ವೈಯಕ್ತಿಕ ದ್ವೇಷಕ್ಕೆ 600ಕ್ಕೂ ಹೆಚ್ಚು ಅಡಿಕೆ ಮರಗಳಿಗೆ ಕೊಡಲಿ – ದುಷ್ಕರ್ಮಿ ಅರೆಸ್ಟ್
ದಾವಣಗೆರೆ: ಜಮೀನಿನಲ್ಲಿ ಬೆಳೆದಿದ್ದ 600ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ನಾಶಪಡಿಸಿದ್ದ ಅರೋಪಿಯನ್ನು ದಾವಣಗೆರೆ (Davanagere) ಜಿಲ್ಲೆಯ ಮಾಯಕೊಂಡ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ. ಬುಳ್ಳಾಪುರ ಗ್ರಾಮದ ಕಿರಣ್.ಆರ್ (26) ಬಂಧಿತ ಆರೋಪಿ. ಜುಲೈ 3ರಂದು ಬುಳ್ಳಾಪುರ ತಾಂಡದ ಸಿದ್ದೇಶ್ ನಾಯ್ಕ್ ಅವರಿಗೆ ಸೇರಿದ ಅಡಿಕೆ ತೋಟದಲ್ಲಿದ್ದ ಸುಮಾರು 600ಕ್ಕೂ ಹೆ

ದಾವಣಗೆರೆ: ಜಮೀನಿನಲ್ಲಿ ಬೆಳೆದಿದ್ದ 600ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ನಾಶಪಡಿಸಿದ್ದ ಅರೋಪಿಯನ್ನು ದಾವಣಗೆರೆ (Davanagere) ಜಿಲ್ಲೆಯ ಮಾಯಕೊಂಡ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ. ಬುಳ್ಳಾಪುರ ಗ್ರಾಮದ ಕಿರಣ್.ಆರ್ (26) ಬಂಧಿತ ಆರೋಪಿ. ಜುಲೈ 3ರಂದು ಬುಳ್ಳಾಪುರ ತಾಂಡದ ಸಿದ್ದೇಶ್ ನಾಯ್ಕ್ ಅವರಿಗೆ ಸೇರಿದ ಅಡಿಕೆ ತೋಟದಲ್ಲಿದ್ದ ಸುಮಾರು 600ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ನಾಶ ಮಾಡಿದ್ದರು. ಸುಮಾರು 5 ಲಕ್ಷ ರೂ.ಗಿಂತಲೂ ಅಧಿಕ ನಷ್ಟ ಉಂಟಾಗಿದೆ ಎಂದು ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿತ್ತು. ಇದನ್ನೂ ಓದಿ: ಪತಿ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆಗೆ ಯತ್ನ – ಪ್ರೊಬೆಷನರಿ ಪಿಎಸ್ಐ ಬಂಧನ ತನಿಖೆ ವೇಳೆ ಆರೋಪಿಗಳು ವೈಯಕ್ತಿಕ ಜಗಳದಿಂದ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಜೈಲಿಗೆ ಬರುವಾಗ ಊಟ ಕೇಳಿದ – ಜೀಪ್ ನಿಲ್ಲಿಸುತ್ತಿದ್ದಂತೆ ಸಿಬ್ಬಂದಿಗೆ ಹಲ್ಲೆ ಮಾಡಿ ಪರಾರಿಯಾದ ಆರೋಪಿ
Read the complete story at Public TV Kannada