್ದ ಆರವ್, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕುರಿಗಾಹಿ ದಾನಯ್ಯ (45) ಅವರಿಗೆ ಡಿಕ್ಕಿ ಹೊಡೆದಿದ್ದರು. ಅಪಘಾತದ ತೀವ್ರತೆಗೆ ದಾನಯ್ಯ ಸ್ಥಳದಲ್ಲೇ ಮೃತಪಟ್ಟಿದ್ದರು.ಆರವ್ ಸ್ನೇಹಿತ ಸಿದ್ದಾರ್ಥ್ ಎಂಬಾತ ತಾನೇ ಅಪಘಾತ ಎಸಗಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದ. ಆತನ ಹೇಳಿಕೆ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ತನಿಖೆಯಲ್ಲಿ ಬೈಕ್ ಚಲಾಯಿಸುತ್ತಿದ್ದದ್ದು ಆರವ್ ಎಂಬುದು ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಶಿರ್ವ | ಹಿಟ್ ಆ್ಯಂಡ್ ರನ್; ಬೈಕ್ ಸವಾರ ಸಾವುBMW ಹಿಟ್ ಆ್ಯಂಡ್ ರನ್ ಪ್ರಕರಣ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ ಮಿಹಿರ್ ಶಾ