ಇಂಗ್ಲೆಂಡ್ನಲ್ಲಿ ಭಾರತೀಯ ಆಟಗಾರರ ಕ್ರೇಜ್ – ಅಭಿಮಾನಿಗಳ ಜೊತೆ ರೋ-ಕೊ ಪೋಸ್
ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ, ಟಿ-20 ಸರಣಿಯಲ್ಲಿ ನಿರಾಸೆ ಅನುಭವಿಸಿದರೂ, ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಗೆಲುವಿನ ಲಯ ಕಂಡುಕೊಂಡಿದೆ. ವಿಶೇಷವಾಗಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಹಾಗೂ ಕುಲ್ದೀಪ್ ಯಾದವ್ ಅವರಂತಹ ಹಿರಿಯ ಆಟಗಾರರು ತಂಡವನ್ನು ಸೇರಿಕೊಂಡ ಬಳಿಕ, ಭಾರತ ತಂಡದ ಆಟದಲ್ಲೂ ಹೊಸ ಉತ

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ, ಟಿ-20 ಸರಣಿಯಲ್ಲಿ ನಿರಾಸೆ ಅನುಭವಿಸಿದರೂ, ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಗೆಲುವಿನ ಲಯ ಕಂಡುಕೊಂಡಿದೆ. ವಿಶೇಷವಾಗಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಹಾಗೂ ಕುಲ್ದೀಪ್ ಯಾದವ್ ಅವರಂತಹ ಹಿರಿಯ ಆಟಗಾರರು ತಂಡವನ್ನು ಸೇರಿಕೊಂಡ ಬಳಿಕ, ಭಾರತ ತಂಡದ ಆಟದಲ್ಲೂ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸ ಹೆಚ್ಚಾಗಿದೆ. ಈ ಸ್ಟಾರ್ ಆಟಗಾರರಿಗೆ ಭಾರತದಲ್ಲಷ್ಟೇ ಅಲ್ಲ, ವಿಶ್ವದ ಮೂಲೆ ಮೂಲೆಗಳಲ್ಲೂ ಅಪಾರ ಅಭಿಮಾನಿಗಳಿರೋದು ಮತ್ತೊಮ್ಮೆ ಸಾಬೀತಾಗಿದೆ. ಭಾರತದಿಂದ, ಅದರಲ್ಲೂ ಕರ್ನಾಟಕದಿಂದ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ಇಂಗ್ಲೆಂಡ್ನಲ್ಲಿ ನೆಲೆಸಿರುವ ಅನೇಕ ಭಾರತೀಯರು ತಮ್ಮ ಕ್ರಿಕೆಟಿಗರನ್ನ ಭೇಟಿಯಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಆಟಗಾರರೊಂದಿಗೆ ಸೆಲ್ಫಿ ತೆಗೆಸಿಕೊಂಡು, ಆಟೋಗ್ರಾಫ್ ಪಡೆದು ಅಭಿಮಾನಿಗಳು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಇನ್ನೊಂದೆಡೆ, ಭಾರತೀಯ ಆಟಗಾರರೂ ಅಭಿಮಾನಿಗಳ ಪ್ರೀತಿಗೆ ಆತ್ಮೀಯವಾಗಿ ಸ್ಪಂದಿಸಿದ್ದಾರೆ. ಯಾವುದೇ ಬೇಸರವಿಲ್ಲದೇ ಅಭಿಮಾನಿಗಳೊಂದಿಗೆ ಫೋಟೋಗಳಿಗೆ ಪೋಸ್ ನೀಡಿ, ಆಟೋಗ್ರಾಫ್ ನೀಡಿ, ಅವರೊಂದಿಗೆ ಕೆಲ ಕ್ಷಣಗಳನ್ನು ಕಳೆದ್ದಾರೆ. ಒಟ್ಟಾರೆ, ಮೈದಾನದೊಳಗಿನ ಭಾರತದ ಗೆಲುವಿನ ಆಟದ ಜೊತೆಗೆ, ಮೈದಾನದ ಹೊರಗಿನ ಈ ಅಭಿಮಾನಿ–ಆಟಗಾರರ ಬಾಂಧವ್ಯವೂ ಎಲ್ಲರ ಗಮನ ಸೆಳೆಯುತ್ತಿದೆ.