ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ – ಓರ್ವ ಸಾವು, 200 ಕ್ಕೂ ಹೆಚ್ಚು ಭಕ್ತರು ಆಸ್ಪತ್ರೆಗೆ ದಾಖಲು
ಭುವನೇಶ್ವರ: ಕೋಟ್ಯಂತರ ಭಕ್ತರು ಕಾತರದಿಂದ ಕಾಯುತ್ತಿದ್ದ ಒಡಿಶಾದ (Odisha) ಪುರಿ ಜಗನ್ನಾಥನ (Puri Jagannath) ಐತಿಹಾಸಿಕ ರಥಯಾತ್ರೆ ಇಂದಿನಿಂದ ಆರಂಭಗೊಂಡಿದ್ದು ಮೊದಲ ದಿನವೇ ಅನಾಹುತ ಸಂಭವಿಸಿದೆ. ಜಗನ್ನಾಥ ರಥ ಯಾತ್ರೆ ವೇಳೆ ಇಲ್ಲಿನ ಗ್ರ್ಯಾಂಡ್ ರಸ್ತೆಯಲ್ಲಿ (ಬಡಾ ದಂಡ) ಕಾಲ್ತುಳಿತ ಸಂಭವಿದ್ದು, ಓರ್ವ ಸಾವನ್ನಪ್ಪಿದ್ದಾರೆ. ಸುಮಾರು 200 ಮಂದಿ ಗಾಯಗೊಂಡಿದ್ದು,

ಭುವನೇಶ್ವರ: ಕೋಟ್ಯಂತರ ಭಕ್ತರು ಕಾತರದಿಂದ ಕಾಯುತ್ತಿದ್ದ ಒಡಿಶಾದ (Odisha) ಪುರಿ ಜಗನ್ನಾಥನ (Puri Jagannath) ಐತಿಹಾಸಿಕ ರಥಯಾತ್ರೆ ಇಂದಿನಿಂದ ಆರಂಭಗೊಂಡಿದ್ದು ಮೊದಲ ದಿನವೇ ಅನಾಹುತ ಸಂಭವಿಸಿದೆ. ಜಗನ್ನಾಥ ರಥ ಯಾತ್ರೆ ವೇಳೆ ಇಲ್ಲಿನ ಗ್ರ್ಯಾಂಡ್ ರಸ್ತೆಯಲ್ಲಿ (ಬಡಾ ದಂಡ) ಕಾಲ್ತುಳಿತ ಸಂಭವಿದ್ದು, ಓರ್ವ ಸಾವನ್ನಪ್ಪಿದ್ದಾರೆ. ಸುಮಾರು 200 ಮಂದಿ ಗಾಯಗೊಂಡಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. VIDEO | Puri, Odisha: A person, who appeared to have fainted, taken for medical treatment as huge number of people gather to attend the annual Jagannath Rath Yatra. Heavy security arrangements have been put in place to manage the surge in footfall and ensure the smooth conduct… pic.twitter.com/jhf32hhPKo — Press Trust of India (@PTI_News) July 16, 2026 ಜನದಟ್ಟಣೆಯಿಂದಾಗಿ ಹಲವಾರು ಯಾತ್ರಿಕರು ಉಸಿರಾಡಲೂ ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 200 ಭಕ್ತರು ಗಾಯಗೊಂಡಿದ್ದು, ಕೂಡಲೇ ಅವರನ್ನ ಜನದಟ್ಟಣೆ ಪ್ರದೇಶದಿಂದ ರಕ್ಷಿಸಲಾಯಿತು. ಈ ಮಧ್ಯೆ ಕುಸಿದು ಬಿದ್ದ ಭಕ್ತನೊಬ್ಬ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ. ವಿಷಯ ತಿಳಿಯುತ್ತಿದ್ದಂತೆ ವಿಶೇಷ ರಕ್ಷಣಾ ಘಟಕದ (SRU) ಸಿಬ್ಬಂದಿ ಕಾಲ್ತುಳಿತ ಸಂಭವಿಸಿದ ಸ್ಥಳಕ್ಕೆ ತೆರಳಿ, ಭಕ್ತರನ್ನು ಸ್ಥಳಾಂತರಿಸಿದ್ದಾರೆ. ಗಾಯಗೊಂಡವರನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆ ಬಳಿಕ ಯಾತ್ರಾ ಮಾರ್ಗದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಜನಸಂದಣಿಯನ್ನು ನಿಯಂತ್ರಿಸಿ, ಭಕ್ತರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಳೆಯ ನಡುವೆಯೂ ಭಕ್ತ ಸಾಗರ ಬುಧವಾರ ಸಂಜೆ ಪುರಿಯಲ್ಲಿ ಸುರಿದ ಅಬ್ಬರದ ಮಳೆಯ ನಡುವೆಯೂ ಪವಿತ್ರ ರಥಯಾತ್ರೆಗಾಗಿ (Puri Jagannath Chariot) ಭಕ್ತರ ಬೃಹತ್ ಸಾಗರವೇ ತುಂಬಿ ತುಳುಕುತ್ತಿದೆ. ಮಳೆಯಲ್ಲಿ ನೆನೆದರೂ ಉತ್ಸಾಹದ ಕೊರತೆಯಾಗದೇ ಜಗನ್ನಾಥನ ದರ್ಶನ ಪಡೆಯಲು ಭಕ್ತರು ಆಗಮಿಸುತ್ತಿದ್ದಾರೆ. ಜಗತ್ತಿನ ಪಾಲಕ ಜಗನ್ನಾಥ ತನ್ನ ಅಣ್ಣ ಬಲಭದ್ರ ಮತ್ತು ತಂಗಿ ಸುಭದ್ರೆಯೊಂದಿಗೆ ವರ್ಷಕ್ಕೊಮ್ಮೆ ಚಿಕ್ಕಮ್ಮ ಗುಂಡಿಚಾ ದೇವಿಯ ಮನೆಗೆ ಸಾಗುವ ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಲು ಪುರಿ ನಗರಕ್ಕೆ ಲಕ್ಷಾಂತರ ಭಕ್ತರು ಹರಿದುಬಂದಿದ್ದಾರೆ.