ಸಾಗುವಾನಿ ಮರ ಅಕ್ರಮ ಕಡಿತ: ಬಾಳೆಹೊನ್ನೂರಿನಲ್ಲಿ ಪ್ರಕರಣ ದಾಖಲು
ಬಾಳೆಹೊನ್ನೂರು: ಸಾಗುವಾನಿ ನೆಡುತೋಪಿನಲ್ಲಿ ಅಕ್ರಮವಾಗಿ ಮರ ಕಡಿದ ಆರೋಪದ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳನ್ನು ಅರಣ್ಯ ಇಲಾಖೆ ದಾಖಲಿಸಿದೆ.ಮಾಗುಂಡಿ ವಲಯದ ಹಲಸೂರು ಮೀಸಲು ಅರಣ್ಯದ ಸರ್ವೆ ನಂಬರ್ 45ರ ನೇಮನಹಳ್ಳಿ ಸಾಗುವಾನಿ ನೆಡುತೋಪಿನ ಕೆಮ್ಮಣ್ಣುಮಟ್ಟು ಎಂಬಲ್ಲಿ ಮೂರು ಸಾಗುವಾನಿ, ಒಂದು ಶಿವನಿ ಜಾತಿಯ ಮರ ಕಡಿದು ನಾಟಾ ಮಾಡಿ ಮುಚ್ಚಿಟ್ಟಿರುವ ಕುರಿತು ಬಂದ ಖಚಿತ ಮಾ

ಬಾಳೆಹೊನ್ನೂರು: ಸಾಗುವಾನಿ ನೆಡುತೋಪಿನಲ್ಲಿ ಅಕ್ರಮವಾಗಿ ಮರ ಕಡಿದ ಆರೋಪದ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳನ್ನು ಅರಣ್ಯ ಇಲಾಖೆ ದಾಖಲಿಸಿದೆ.ಮಾಗುಂಡಿ ವಲಯದ ಹಲಸೂರು ಮೀಸಲು ಅರಣ್ಯದ ಸರ್ವೆ ನಂಬರ್ 45ರ ನೇಮನಹಳ್ಳಿ ಸಾಗುವಾನಿ ನೆಡುತೋಪಿನ ಕೆಮ್ಮಣ್ಣುಮಟ್ಟು ಎಂಬಲ್ಲಿ ಮೂರು ಸಾಗುವಾನಿ, ಒಂದು ಶಿವನಿ ಜಾತಿಯ ಮರ ಕಡಿದು ನಾಟಾ ಮಾಡಿ ಮುಚ್ಚಿಟ್ಟಿರುವ ಕುರಿತು ಬಂದ ಖಚಿತ ಮಾಹಿತಿ ಆಧರಿಸಿ, ಉಪವಲಯ ಅರಣ್ಯಾಧಿಕಾರಿ ಪತ್ತೆ ಮಾಡಿದ್ದಾರೆ.ಸ್ಥಳದಲ್ಲಿ 6.081 ಘನ ಮೀಟರ್ ನಾಟಾ ಪತ್ತೆಯಾಗಿದೆ. ಹಲಸೂರು ಗ್ರಾಮದ ರವೀಶ, ಜಕ್ಕಣಕ್ಕಿ ಗ್ರಾಮದ ಶ್ರೀಧರ, ದೇವಗೋಡು ಗ್ರಾಮದ ಸತ್ಯನಾರಾಯಣ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇನ್ನೊಂದು ಪ್ರಕರಣದಲ್ಲಿ ಸೀಕೆ ವಲಯದ ಮುದುಗುಣಿ ಕಿರು ಅರಣ್ಯ ಪ್ರದೇಶದ ಸರ್ವೆ ನಂಬರ್ 90ರಲ್ಲಿ 5 ಸಾಗುವಾನಿ ಮರಗಳನ್ನು ಕಡಿದು ಎಲೆಗಳ ನಡುವೆ ಮುಚ್ಚಿಟ್ಟಿದ್ದನ್ನು ಉಪ ವಲಯ ಅರಣ್ಯಾಧಿಕಾರಿ ಪತ್ತೆ ಹಚ್ಚಿದ್ದಾರೆ. ಸ್ಥಳದಲ್ಲಿ ಒಟ್ಟು 1.013 ಘ.ಮೀ ನಾಟಾ ಹಾಗೂ ಸೈಜ್ ವಶಪಡಿಸಿಕೊಳ್ಳಲಾಗಿದೆ. ಕೆ.ಎಂ.ಮೋಹನ್ ಕಿಚ್ಚಬ್ಬಿ, ಸುರೇಶ ಅಲಿಯಾಸ್ ಗುಂಡ, ಮೆಕಾನಿಕ್ ಬಾಳೆಹೊನ್ನೂರು ಹಾಗೂ ಹೇರೂರಿನ ಕುಮಾರ್, ದಿವೀನ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ನಾಟಾದ ಒಟ್ಟು ಮೌಲ್ಯ ₹6 ಲಕ್ಷದಿಂದ ₹7 ಲಕ್ಷ ಆಗಿರಬಹುದು ಎಂದು ಅಂದಾಜಿಸಲಾಗಿದೆ.ಎಸಿಎಫ್ ಮೋಹನ್ ಕುಮಾರ್ ನೇತೃತ್ವದಲ್ಲಿ ಆರ್ಎಫ್ಒ ಮಂಜುನಾಥ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ, ಸದಾಶಿವ, ಚೇತನ್, ನಾಗರಾಜ್, ರಜನೀಶ್, ನವೀನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260716-126-1818819131