ಮೈಸೂರು ದಸರೆಯಲ್ಲಿ ಕಂಬಳ ವಿರೋಧಿಸಿ ಪ್ರತಿಭಟನೆ ಜುಲೈ 18ರಂದು
ಮೈಸೂರು: ಮುಂಬರುವ ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆ ಆಯೋಜನೆ ವಿರೋಧಿಸಿ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಪರಿಸರಕ್ಕಾಗಿ ನಾವು ಸಂಘಟನೆ (ಪನಾಸಂ), ಕನ್ನಡ ಮತ್ತು ಪ್ರಗತಿಪರ ಸಂಘಟನೆಗಳು ಜುಲೈ 18ರಂದು ಬೆಳಿಗ್ಗೆ 10ಕ್ಕೆ ಸಾತಗಳ್ಳಿಯ ವಿಟಿಯು ಕಚೇರಿ ಸಮೀಪದ ವರ್ತುಲ ರಸ್ತೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿವೆ. ಪನಾಸಂ ರಾಜ್ಯಾಧ್ಯಕ್ಷ ಎ.ಟಿ. ರಾಮಸ್ವಾಮಿ,

ಮೈಸೂರು: ಮುಂಬರುವ ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆ ಆಯೋಜನೆ ವಿರೋಧಿಸಿ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಪರಿಸರಕ್ಕಾಗಿ ನಾವು ಸಂಘಟನೆ (ಪನಾಸಂ), ಕನ್ನಡ ಮತ್ತು ಪ್ರಗತಿಪರ ಸಂಘಟನೆಗಳು ಜುಲೈ 18ರಂದು ಬೆಳಿಗ್ಗೆ 10ಕ್ಕೆ ಸಾತಗಳ್ಳಿಯ ವಿಟಿಯು ಕಚೇರಿ ಸಮೀಪದ ವರ್ತುಲ ರಸ್ತೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿವೆ. ಪನಾಸಂ ರಾಜ್ಯಾಧ್ಯಕ್ಷ ಎ.ಟಿ. ರಾಮಸ್ವಾಮಿ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ನಿವೃತ್ತ ಮೇಜರ್ ಜನರಲ್ ಸುಧೀರ್ ಒಂಬತ್ಕೆರೆ, ಇತಿಹಾಸ ತಜ್ಞ ಪ್ರೊ.ಎನ್.ಎಸ್. ರಂಗರಾಜು, ದಸಂಸ ಮುಖಂಡ ಬೆಟ್ಟಯ್ಯ ಕೋಟೆ, ಕನ್ನಡ ಕ್ರಿಯಾ ಸಮಿತಿಯ ಮ.ಗು. ಸದಾನಂದಯ್ಯ, ಭೂಮಿ ತಾಯಿ ಹೋರಾಟ ಸಮಿತಿಯ ಕೆ.ಎಸ್. ನಂಜುಂಡೇಗೌಡ, ಬೆಳವಲ ಫೌಂಡೇಷನ್ನ ಡಾ.ರಾಮಕೃಷ್ಣ, ಟೀಮ್ ಮೈಸೂರು ಮುಖಂಡ ಕೆ. ಗೋಕುಲ್ ಗೋವರ್ಧನ್, ಪರಿಸರ ಹೋರಾಟಗಾರ್ತಿ ಭಾನು ಮೋಹನ್, ಕಾಳಚನ್ನೇಗೌಡ, ಪ್ರೊ.ಬಿ.ವಿ. ಶ್ಯಾಮಲಾ, ಪ್ರೊ.ಎಂ.ಆರ್. ಜನಾರ್ದನ, ನಬಿಜಾನ್, ಮನ್ಸೂರ್ ಅಹ್ಮದ್, ಕರ್ನಾಟಕ ಸರ್ವೋದಯ ಪಕ್ಷದ ಉಗ್ರನರಸಿಂಹೇಗೌಡ ಭಾಗವಹಿಸಲಿದ್ದಾರೆ ಎಂದು ಪನಾಸಂ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.