62,500 ಕೋಟಿ ಮೌಲ್ಯದ ಮೊಬೈಲ್ ಫೋನ್ ತಯಾರಿಕಾ ಯೋಜನೆಗೆ ಕೇಂದ್ರ ಸಂಪುಟ ಅಸ್ತು
– 5 ವರ್ಷಗಳಲ್ಲಿ 39 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಉತ್ಪಾದನೆ ಗುರಿ – 60 ಸಾವಿರ ನೇರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ನವದೆಹಲಿ: ದೇಶದಲ್ಲಿ ಮೊಬೈಲ್ ಉತ್ಪಾದನೆಗೆ ಮತ್ತಷ್ಟು ವೇಗ ನೀಡುವ ಮಹತ್ವದ ನಿರ್ಧಾರವನ್ನು ಇಂದು ಕೇಂದ್ರ ಸರ್ಕಾರ (Central Government) ಕೈಗೊಂಡಿದೆ. ಕೇಂದ್ರ ಸಚಿವ ಸಂಪುಟವು ಇಂದು 62,500 ಕೋಟಿ ರೂ. ಮೌಲ್ಯದ ಹೊಸ ಮೊಬೈಲ್ ಉತ್ಪಾದನಾ ಯೋಜನೆಗ

– 5 ವರ್ಷಗಳಲ್ಲಿ 39 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಉತ್ಪಾದನೆ ಗುರಿ – 60 ಸಾವಿರ ನೇರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ನವದೆಹಲಿ: ದೇಶದಲ್ಲಿ ಮೊಬೈಲ್ ಉತ್ಪಾದನೆಗೆ ಮತ್ತಷ್ಟು ವೇಗ ನೀಡುವ ಮಹತ್ವದ ನಿರ್ಧಾರವನ್ನು ಇಂದು ಕೇಂದ್ರ ಸರ್ಕಾರ (Central Government) ಕೈಗೊಂಡಿದೆ. ಕೇಂದ್ರ ಸಚಿವ ಸಂಪುಟವು ಇಂದು 62,500 ಕೋಟಿ ರೂ. ಮೌಲ್ಯದ ಹೊಸ ಮೊಬೈಲ್ ಉತ್ಪಾದನಾ ಯೋಜನೆಗೆ (Mobile Manufacturing Scheme) ಅನುಮೋದನೆ ನೀಡಿದೆ. ಇದು ಈಗಾಗಲೇ ಯಶಸ್ವಿಯಾಗಿರುವ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) (ಉತ್ಪಾದನೆ ಸಂಬಂಧಿತ ಪ್ರೋತ್ಸಾಹ ಧನ) ಯೋಜನೆಯ ಮುಂದುವರಿದ ಭಾಗವಾಗಿದ್ದು, ಮುಂದಿನ 5 ವರ್ಷಗಳ ಕಾಲ ಜಾರಿಯಲ್ಲಿರಲಿದೆ. ಇದನ್ನೂ ಓದಿ: 5 ನಿವೇಶನ, 4 ಫ್ಲಾಟ್, ಕಂತೆ ಕಂತೆ ನೋಟು, ಚಿನ್ನಾಭರಣ; 100 ಕೋಟಿ ಆಸ್ತಿ ಪತ್ತೆ – ಎಂಜಿನಿಯರ್ ಅರೆಸ್ಟ್ ಈ ಹಿಂದೆ ಜಾರಿಯಲ್ಲಿದ್ದ PLI ಯೋಜನೆಯಿಂದ ಆ್ಯಪಲ್ (Apple) ಸೇರಿದಂತೆ ಹಲವು ಜಾಗತಿಕ ಕಂಪನಿಗಳು ಭಾರತದಲ್ಲೇ ಮೊಬೈಲ್ ಉತ್ಪಾದನೆ ಆರಂಭಿಸಿದ್ದವು. ಅದರ ಪರಿಣಾಮವಾಗಿ ಸ್ಮಾರ್ಟ್ಫೋನ್ಗಳು ಭಾರತದ ಪ್ರಮುಖ ರಫ್ತು ಉತ್ಪನ್ನಗಳಲ್ಲೊಂದು ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದೆ. ಇದರಿಂದ ಭಾರತದಲ್ಲಿ ಮೊಬೈಲ್ ಉತ್ಪಾದನೆಯ ಸ್ಥಳೀಯ ಮೌಲ್ಯವರ್ಧನೆ 24% ಏರಿಕೆಯಾಗಿದೆ. ಈ ಹೊಸ ಯೋಜನೆಯಲ್ಲಿ ಸ್ಥಳೀಯವಾಗಿ ಬಿಡಿಭಾಗಗಳ ಖರೀದಿ, ಭಾರತೀಯ ಬ್ರ್ಯಾಂಡ್ಗಳ ವಿನ್ಯಾಸ ಮತ್ತು ಸಂಶೋಧನೆ (R&D) ಹಾಗೂ ಮೊಬೈಲ್ ರಫ್ತುಗೆ ವಿಶೇಷ ಪ್ರೋತ್ಸಾಹ ನೀಡಲಾಗಿದೆ ಎಂದು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ. ಇದನ್ನೂ ಓದಿ: NDA ಸೇರ್ಪಡೆಯಾಗದೇ ಮಹಿಳಾ ಮೀಸಲಾತಿ, ಡಿಲಿಮಿಟೇಷನ್ ಮಸೂದೆಗೆ ಪವಾರ್ ಬಣ ಬೆಂಬಲ! ಹೆಚ್ಚುವರಿ ಸಹಾಯಧನ ಯೋಜನೆಯಡಿ ಭಾರತದಲ್ಲೇ ತಯಾರಾಗುವ ಮೊಬೈಲ್ಗಳ ಮಾರಾಟದ ಮೇಲೆ 2.25% ನಿಂದ 5% ವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಇದಲ್ಲದೆ, ಪ್ರಮುಖ ಅಥವಾ ಬಿಡಿಭಾಗಗಳನ್ನ ದೇಶೀಯವಾಗಿ ಖರೀದಿಸಿದ್ರೆ ಹೆಚ್ಚುವರಿಯಾಗಿ 1.5% ವರೆಗೆ ಪ್ರೋತ್ಸಾಹಧನವನ್ನೂ ಒದಗಿಸಲಾಗುತ್ತದೆ. ಭಾರತೀಯ ಬ್ರ್ಯಾಂಡ್ಗಳು ಸ್ವಂತ ವಿನ್ಯಾಸ ಮತ್ತು ಸಂಶೋಧನೆಗೆ ಉತ್ತೇಜನ ನೀಡುವುದರಿಂದ 3% ಹೆಚ್ಚುವರಿ ಪ್ರೋತ್ಸಾಹಧನ ಕೂಡ ನೀಡಲಾಗುತ್ತದೆ. 39 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಉತ್ಪಾದನೆ ಗುರಿ ಈ ಯೋಜನೆಯ ಮೂಲಕ 5 ವರ್ಷಗಳಲ್ಲಿ 39 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಉತ್ಪಾದನೆ ಸಾಧಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಹಿಂದಿನ PLI ಯೋಜನೆಯಡಿ 22 ಲಕ್ಷ ಕೋಟಿ ಮೌಲ್ಯದ ಉತ್ಪಾದನೆ ದಾಖಲಾಗಿತ್ತು. ಇದೇ ಅವಧಿಯಲ್ಲಿ 60 ಸಾವಿರ ನೇರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ಹಿಂದಿನ ಯೋಜನೆಯಿಂದ ಸುಮಾರು 2 ಲಕ್ಷ ಉದ್ಯೋಗಗಳು ನಿರ್ಮಾಣವಾಗಿದ್ದವು. ಇದನ್ನೂ ಓದಿ: E20 ವಿವಾದ| ತಪ್ಪು ಮಾಹಿತಿ ಹರಡಿ ಗಡ್ಕರಿ ಇಮೇಜ್ಗೆ ಧಕ್ಕೆ – ನಾಲ್ವರು ಇನ್ಫ್ಲುಯೆನ್ಸರ್ಗಳ ವಿರುದ್ಧ ಎಫ್ಐಆರ್ ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಹಿಂದೆ PLI (ಉತ್ಪಾದನೆ ಸಂಬಂಧಿತ ಪ್ರೋತ್ಸಾಹಧನ) ಯೋಜನೆಯಡಿ 19 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಪ್ರೋತ್ಸಾಹಧನ ವಿತರಿಸಲಾಗಿತ್ತು. ಅದರಿಂದ ಸರ್ಕಾರಕ್ಕೆ 25 ಸಾವಿರ ಕೋಟಿ ರೂ. ನೇರ ತೆರಿಗೆ ಹಾಗೂ ಸುಮಾರು 3 ಲಕ್ಷ ಕೋಟಿ ರೂ. GST ಆದಾಯ ಲಭಿಸಿದೆ. ಸದ್ಯ ಯೋಜನೆಯಡಿ 20 ಸಾವಿರ ಕೋಟಿ ರೂ.ಗಳಿಗೂ ಅಧಿಕ ಹೂಡಿಕೆ ಹರಿದುಬಂದಿದ್ದು, ಆರಂಭಿಕ ಗುರಿಗಿಂತ 3 ಪಟ್ಟು ಹೆಚ್ಚು ಸಾಧನೆ ಕಂಡಿದೆ. ಸ್ಮಾರ್ಟ್ಫೋನ್ ಉತ್ಪಾದನೆ 11.61 ಲಕ್ಷ ಕೋಟಿ ರೂ.ಗಳಿಗೆ ತಲುಪಿದ್ದು, ನಿಗದಿಪಡಿಸಿದ್ದ ಗುರಿಗಿಂತ 142% ಹೆಚ್ಚು ಸಾಧನೆಯಾಗಿದೆ. ಇಂಡಿಯನ್ ಸೆಲ್ಯುಲರ್ ಅಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ICEA) ಅಧ್ಯಕ್ಷ ಪಂಕಜ್ ಮೊಹೀಂದ್ರೂ ಅವರ ಪ್ರಕಾರ, ಭಾರತದ ಜಾಗತಿಕ ಮೊಬೈಲ್ ಉತ್ಪಾದನೆಯ ಪಾಲನ್ನು 35 ರಿಂದ 40%ಗೆ ಹೆಚ್ಚಿಸುವ ಗುರಿ ಹೊಂದಿದೆ. ಈ ಹೊಸ ನೀತಿಯಿಂದ ಭಾರತ ಜಾಗತಿಕ ಸರಬರಾಜು ಸರಪಳಿಯಲ್ಲಿ ಮತ್ತಷ್ಟು ಬಲಿಷ್ಠ ಸ್ಥಾನ ಪಡೆಯಲಿದೆ. ಸುಧಾರಿತ ತಂತ್ರಜ್ಞಾನ, ಉತ್ಪಾದನಾ ಸಾಮರ್ಥ್ಯ, ಎಂಜಿನಿಯರಿಂಗ್ ಕೌಶಲ್ಯ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸಮಗ್ರ ಬೆಳವಣಿಗೆಗೆ ಹೊಸ ದಿಕ್ಕು ದೊರೆಯಲಿದೆ ಎಂದು ತಿಳಿಸಿದ್ದಾರೆ.