ಇತಿಹಾಸ ನಿರ್ಮಿಸಲು ಸಿದ್ಧ: ವಿಜಯ್ ನಟನೆಯ ‘ಜನ ನಾಯಗನ್’ ಬಿಡುಗಡೆ ದಿನಾಂಕ ಘೋಷಣೆ
ತಮಿಳುನಾಡು ಮುಖ್ಯಮಂತ್ರಿ, ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಜನ ನಾಯಗನ್ ಸಿನಿಮಾಗೆ ಕೊನೆಗೂ ಬಿಡುಗಡೆ ಮುಹೂರ್ತ ಒದಗಿಬಂದಿದೆ. ಈ ಮೂಲಕ ಹಲವು ತಿಂಗಳುಗಳ ಕಾಯುವಿಕೆ ಅಂತ್ಯವಾಗಿದೆ. ಇದೇ ಜುಲೈ 23ರಂದು ಚಿತ್ರವು ಬಿಡುಗಡೆಯಾಗಲಿದೆ.ಎಚ್.ವಿನೋತ್ ನಿರ್ದೇಶನದಲ್ಲಿ ಮೂಡಿಬಂದಿರುವ ಜನ ನಾಯಗನ್ ಚಿತ್ರವು ದಳಪತಿ ವಿಜಯ್ ಅವರ ನಟನೆಯ ಕೊನೆಯ ಸಿನಿಮಾವಾಗಿದೆ. ಈ ಹಿನ್ನೆಲೆಯಲ್
ತಮಿಳುನಾಡು ಮುಖ್ಯಮಂತ್ರಿ, ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಜನ ನಾಯಗನ್ ಸಿನಿಮಾಗೆ ಕೊನೆಗೂ ಬಿಡುಗಡೆ ಮುಹೂರ್ತ ಒದಗಿಬಂದಿದೆ. ಈ ಮೂಲಕ ಹಲವು ತಿಂಗಳುಗಳ ಕಾಯುವಿಕೆ ಅಂತ್ಯವಾಗಿದೆ. ಇದೇ ಜುಲೈ 23ರಂದು ಚಿತ್ರವು ಬಿಡುಗಡೆಯಾಗಲಿದೆ.ಎಚ್.ವಿನೋತ್ ನಿರ್ದೇಶನದಲ್ಲಿ ಮೂಡಿಬಂದಿರುವ ಜನ ನಾಯಗನ್ ಚಿತ್ರವು ದಳಪತಿ ವಿಜಯ್ ಅವರ ನಟನೆಯ ಕೊನೆಯ ಸಿನಿಮಾವಾಗಿದೆ. ಈ ಹಿನ್ನೆಲೆಯಲ್ಲಿ ಜನ ನಾಯಗನ್ ಸಿನಿಮಾವು ಅಭಿಮಾನಿಗಳಲ್ಲಿ ಭಾರಿ ಕುತೂಹಲವನ್ನು ಮೂಡಿಸಿತ್ತು. ಸೆನ್ಸಾರ್ ಮಂಡಳಿಯ ಆದೇಶದಂತೆ ದೃಶ್ಯಗಳನ್ನು ನವೀಕರಿಸಿ ಇದೀಗ ಬಿಡುಗಡೆಯಾಗಲಿದೆ. Tested by fire.Forged by time.Built for history.The tougher the battle,The louder the victory.#JanaNayaganFromJuly23#JanaNayakuduFromJuly23#JanNetaFromJuly23The Hon'ble Chief Minister @actorvijay @KvnProductions #HVinoth @hegdepooja @anirudhofficial @thedeol… pic.twitter.com/21xjixgUBM— KVN Productions (@KvnProductions) July 15, 2026 ಸಿನಿಮಾದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೋಡಕ್ಷನ್ಸ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಜೊತೆಗೆ ‘ಬೆಂಕಿಯಿಂದ ಪರೀಕ್ಷಿಸಲ್ಪಟ್ಟು, ಕಾಲದಿಂದ ರೂಪಿಸಲ್ಪಟ್ಟು ಇತಿಹಾಸ ನಿರ್ಮಿಸಲು ಸಿದ್ಧವಾಗಿದೆ. ಯುದ್ಧವು ಕಠಿಣವಾದಷ್ಟು, ಅದರ ಗೆಲುವು ಜೋರಾಗಿಯೇ ಇರುತ್ತದೆ’ ಎಂದು ಬರೆದುಕೊಂಡಿದೆ. ನಟ ವಿಜಯ್ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಜನ ನಾಯಗನ್ ಚಿತ್ರದ ಬಿಡುಗಡೆಯ ಪೋಸ್ಟರ್ ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 5 ಗಂಟೆಗೆ ಜನನಾಯಗನ್ ಸಿನಿಮಾದ ವಿಶೇಷ ಪ್ರದರ್ಶನ ಇರುವುದಿಲ್ಲ. ಹೀಗಾಗಿ ಸಿನಿಮಾದ ಮೊದಲ ಪ್ರದರ್ಶನ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಲಿದೆ. View this post on Instagram ಆದರೆ ತಮಿಳುನಾಡನ್ನು ಹೊರತುಪಡಿಸಿ ಕರ್ನಾಟಕ, ಕೇರಳಂ', ಆಂಧ್ರಪ್ರದೇಶ ಮತ್ತು ತೆಲಂಗಾಣದ ಚಿತ್ರಮಂದಿರಗಳಲ್ಲಿ ಸಿನಿಮಾದ ಮೊದಲ ಪ್ರದರ್ಶನ ಬೆಳಿಗ್ಗೆ 5 ಗಂಟೆಯಿಂದಲೇ ಆರಂಭವಾಗಲಿದೆ. ಸೆನ್ಸಾರ್ ಮಂಡಳಿ (ಸಿಬಿಎಫ್ಸಿ) ಜನ ನಾಯಗನ್ ಚಿತ್ರಕ್ಕೆ ‘ಎ’ ಪ್ರಮಾಣಪತ್ರವನ್ನು ನೀಡಿದೆ. ಈ ಸಿನಿಮಾ 3 ಗಂಟೆ 3 ನಿಮಿಷಗಳಿಂದ ಕೂಡಿದೆ.