ಸೊನಮ್ ಆರೋಗ್ಯ ಅತ್ಯಂತ ಕ್ಷೀಣ
ನವದೆಹಲಿ: ‘ಸೊನಮ್ ವಾಂಗ್ಚೂಕ್ ಅವರ ಆರೋಗ್ಯವು ತೀರಾ ಹದಗೆಟ್ಟಿದೆ. ಈಗಾಗಲೇ ಅವರ ತೂಕ 8.5 ಕೆ.ಜಿ.ಯಷ್ಟು ಕಡಿಮೆಯಾಗಿದೆ. ಹೀಗೆಯೇ ಅವರು ಉಪವಾಸ ಮುಂದುವರಿಸಿದರೆ, ಇನ್ನೆರಡು ದಿನಗಳಲ್ಲಿ ಜೀವ ಕಳೆದುಕೊಳ್ಳಲಿದ್ದಾರೆ...’–‘ಸೊನಮ್ ಅವರನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ದಾಖಲಿಸುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸೂಚಿಸಿ’ ಎಂದು ಕೋರಿ ದೆಹಲಿ ಹೈಕೋರ್ಟ್

ನವದೆಹಲಿ: ‘ಸೊನಮ್ ವಾಂಗ್ಚೂಕ್ ಅವರ ಆರೋಗ್ಯವು ತೀರಾ ಹದಗೆಟ್ಟಿದೆ. ಈಗಾಗಲೇ ಅವರ ತೂಕ 8.5 ಕೆ.ಜಿ.ಯಷ್ಟು ಕಡಿಮೆಯಾಗಿದೆ. ಹೀಗೆಯೇ ಅವರು ಉಪವಾಸ ಮುಂದುವರಿಸಿದರೆ, ಇನ್ನೆರಡು ದಿನಗಳಲ್ಲಿ ಜೀವ ಕಳೆದುಕೊಳ್ಳಲಿದ್ದಾರೆ...’–‘ಸೊನಮ್ ಅವರನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ದಾಖಲಿಸುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸೂಚಿಸಿ’ ಎಂದು ಕೋರಿ ದೆಹಲಿ ಹೈಕೋರ್ಟ್ನಲ್ಲಿ ಸಲ್ಲಿಸಲಾಗಿರುವ ಪಿಐಎಲ್ನಲ್ಲಿರುವ ಅಂಶವಿದು. ಸಾಮಾಜಿಕ ಕಾರ್ಯಕರ್ತ, ವಕೀಲ ರಾಕೇಶ್ ಕುಮಾರ್ ಅವರು ದೆಹಲಿ ಹೈಕೋರ್ಟ್ನಲ್ಲಿ ಬುಧವಾರ ಈ ಅರ್ಜಿ ಸಲ್ಲಿಸಿದ್ದಾರೆ.ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಅವರು 18 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.‘ಒಂದೊಮ್ಮೆ ಸೊನಮ್ ಅವರು ಜೀವ ಕಳೆದುಕೊಂಡರೆ, ಅದು ಜಗತ್ತಿನ ಮುಂದೆ ನಮ್ಮ ದೇಶಕ್ಕೆ ಆಗುವ ಅಪಮಾನವಾಗುತ್ತದೆ. ಸರ್ಕಾರವು ಕನಿಷ್ಠಪಕ್ಷ ಒತ್ತಾಯಪಡಿಸಿಯಾದರೂ ಅವರಿಗೆ ವೈದ್ಯಕೀಯ ಸೇವೆಯನ್ನು ಒದಗಿಸಬಹುದು. ಜೀವ ಉಳಿಸಿಕೊಳ್ಳಲು ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಅವರಿಗೆ ಉಣಿಸಬೇಕು’ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ‘ತುರ್ತಾಗಿ ಕ್ರಮ ಕೈಗೊಳ್ಳಬೇಕಾದ ವಿಚಾರವಿದು. ಗುರುವಾರದ ಒಳಗೆ ಕೇಂದ್ರ ಮತ್ತು ದೆಹಲಿ ಸರ್ಕಾರವು ಈ ಬಗ್ಗೆ ತಮ್ಮ ನಿಲುವನ್ನು ನಮಗೆ ತಿಳಿಸಬೇಕು’ ಎಂದು ಪೀಠ ಹೇಳಿತು.‘ಹೆಚ್ಚುವರಿ ಸಾಲಿಸಿಟರ್ ಜನರಲ್ ಮತ್ತು ದೆಹಲಿ ಸರ್ಕಾರಕ್ಕೆ ನಮ್ಮ ಆದೇಶದ ಪ್ರತಿಯನ್ನು ತಕ್ಷಣವೇ ತಲುಪಿಸಬೇಕು’ ಎಂದು ಪೀಠ ಸೂಚಿಸಿತು. ಕೇಂದ್ರ ಸರ್ಕಾರದ ಪರ ವಕೀಲರು ನ್ಯಾಯಾಲಯದಲ್ಲಿ ಹಾಜರಿರದ ಕಾರಣ, ಅರ್ಜಿಯ ವಿಚಾರಣೆಯನ್ನು ಪೀಠವು ಗುರುವಾರಕ್ಕೆ ಮುಂದೂಡಿತು.ಕಾಕ್ರೋಚ್ ಜನತಾ ಪಾರ್ಟಿಯು (ಸಿಜೆಪಿ) ಜೂನ್ 28ರಿಂದ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಇವರ ಪ್ರತಿಭಟನೆಯನ್ನು ಬೆಂಬಲಿಸಿ ಸೊನಮ್ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇವರೊಂದಿಗೆ ಸಿಜೆಪಿಯ ಕೆಲವು ಸದಸ್ಯರೂ ಉಪವಾಸ ನಡೆಸುತ್ತಿದ್ದಾರೆ.ಉಪವಾಸ ಕೈಬಿಡುವಂತೆ ವಿರೋಧ ಪಕ್ಷದ ವಿವಿಧ ನಾಯಕರು, ಬಾಲಿವುಡ್ ನಟ–ನಟಿಯರು, ಸಾಮಾಜಿಕ ಕಾರ್ಯಕರ್ತರು ಸೊನಮ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.‘ಉಗ್ರನನ್ನು ನಡೆಸಿಕೊಂಡಂತೆ ನಡೆಸಿಕೊಳ್ಳುತ್ತಿದೆ’ ಕ್ರಿಮಿನಲ್ಗಳು ಉಗ್ರರು ದೇಶದ್ರೋಹಿಯನ್ನು ನಡೆಸಿಕೊಳ್ಳುವಂತೆ ಸರ್ಕಾರವು ಸೊನಮ್ ಅವರನ್ನು ನಡೆಸಿಕೊಳ್ಳುತ್ತಿದೆ. ಸರ್ಕಾರಕ್ಕೆ ಇವರ ಬಗ್ಗೆ ಕಾಳಜಿಯೇ ಇಲ್ಲ * ದೇಶದ ಅಂತಃಕರಣವೇ ಸತ್ತುಹೋಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ನ್ಯಾಯಾಲಯಗಳ ಅಂತಃಕರಣ ಸತ್ತುಹೋಗಿಲ್ಲ ಎಂಬ ನಂಬಿಕೆ ನಮಗೆ ಇದೆ (ಅರ್ಜಿಯಲ್ಲಿರುವ ಅಂಶಗಳು) ‘24 ಗಂಟೆಗಳಲ್ಲಿ 400 ಗ್ರಾಂ ತೂಕ ಇಳಿಕೆ’ ‘ಸೊನಮ್ ಅವರ ತೂಕವು 57.15 ಕೆ.ಜಿಗೆ ಇಳಿದಿದೆ. ಕಳೆದ 24 ಗಂಟೆಗಳಲ್ಲಿ 400 ಗ್ರಾಂ ತೂಕ ಕಡಿಮೆಯಾಗಿದೆ. ಅವರ ರಕ್ತದೊತ್ತಡವು 105/76 ಇದೆ. ಪ್ರತಿ ಡೆಸಿಲೀಟರ್ಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವು 80ರಷ್ಟಿದೆ. ರಕ್ತದಲ್ಲಿನ ಆಮ್ಲಜನಕದ ಪ್ರಮಾಣವು ಶೇಕಡ 97ರಷ್ಟಿದೆ. ದೇಹದಲ್ಲಿನ ನೀರಿನ ಪ್ರಮಾಣವು ಸೂಕ್ತ ಪ್ರಮಾಣದಲ್ಲಿದೆ’ ಎಂದು ಸೊನಮ್ ಅವರ ವೈದ್ಯಕೀಯ ಬುಲೆಟಿನ್ನಲ್ಲಿ ಸಿಜೆಪಿ ಬುಧವಾರ ತಿಳಿಸಿದೆ.