ರಾಹುಲ್ ಕಾರ್ಯಕ್ರಮ ವಿಫಲಗೊಳಿಸಲು ಯತ್ನ: ಕಾಂಗ್ರೆಸ್ ಆರೋಪ
ಡೆಹ್ರಾಡೂನ್ (ಪಿಟಿಐ): ಡೆಹ್ರಾಡೂನ್ನಲ್ಲಿ ಶುಕ್ರವಾರ ನಡೆಯಲಿರುವ ರಾಹುಲ್ ಗಾಂಧಿ ಅವರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದನ್ನು ತಡೆಯಲು ಉತ್ತರಾಖಂಡದ ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಆದರೂ, ಕಾರ್ಯಕ್ರಮದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದಿದ್ದಾರೆ.‘ಛಾತ್ರೋಂ ಕಿ
ಡೆಹ್ರಾಡೂನ್ (ಪಿಟಿಐ): ಡೆಹ್ರಾಡೂನ್ನಲ್ಲಿ ಶುಕ್ರವಾರ ನಡೆಯಲಿರುವ ರಾಹುಲ್ ಗಾಂಧಿ ಅವರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದನ್ನು ತಡೆಯಲು ಉತ್ತರಾಖಂಡದ ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಆದರೂ, ಕಾರ್ಯಕ್ರಮದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದಿದ್ದಾರೆ.‘ಛಾತ್ರೋಂ ಕಿ ಗೂಂಜ್’ (ವಿದ್ಯಾರ್ಥಿಗಳ ಧ್ವನಿ) ಅಭಿಯಾನದ ಅಂಗವಾಗಿ ಕಾರ್ಯಕ್ರಮ ನಡೆಯಲಿರುವ ಸ್ಥಳವನ್ನು ಕಾಂಗ್ರೆಸ್ನ ಹಿರಿಯ ನಾಯಕರು ಗುರುವಾರ ಪರಿಶೀಲಿಸಿ, ಅಲ್ಲಿನ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.ದೊಡ್ಡದಾದ ‘ಪರೇಡ್ ಮೈದಾನ’ದಲ್ಲಿ ಕಾರ್ಯಕ್ರಮ ನಡೆಸಲು ನೀಡಿದ್ದ ಅನುಮತಿಯನ್ನು ಸ್ಥಳೀಯಾಡಳಿತವು ಹಿಂಪಡೆದ ಬಳಿಕ, ಕಾರ್ಯಕ್ರಮವನ್ನು ಇಲ್ಲಿನ ಬನ್ನೂ ಶಾಲಾ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.ಆ ಮೈದಾನದಲ್ಲಿ ನಡೆಯುತ್ತಿದ್ದ ಮತ್ತೊಂದು ಕಾರ್ಯಕ್ರಮವನ್ನು ಜುಲೈ 17ರವರೆಗೆ ವಿಸ್ತರಿಸಿರುವುದರಿಂದ ಕಾಂಗ್ರೆಸ್ ಕಾರ್ಯಕ್ರಮದ ಅನುಮತಿಯನ್ನು ರದ್ದುಗೊಳಿಸಲಾಗಿದೆ ಎಂದು ಸ್ಥಳೀಯಾಡಳಿತ ತಿಳಿಸಿದೆ.‘ಆದರೆ, ರಾಹುಲ್ ಅವರ ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಸೇರುವುದನ್ನು ತಡೆಯಲು ಸರ್ಕಾರ ರೂಪಿಸಿದ ಯೋಜನೆ ಇದು’ ಎಂದು ಪಕ್ಷದ ನಾಯಕ ಹರಕ್ ಸಿಂಗ್ ರಾವತ್ ಆರೋಪಿಸಿದ್ದಾರೆ.‘ಬಿಜೆಪಿ ಉದ್ದೇಶಪೂರ್ವಕವಾಗಿಯೇ ಈ ಕೆಲಸ ಮಾಡಿದೆ ಎಂದು ನನಗನಿಸುತ್ತದೆ. ಪರೇಡ್ ಮೈದಾನ ಖಾಲಿಯಿದ್ದು, ಅಲ್ಲಿ ಯಾವುದೇ ‘ಮೇಳ’ ನಡೆಯುತ್ತಿಲ್ಲ. ‘ಮೇಳ’ವು ಮೈದಾನದ ಒಂದು ಕಡೆ ನಡೆಯುತ್ತಿದ್ದು, ನಮ್ಮ ಕಾರ್ಯಕ್ರಮ ಇನ್ನೊಂದು ಕಡೆಯಲ್ಲಿ ನಿಗದಿಯಾಗಿತ್ತು’ ಎಂದಿದ್ದಾರೆ.‘ರಾಹುಲ್ ಅವರ ಕಾರ್ಯಕ್ರಮಕ್ಕೆ 20 ಸಾವಿರದಿಂದ 25 ಸಾವಿರ ವಿದ್ಯಾರ್ಥಿಗಳು ಬರುವ ನಿರೀಕ್ಷೆಯಿದೆ. ಬನ್ನೂ ಶಾಲೆಯ ಮೈದಾನವು ಅಷ್ಟು ಜನರನ್ನು ತಾಳಿಕೊಳ್ಳುವ ಸಾಮರ್ಥ್ಯ ಹೊಂದಿಲ್ಲ’ ಎಂದು ಹೇಳಿದ್ದಾರೆ.