ಅತ್ಯಾಚಾರ ಆರೋಪ | ಜಿಮ್ ಮಾಲೀಕನಿಗೆ ಕಠಿಣ ಶಿಕ್ಷೆಯಾಗಲಿ: ಸಂತ್ರಸ್ತ ಮಹಿಳೆ ಆಗ್ರಹ
ದಾವಣಗೆರೆ: ಅರೆನಗ್ನ ಚಿತ್ರಗಳನ್ನು ತೊರಿಸಿ ಬ್ಲ್ಯಾಕ್ಮೇಲ್ ಮಾಡಿ ಅತ್ಯಾಚಾರ ಎಸಗಿದ ‘ಪವರ್ ಫಿಟ್ನೆಸ್’ ಕೇಂದ್ರದ ಮಾಲೀಕ ಎಂ. ಇಸ್ಮಾಯಿಲ್ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಂತ್ರಸ್ತ ಮಹಿಳೆ ಆಗ್ರಹಿಸಿದರು.‘ಒಂದೂವರೆ ವರ್ಷದಿಂದ ‘ಪವರ್ ಫಿಟ್ನೆಸ್’ ಕೇಂದ್ರಕ್ಕೆ ವ್ಯಾಯಾಮ ಮಾಡಲು ಹೋಗುತ್ತಿದ್ದೆ. ತರಬೇತದಾರನೂ ಆಗಿದ್ದ ಮಾಲೀಕ ಇಸ್ಮ
ದಾವಣಗೆರೆ: ಅರೆನಗ್ನ ಚಿತ್ರಗಳನ್ನು ತೊರಿಸಿ ಬ್ಲ್ಯಾಕ್ಮೇಲ್ ಮಾಡಿ ಅತ್ಯಾಚಾರ ಎಸಗಿದ ‘ಪವರ್ ಫಿಟ್ನೆಸ್’ ಕೇಂದ್ರದ ಮಾಲೀಕ ಎಂ. ಇಸ್ಮಾಯಿಲ್ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಂತ್ರಸ್ತ ಮಹಿಳೆ ಆಗ್ರಹಿಸಿದರು.‘ಒಂದೂವರೆ ವರ್ಷದಿಂದ ‘ಪವರ್ ಫಿಟ್ನೆಸ್’ ಕೇಂದ್ರಕ್ಕೆ ವ್ಯಾಯಾಮ ಮಾಡಲು ಹೋಗುತ್ತಿದ್ದೆ. ತರಬೇತದಾರನೂ ಆಗಿದ್ದ ಮಾಲೀಕ ಇಸ್ಮಾಯಿಲ್, ಆಕಾಶ್ ಎಂಬ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದ. ಆಂಜನೇಯ ಸೇರಿದಂತೆ ಹಿಂದೂ ದೇವರ ಚಿತ್ರಗಳು ಜಿಮ್ನಲ್ಲಿದ್ದವು. ಇದರಿಂದ ಆತಂಕವಿಲ್ಲದೇ ತರಬೇತಿ ಪಡೆಯುತ್ತಿದ್ದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.‘ಜಿಮ್ನ ಬಟ್ಟೆ ಬದಲಿಸುವ ಕೊಠಡಿಯಲ್ಲಿ ರಹಸ್ಯವಾಗಿ ತೆಗೆದಿದ್ದ ಚಿತ್ರಗಳನ್ನು ತೋರಿಸಿ ಬ್ಲ್ಯಾಕ್ಮೇಲ್ ಮಾಡಲಾರಂಭಿಸಿದ. ಮರ್ಯಾದೆಗೆ ಅಂಜಿ ತರಬೇತುದಾರ ಹೇಳಿದಂತೆ ನಡೆದುಕೊಂಡೆ. ಈ ಸಂದರ್ಭದಲ್ಲಿಯೇ ಆತನ ನೈಜ ಹೆಸರು ಗೊತ್ತಾಯಿತು. ಒಂದು ದಿನ ರಾತ್ರಿ ಜಿಮ್ಗೆ ಕರೆಸಿಕೊಂಡು ಅತ್ಯಾಚಾರ ಎಸಗಿ ವಿಡಿಯೊ ಚಿತ್ರೀಕರಿಸಿಕೊಂಡ. ಇದನ್ನು ತೋರಿಸಿ ಮತ್ತೆ ಬ್ಲ್ಯಾಕ್ಮೇಲ್ ಮಾಡಿದನು’ ಎಂದು ಕಣ್ಣೀರು ಹಾಕಿದರು.‘ಜಿಮ್ಗೆ ಬರುವ ಮಹಿಳೆಯರು ಆಗಾಗ ಒಟ್ಟಿಗೆ ಸೇರಿ ಜನ್ಮದಿನಾಚರಣೆ ಆಚರಿಸಿಕೊಳ್ಳುತ್ತಿದ್ದೆವು. ಹೀಗೆ ಗುಂಪಾಗಿ ಹೋಟೆಲ್ಗಳಿಗೆ ಹೋದಾಗ ಆರೋಪಿ ಕೂಡ ಬರುತ್ತಿದ್ದ. ಇಲ್ಲಿ ತೆಗೆದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಪ್ಪು ಭಾವನೆ ಮೂಡಿಸಿದ್ದಾನೆ. ನನ್ನಂತೆ 15 ಮಹಿಳೆಯರಿಗೆ ಬ್ಲ್ಯಾಕ್ಮೇಲ್ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ’ ಎಂದು ದೂರಿದರು.‘ಆರೋಪಿ ಇಸ್ಮಾಯಿಲ್ ತಾಯಿ ನನ್ನ ಚಿತ್ರಗಳನ್ನು ಬಹಿರಂಗಪಡಿಸಿ ಮಾನಹಾನಿ ಮಾಡಿದ್ದಾರೆ. ಮಹಿಳೆಯೊಬ್ಬರ ಮಾನಕ್ಕೆ ಚ್ಯುತಿಯುಂಟಾಗುವ ರೀತಿಯಲ್ಲಿ ನಡೆದುಕೊಳ್ಳುವ ಅಧಿಕಾರವನ್ನು ಯಾರು ನೀಡಿದ್ದಾರೆ? ಅವರು ಬಿಡುಗಡೆ ಮಾಡಿರುವ ಆಡಿಯೊ ರೆಕಾರ್ಡ್ನಲ್ಲಿ ಇರುವುದು ನನ್ನ ಧ್ವನಿಯಲ್ಲ. ‘ಹನಿಟ್ರ್ಯಾಪ್’ ಮೂಲಕ ಮಾನ ಕಳೆದುಕೊಳ್ಳಲು ಯಾವ ಮಹಿಳೆ ಮುಂದೆ ಬರುತ್ತಾರೆ’ ಎಂದು ಪ್ರಶ್ನಿಸಿದರು.ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಧರ್, ಸಂಘಟನಾ ಕಾರ್ಯದರ್ಶಿ ಪಿ.ಸಾಗರ್, ಮುಖಂಡರಾದ ವೆಂಕಟೇಶ ನಾಯ್ಕ, ರಘು ಹಾಜರಿದ್ದರು.