ಜುಲೈ 22ಕ್ಕೆ ಮಾಲ್ವನ್ ನೌಕೆ ಸೇರ್ಪಡೆ
ಕೊಚ್ಚಿ (ಪಿಟಿಐ): ಮಾಹೆ ಶ್ರೇಣಿಯ ಎರಡನೇ ಜಲಾಂತರ್ಗಾಮಿ ಯುದ್ಧ ನೌಕೆ ಮಾಲ್ವನ್ ಜುಲೈ 22ರಂದು ಭಾರತೀಯ ನೌಕಾ ಪಡೆಗೆ ಸೇರ್ಪಡೆಗೊಳ್ಳಲಿದೆ.‘ಶೇಕಡ 80ರಷ್ಟು ದೇಶಿಯವಾಗಿ ತಯಾರಾದ ಬಿಡಿ ಭಾಗಗಳನ್ನು ಹೊಂದಿರುವ ‘ಮಾಲ್ವನ್’, ಯುದ್ಧನೌಕೆ ವಿನ್ಯಾಸ, ನಿರ್ಮಾಣದಲ್ಲಿ ಭಾರತದ ಸಾಮರ್ಥ್ಯ ವೃದ್ಧಿಯಾಗುತ್ತಿರುವುದನ್ನು ಪ್ರತಿಬಿಂಬಿಸುತ್ತದೆ’ ಎಂದು ರಕ್ಷಣಾ ಪಡೆಯ ವಕ್ತಾರರು ಗುರ

ಕೊಚ್ಚಿ (ಪಿಟಿಐ): ಮಾಹೆ ಶ್ರೇಣಿಯ ಎರಡನೇ ಜಲಾಂತರ್ಗಾಮಿ ಯುದ್ಧ ನೌಕೆ ಮಾಲ್ವನ್ ಜುಲೈ 22ರಂದು ಭಾರತೀಯ ನೌಕಾ ಪಡೆಗೆ ಸೇರ್ಪಡೆಗೊಳ್ಳಲಿದೆ.‘ಶೇಕಡ 80ರಷ್ಟು ದೇಶಿಯವಾಗಿ ತಯಾರಾದ ಬಿಡಿ ಭಾಗಗಳನ್ನು ಹೊಂದಿರುವ ‘ಮಾಲ್ವನ್’, ಯುದ್ಧನೌಕೆ ವಿನ್ಯಾಸ, ನಿರ್ಮಾಣದಲ್ಲಿ ಭಾರತದ ಸಾಮರ್ಥ್ಯ ವೃದ್ಧಿಯಾಗುತ್ತಿರುವುದನ್ನು ಪ್ರತಿಬಿಂಬಿಸುತ್ತದೆ’ ಎಂದು ರಕ್ಷಣಾ ಪಡೆಯ ವಕ್ತಾರರು ಗುರುವಾರ ತಿಳಿಸಿದ್ದಾರೆ.ಮಾಲ್ವನ್ ನೌಕೆ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್(ಸಿಎಸ್ಎಲ್)ನಲ್ಲಿ ನಿರ್ಮಾಣಗೊಂಡಿದ್ದು, ಆಧುನಿಕ ಯುದ್ಧನೌಕೆಯ ನಿರ್ಮಾಣ ಮತ್ತು ವಿನ್ಯಾಸ ಕ್ಷೇತ್ರದಲ್ಲಿ ‘ಆತ್ಮನಿರ್ಭರ ಭಾರತ’ದ ಕನಸನ್ನು ಸಾಕಾರಗೊಳಿಸಿದೆ.
Read the complete story at Prajavani