ನೀಟ್–ಯುಜಿ ಫಲಿತಾಂಶ ಪ್ರಕಟ:ಪಂಜಾಬ್ನ ಆರ್ಯನ್, ಹರಿಯಾಣದ ಪಾಂಶುಲ್ಗೆ ಅಗ್ರಸ್ಥಾನ
ನವದೆಹಲಿ : ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶಕ್ಕಾಗಿನ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ನೀಟ್–ಯುಜಿ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್ಟಿಎ) ಗುರುವಾರ ಪ್ರಕಟಿಸಿದ್ದು, ಪಂಜಾಬ್ನ ಆರ್ಯನ್ಗುಪ್ತ ಹಾಗೂ ಹರಿಯಾಣದ ಪಾಂಶುಲ್ ಬನ್ಸಲ್ ಅಗ್ರ ಸ್ಥಾನ ಪಡೆದಿದ್ದಾರೆ.ಆರ್ಯನ್ ಹಾಗೂ ಬನ್ಸಲ್ ಅವರು 720 ಅಂಕಗಳ ಪೈಕಿ ತಲಾ 715 ಅಂಕಗಳನ್ನ

ನವದೆಹಲಿ : ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶಕ್ಕಾಗಿನ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ನೀಟ್–ಯುಜಿ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್ಟಿಎ) ಗುರುವಾರ ಪ್ರಕಟಿಸಿದ್ದು, ಪಂಜಾಬ್ನ ಆರ್ಯನ್ಗುಪ್ತ ಹಾಗೂ ಹರಿಯಾಣದ ಪಾಂಶುಲ್ ಬನ್ಸಲ್ ಅಗ್ರ ಸ್ಥಾನ ಪಡೆದಿದ್ದಾರೆ.ಆರ್ಯನ್ ಹಾಗೂ ಬನ್ಸಲ್ ಅವರು 720 ಅಂಕಗಳ ಪೈಕಿ ತಲಾ 715 ಅಂಕಗಳನ್ನು ಪಡೆದು ಈ ಸಾಧನೆ ಮಾಡಿದ್ದಾರೆ. 2025ರಲ್ಲಿ ನಡೆದಿದ್ದ ‘ನೀಟ್–ಯುಜಿ’ಯಲ್ಲಿ ಅಭ್ಯರ್ಥಿಯೊಬ್ಬರು ಅತ್ಯಧಿಕ 686 ಅಂಕ ಗಳಿಸಿದ್ದರು. ಆರ್ಯನ್ ಹಾಗೂ ಬನ್ಸಲ್ ಅವರು ಕಳೆದ ವರ್ಷದ ಅಭ್ಯರ್ಥಿಗಿಂತ 29 ಹೆಚ್ಚು ಅಂಕ ಗಳಿಸಿದ್ದಾರೆ.ಒಟ್ಟು 11.21 ಲಕ್ಷ ವಿದ್ಯಾರ್ಥಿಗಳು ಈ ವರ್ಷ ಅರ್ಹತೆ ಪಡೆದಿದ್ದಾರೆ. 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಬಹುಮುಖ್ಯವಾದ ಈ ಪರೀಕ್ಷೆ ಮೇ 9ರಂದು ನಡೆದಿತ್ತು. ಆದರೆ, ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಕುರಿತು ಆರೋಪಗಳು ಕೇಳಿ ಬಂದ ಕಾರಣ, ಮೇ 12ರಂದು ಎನ್ಟಿಎ ಈ ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಜೂನ್ 21ರಂದು ಮರು ಪರೀಕ್ಷೆ ನಡೆಸಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕುರಿತಂತೆ ಸಿಬಿಐ ತನಿಖೆ ನಡೆಸುತ್ತಿದೆ.