ಕುಡಿಯಲು ನೀರು ಕೊಡಿ ಅಂತ CWRC ಆದೇಶ: ರಾಮಲಿಂಗಾ ರೆಡ್ಡಿ
ಬೆಂಗಳೂರು: ದೆಹಲಿಯಲ್ಲಿ ನಡೆದ CWRC ಬೋರ್ಡ್ ಕುಡಿಯಲು ನೀರು (Drinking Water) ಮೀಸಲು ಇಡಿ ಎಂದು ಆದೇಶ ಮಾಡಿದೆ ಅಂತ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಇವತ್ತು ದೆಹಲಿಯಲ್ಲಿ CWRC ಮೀಟಿಂಗ್ ನಡೆದಿದೆ. ಬೋರ್ಡ್ ಅವರು ಕುಡಿಯೋ ನೀರು ಕೊಡಿ ಅಂತ ಆದೇಶ ಮಾಡಿದ್ದಾರೆ. ತಮಿಳುನಾಡು ಅವರು ನೀರು

ಬೆಂಗಳೂರು: ದೆಹಲಿಯಲ್ಲಿ ನಡೆದ CWRC ಬೋರ್ಡ್ ಕುಡಿಯಲು ನೀರು (Drinking Water) ಮೀಸಲು ಇಡಿ ಎಂದು ಆದೇಶ ಮಾಡಿದೆ ಅಂತ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಇವತ್ತು ದೆಹಲಿಯಲ್ಲಿ CWRC ಮೀಟಿಂಗ್ ನಡೆದಿದೆ. ಬೋರ್ಡ್ ಅವರು ಕುಡಿಯೋ ನೀರು ಕೊಡಿ ಅಂತ ಆದೇಶ ಮಾಡಿದ್ದಾರೆ. ತಮಿಳುನಾಡು ಅವರು ನೀರು ಬಿಡಲು ಡಿಮ್ಯಾಂಡ್ ಇಟ್ಟಿದ್ದಾರೆ. ನಮ್ಮ ರಾಜ್ಯದ ಅಡ್ವೈಸರ್ಗಳು ವಿಸಿ ಮೀಟಿಂಗ್ ನಲ್ಲಿ ನಮ್ಮ ರಾಜ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಬೋರ್ಡ್ ಕುಡಿಯುವ ನೀರಿಗೆ ಆದೇಶ ಮಾಡಿದ್ದಾರೆ ಎಂದರು. ಇದನ್ನೂ ಓದಿ: ನೋಯ್ಡಾದ ವಸತಿ ಕಟ್ಟಡದಲ್ಲಿ ಹೊತ್ತಿ ಉರಿದ ಬೆಂಕಿ – ಉಸಿರುಗಟ್ಟಿ ಇಬ್ಬರು ದುರ್ಮರಣ ತಕ್ಷಣ ತಮಿಳುನಾಡಿಗೆ ನೀರು ಬಿಡಲ್ಲ. ತಮಿಳುನಾಡಿಗೆ ನೀರು ಬಿಡಿ ಅಂತ ಆದೇಶ ಮಾಡಿಲ್ಲ. ಅದಕ್ಕೆ ನೀರು ಬಿಡಲ್ಲ. ನೀರು ಬಿಡುತ್ತಾರೆ ಅಂತ ಯಾರು ಬೇಕಾದರೂ ಆರೋಪ ಮಾಡಲಿ. ಆದರೆ ಎಷ್ಟು ನೀರು ಬಿಡಲಾಗಿದೆ ಅಂತ ಬಿಳುಗೊಂಡ್ಲುವಿನಲ್ಲಿ ಗೊತ್ತಾಗುತ್ತದೆ. ಈಗ ತಮಿಳುನಾಡಿಗೆ 3 ಟಿಎಂಸಿ ನೀರು ಮಾತ್ರ ಬಿಟ್ಟಿರೋದು. ಹೆಚ್ಚು ನೀರು ಬಿಡಲು ನಮ್ಮ ಬಳಿ ನೀರು ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಸೋನಂ ವಾಂಗ್ಚುಕ್ ಆರೋಗ್ಯ ಹದಗೆಟ್ಟಿದೆ, ಬಲವಂತವಾಗಿ ಆಹಾರ ನೀಡಿ – ದೆಹಲಿ ಹೈಕೋರ್ಟ್ಗೆ PIL ಮಂಡ್ಯ ರೈತರಿಗೆ ನೀರು ಕೊಡುವ ವಿಚಾರಕ್ಕೆ CWRC ಕುಡಿಯುವ ನೀರು ಕೊಡಿ ಅಂತ ಹೇಳಿದೆ. ರೈತರಿಗೆ ನೀರು ಕೊಡೋ ಬಗ್ಗೆ ಸಿಎಂ ಜೊತೆ ಮಾತಾಡಿ ಮುಂದೆ ಹೇಳುತ್ತೇನೆ. ದೆಹಲಿಗೆ ಹೋಗಿದ್ರೆ ಫೋನ್ನಲ್ಲಿ ಮಾತನಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಅಧಿಕಾರಿಗಳಿಗೆ ಹೊಡೆಯೋದು ಬೇಡ, ತಪ್ಪುಮಾಡಿದ್ರೆ ನನಗೆ ಹೊಡೀರಿ, ಹೊಡೆಸಿಕೊಳ್ಳೋಕೆ ರೆಡಿ ಇದ್ದೀನಿ: ಡಿಕೆಶಿ